Narahari teertha yativarya

Composer : Shri Karpara Narahari dasaru

By Smt.Shubhalakshmi Rao

ನರಹರಿ ತೀರ್ಥಯತಿವರ್ಯ ಇಷ್ಟೆಂದೊ
ರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ||ಪ||

ಸುರವಿನುತ ಪದಹರುಷ ತೀರ್ಥರ
ಕರಕಮಲ ಸಂಜಾತರೆನಿಸುತ
ಧರೆಯೊಳಗೆ ಸಿರಿ ಸಹಿತರಾ ಮನ
ಕರೆದು ಧರೆಸುರ ಜನಕೆ ತೋರಿದ ||ಅ.ಪ||

ಚರಿಸುತ ಬರಲು ಗಜಪುರದಿ ಪುರ-
ದರಸನಿಲ್ಲದಿರೆ ಯೋಚಿಸುತ ಕರಿಕರದಿ
ವರಮಾಲಿಕೆಯ ಕೊಡಲಾಕ್ಷಣದೀ ಯತಿ
ವರರ ಕಂಠದಲಿ ಹಾಕಲು ಜನ ಸಭದಿ
ಪುರಜನದ ಪ್ರಾರ್ಥನದಿ ದ್ವಾದಶ ವರುಷ
ಪ್ರಜರನು ಪೊರೆದು ಕೋಶದೊಳಿ-
ರುವ ಧರಿಜಾಸಹಿತ ರಾಮನ ತರಿಸಿ
ಪೊರಟರು ಕುದುರೆಯೇರುತ [೧]

ಆ ಮಹಾಮುನಿಪರು ತ್ವರದಿ ಬಂದು
ಶ್ರೀ ಮದಾನಂದ ತೀರ್ಥರ ಪದಯುಗದಿ
ಪ್ರೇಮ ವಂದನ ಪೂರ್ವಕದಿ ಸೀತಾ
ರಾಮಮೂರ್ತಿಯ ನೊಪ್ಪಿಸಿದರು ಕರದೀ
ಶ್ರೀ ಮನೋಹರ ನಂಘ್ರಿಯುಗಲವ
ಪ್ರೇಮದಿಂದಲಿ ಪೂಜಿಸುತಲಿರೆ
ಈ ಮಹಾತ್ಮರ ಕರೆದು ಕೊಟ್ಟರು
ನೇಮದಿಂದರ್ಚಿಸಿರಿ ಎನುತಲಿ [೨]

ಭಾಸುರ ಹೇಮ ಮಂಟಪದಿ ನಿತ್ಯ
ಶ್ರೀಸೀತಾ ರಾಮನರ್ಚಿಪರು ವೈಭವದೀ
ಭೂಸುರ ಕೃತ ವೇದ ಘೋಷದಿ ಮತ್ತೆ
ವ್ಯಾಸ ಸೂತ್ರಗಳ ನಾಮಾವಳಿ ಪಠಣದಿ
ದೇಶ ದೇಶಗಳಲ್ಲಿ ಚರಿಸುತ
ತೋಷ ತೀರ್ಥರ ಮತವ ಬೋಧಿಸಿ
ಶ್ರೀಶ ಕಾರ್ಪರ ವಾಸ ಸಿರಿ ನರ
ಕೇಸರಿಗೆ ಪ್ರಿಯದಾಸರೆನಿಸಿದ [೩]


narahari tIrthayativarya iShTeMdo
rNisaloSave nimmaya divya cariya ||pa||

suravinuta padaharuSha tIrthara
karakamala saMjAtarenisuta
dhareyoLage siri sahitarA mana
karedu dharesura janake tOrida ||a.pa||

carisuta baralu gajapuradi pura-
darasanilladire yOcisuta karikaradi
varamAlikeya koDalAkShaNadI yati
varara kaMThadali hAkalu jana saBadi
purajanada prArthanadi dvAdaSa varuSha
prajaranu poredu kOSadoLi-
ruva dharijAsahita rAmana tarisi
poraTaru kudureyEruta [1]

A mahAmuniparu tvaradi baMdu
SrI madAnaMda tIrthara padayugadi
prEma vaMdana pUrvakadi sItA
rAmamUrtiya noppisidaru karadI
SrI manOhara naMGriyugalava
prEmadiMdali pUjisutalire
I mahAtmara karedu koTTaru
nEmadiMdarcisiri enutali [2]

BAsura hEma maMTapadi nitya
SrIsItA rAmanarciparu vaiBavadI
BUsura kRuta vEda GOShadi matte
vyAsa sUtragaLa nAmAvaLi paThaNadi
dESa dESagaLalli carisuta
tOSha tIrthara matava bOdhisi
SrISa kArpara vAsa siri nara
kEsarige priyadAsarenisida [3]

Leave a Reply

Your email address will not be published. Required fields are marked *

You might also like

error: Content is protected !!