Composer : Shri Abhinavapranesha dasaru
ಸತ್ಯನಾರಾಯಣ ಕಥಾಸಾರ ಸುಳಾದಿ
ಧ್ರುವ ತಾಳ
ಸತ್ಯನಾರಾಯಣ ವ್ರತವನ್ನು ಮಾಳ್ಪುದು ಸತ್ಯವಂತರಾಗಿ
ನಿತ್ಯದಲ್ಲಿ | ಸತ್ಯವ್ರತವಿದು ಮುಕ್ತಿಗೆ ಸೋಪಾನ | ಮರ್ತ್ಯರ ಭವ
ಬಂಧ ವಿನಾಶನ || ಸತ್ಯವ್ರತರಾದ ಶೌನಕಾದಿಗಳಿಗೆ |
ಬಿತ್ತರಿಸಿದ ಸೂತ ನಿಮಿಷ ವನದಿ || ಚಿತ್ತಜ ಮಾತೆ ವಿಧಿ
ಚಿತ್ತಜಾರಾತಿಮುಖ | ತತ್ವ ದೇವತೆಗಳು ಬಿಡದೆ ನಿತ್ಯ |
ಸತ್ಯದೇವನ ವ್ರತ ಮಾಡುತ ಸಂತತ | ಅತ್ಯಂತ ಸುಖ
ಪೂರ್ಣರಾಗಿಹರು || ಉತ್ತಮ ನರ ದೇಹ ನೈಮಿಷಾರಣ್ಯವು |
ಸೂತ್ರ ನಾಮಕ ಪ್ರಾಣ ಸೂತಾಚಾರ್ಯ | ನಿತ್ಯೆಲ್ಲರೊಳು ನೆಲಸಿ
ಹಂಸ ಮಂತ್ರವ ಜಪಿಸಿ | ಸತ್ಯೋಪಾಸನೆ ಮಾಳ್ಪ ಗಾಳಿ ದೇವ ||
ಉತ್ತಮ ಪ್ರಾಣನ ಅವತಾರ ತ್ರಯ ಚರಿಯ | ಹತ್ತೇಳು ವಿಂಶತಿ- ಗ್ರಂಥ ಮೂಲ ಮರ್ಮ |
ನಿತ್ಯದಿ ಕುಲಗುರು ಸುಖತೀರ್ಥರೆಂದು
ತಿಳಿದು | ಸತ್ಯದೇವನ ವ್ರತ ಮಾಡಿರಯ್ಯ | ಸತ್ಯಾಭಿನವ
ಪ್ರಾಣೇಶ ವಿಠ್ಠಲ ವಲಿದು | ಸತ್ಯಲೋಕವನೀವ ಸತ್ಯವತಿ
ತನಯ || ೧ ||
ತಾಳ:ಮಟ್ಟ
ಒಂದಿನ ವೈಕುಂಠ ಮಂದಿರದಲಿ ಶ್ರೀಗೋ | ವಿಂದನು
ಪೀಠದಲಿ ಇಂದಿರೆಯೊಡಗೂಡಿ | ನಂದದಿ ಕುಳಿತಿರಲು ಬಂದನು
ದೇವ ಋಷಿ | ಮಂದರ ಧರ ಹರಿಗೆ ಮಂದಧಿ ತನಯಳಿಗೆ |
ವಂದಿಸಿ ಪದಗಳಿಗೆ ದ್ವಂದ್ವ ಕರವ ಮುಗಿದು | ಮಂದಾಕಿನಿ
ಜನಕ, ದಂದಶೂಕ ತಲ್ಪ | ಇಂದು ಭೂಮಿಯಲ್ಲಿ ಬಂಧುರ ಕಲಿ
ಬಾಧೆ | ಯಿಂದ ಸುಜನರೆಲ್ಲ, ಬೆಂದು ಭವದಿ ನಿತ್ಯ |
ಬಂಧಿತರಾಗಿಹರು ಬಂಧ ವಿಮೋಚನದ | ಸುಂದರ
ಪಥತೋರು ಎಂದು ತುತಿಸೆ ಮುನಿಯು | ನಂದಜ ಅಭಿನವ
ಪ್ರಾಣೇಶ ವಿಠ್ಠಲನು | ಮಂದಹಾಸದಿ ನುಡಿವ
ಮೊಮ್ಮಗಿಂತೆಂದು || ೨ ||
ತಾಳ: ತ್ರಿವಿಡಿ
ಲೋಕೇಶ ಸುತ ನಿನ್ನ ವಾಕು ಬಣ್ಣಿಪೆ ನೋಡು | ಲೋಕೋಪಕಾರದ
ಮನವ ಕಂಡು || ಶ್ರೀಕರ ಶ್ರೀ ಸತ್ಯನಾರಾಯಣ ವ್ರತ |
ವೇಕೋಪಾಯವು ಇದಕೆ ಕಲಿ ಯುಗದಿ || ಭೀಕರ ಭವಬಂಧ
ಶೋಕತಾಪಗಳೆಲ್ಲ | ಏಕಕಾಲಕೆ ಬೆಂದು ಪೋಪವಯ್ಯ ||
ರಾಕಬ್ಜ ತಿಥಿಯಮವಾಸ್ಯೆ ಸಂಕ್ರಮಣದಿ | ಬೇಕಾದ
ಸಮಯದಿ ಮಾಳ್ಪುದಯ್ಯ || ಮಾಕಾಂತ ಶ್ರೀ
