Composer : Shri Gopala dasaru
ಮುಖ್ಯಕಾರಣ ವಿಷ್ಣು ಸರ್ವೇಶ
ಸತ್ಯ ಸಖ್ಯರ ಪೋಷ್ಯ ಸರಸಿಜಾದ್ಯಮರೇಶ||ಪ||
ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ ,
ತಿಳಿವ ವಸ್ತುವು ನೀನೆ ತೀರ್ಥಪದನೆ
ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ
ತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧||
ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆ
ಗುಣ ದೇಶ ಕಾಲ ಕರ್ಮದನು ನೀನೆ
ತನು ಕರಣ ವಿಷಯ ಮಮ ಜೀವ ಸ್ವಾಮಿಯು ನೀನೆ
ಅಣುಮಹಜ್ಜಗದಿ ಬಹಿರಂತರಾತ್ಮಕನೆ ||೨||
ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭ
ಮಹಿ-ದಾಸ ದತ್ತಾತ್ರಯಾದ್ಯಮಿತ ರೂಪ
ಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದು
ಪೋಷಕನು ಆದೆ ಕೃಪಾಳುವೆ ಶ್ರೀಶ ||೩||
ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ-
ಚೇತನನು ಸರಿ ನೀನು ಸುಮ್ಮನಿರಲು
ಯಾತರವ ನಾನಯ್ಯ ನಿನ್ನಧೀನವು ಎಲ್ಲ
ಚೇತನಾಹುದೊ ನೀ ಚಲಿಸೆ ಚಲಿಸುವೆನು ||೪||
ತಿಳಿ ಎನ್ನುವುದಕಾಗಿ ತಿಳಿಯತಕ್ಕವ ನೀನೆ
ತಿಳಿಸೊ ಸೋತ್ತಮರೆಲ್ಲ ತಿಳಿದ ಶೇಷ
ತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿ
ಚಲಿಸದಲೆ ಮನ ನಿಲಿಸೊ ಗೋಪಾಲವಿಠಲ ||೫ ||
ಮುಖ್ಯಕಾರಣ ವಿಷ್ಣು ಸರ್ವೇಶ
ಸತ್ಯ ಸಖ್ಯರ ಪೋಷ್ಯ ಸರಸಿಜಾದ್ಯಮರೇಶ
ಮುಖ್ಯಕಾರಣ ವಿಷ್ಣು ಸ್ವಾತಂತ್ರನೆ ಸತ್ಯ ..
mukhyakAraNa viShNu sarvEsha
satya sakhyara pOShya sarasijAdyamarEsha||pa||
tiLiveMbuva nIne tiLidu tiLisuva nIne ,
tiLiva vastuvu nIne tIrthapadane
tiLidudake phala nIne tiLiyagoDadava nIne
tiLiva svataMtra ninnadu tiLiso sarvEsha ||1||
dhvani varNa ubhaya shabdada vAcyanu nIne
guNa dEsha kAla karmadanu nIne
tanu karaNa viShaya mama jIva svAmiyu nIne
aNumahajjagadi bahiraMtarAtmakane ||2||
vyAsakapila hayAsya dhanvaMtri vRuShaBa
mahi-dAsa dattAtrayAdyamita rUpa
Isu rUpadi j~jAnavadhikArigaLigoredu
pOShakanu Ade kRupALuve shrIsha ||3||
cEtananu nAnu nI cEShTe mADisalAga-
cEtananu sari nInu summaniralu
yAtarava nAnayya ninnadhInavu ella
cEtanAhudo nI calise calisuvenu ||4||
tiLi ennuvudakAgi tiLiyatakkava nIne
tiLiso sOttamarella tiLida shESha
tiLivalli tiLipalli tiLuvaLike nInAgi
calisadale mana niliso gOpAlaviThala ||5 ||
muKyakAraNa viShNu sarvEsha
satya sakhyara pOShya sarasijAdyamarEsha
muKyakAraNa viShNu svAtaMtrane satya ..
Leave a Reply