ಸತ್ಯನಾರಾಯಣನಿಗೆ | ನಾಕು ನಾಕು ಪೂಜೆ ಮಾಡುತಲಿ ||
ಶ್ರೀಕ, ಪವನ, ವಾಣಿ ದ್ವಯರನುಗ್ರಹ ಪಡೆದು | ನಾಕೊಂದು
ಕೋಶ ವಿಜ್ಞಾನವರಿದು || ಆಕಳ ಘೃತ ಕ್ಷೀರ ಗೋಧೂಮ
ಚೂರ್ಣವ | ಸಾಕಷ್ಟು ಶರ್ಕರವೆರಸಿ ಕದಳೀ ಫಲ ||
ಪಾಕವಗೈದು ಶ್ರೀ ಕೃಷ್ಣಾರ್ಪಣವೆನ್ನೆ |
ಮಾಕಳತ್ರಾಭಿನವ ಪ್ರಾಣೇಶ ವಿಠ್ಠಲವಲಿವ || ೩ ||
ತಾಳ: ಅಟ್ಟ
ಸತ್ಯಮಾಡುವ ಪ್ರತಿಯೊಬ್ಬ ಮಾನವ | ಅತ್ಯಂತ ಹರುಷದಿ
ಸ್ವಜನರಿಂದೊಡಗೂಡಿ | ಸತ್ಯನಾರಾಯಣ ವ್ರತವನ್ನು
ಮಾಡಲು | ಮರ್ತ್ಯತಾಪಗಳೆಲ್ಲ ಪರಿಹಾರ ಪರಿಹಾರ |
ಸತ್ಯಾಭಿನವ ಪ್ರಾಣೇಶ ವಿಠ್ಠಲನು | ನಿತ್ಯಾನಂದವೀವ
ಮೃತ್ಯುಂಜಯ ತಾತ || ೪ ||
ತಾಳ:ಆದಿ
ನೀರಜನಾಭನಿಂದುಪದೇಶ ಪಡೆಯುತ | ನಾರದಮುನಿ ಹರಿ
ಸಿರಿ ಪದಕೆರುಗುತ | ಧಾರುಣಿಯೊಳು ಸಂಚರಿಸುತ ಸಂತತ |
ಬೀರಿದ ನೀವ್ರತಕಥಾಮಹಿಮೆಗಳ | ಸೂರಿ ಸುಜನರೆಲ್ಲ ಪರಮ
ಹರುಷದಿಂದ | ಆರಾಧಿಸಿ ಸಿರಿ ಸತ್ಯದೇವ ಪದ | ಚಾರು
ಸುಖಂಗಳ ಪಡೆಯುತಲಂತ್ಯದಿ | ಈರ ಪ್ರೀತಭಿನವ ಪ್ರಾಣೇಶ
ವಿಠ್ಠಲನ | ಮೂರುತಿ ಕಂಡರು ಹೃದಯಾಗಸದಿ || ೫ ||
ತಾಳ: ಜತಿ
ಯಜ್ಞಾಭಿನವ ಪ್ರಾಣೇಶ ವಿಠ್ಠಲನ |
ವಿಜ್ಞಾನವರಿಯುವದೆ ಪ್ರಥಮೋಧ್ಯಾಯ || ೬ ||
ಇತಿ ಶ್ರೀ ಸತ್ಯನಾರಾಯಣ ಕಥಾ ಪ್ರಥಮೋಧ್ಯಾಯಃ
ಶ್ರೀ ಸತ್ಯನಾರಾಯಣ ಕಥಾ ದ್ವಿತಿಯೋಧ್ಯಾಯ ಸುಳಾದಿ
ತಾಳ: ಝಂಪೆ
ಭರತ ಖಂಡದ ಪುಣ್ಯ ಭೂಮಿಯೊಳು ಶೋಭಿಸುವಾ ವರ
ಕ್ಷೇತ್ರ ಶ್ರೀ ಕಾಶಿ ಪಟ್ಟಣದೊಳು ಇರುತಿರ್ದ ದ್ವಿಜನೋರ್ವ
ಸತ್ಕರ್ಮನಿರತನು ಉರುತರದ ದಾರಿದ್ರ್ಯವನುಭವಿಸುತ್ತ ನಿರುತ
ಭಿಕ್ಷಾನಕ್ಕೆ ತೊಳಲುತ್ತ ಬಳಲುತ್ತ ತಿರುಗುತಿರ್ದನು ಗ್ರಾಮ
ಗ್ರಾಮಂಗಳ ಧರಣಿ ಸುರನೀ ದುಃಖ ಪರಹರಿಸಲೋಸುಗ
ಕರುಣಾವಾರಿಧಿ ಸತ್ಯನಾರಾಯಣ ವರವೃದ್ಧ ಬ್ರಾಹ್ಮಣ
ಸುರೂಪವನು ಧರಿಸಿಭೂ ಸುರಗೆ ಕಾಣಿಸಿಕೊಂಡ ಕರುಣಾರ್ಣವ
| ಸಿರಿ ಮನೋಹರ ಚರಣ ಶರಧಿ ಭವ ತಾರಣ | ಕರಿವರದ
ಅಭಿನವ ಪ್ರಾಣೇಶ ವಿಠ್ಠಲ
ತಾಳ: ಮಟ್ಟ
ವೃಧ್ಧ ಮಹೀಸುರನ ಕಾಣುತಲೀ ದ್ವಿಜನು |
ಎದ್ದರೆಗಿದಪದಗೆ ಬದ್ಧ ಭಕುತಿಯಿಂದ | ಬದ್ಧಾಂಜಲಿಯಾಗಿ
ಗದ್ಗದಕಂಠದಲಿ | ಉದ್ಧರಿಸುವುದು ದಾರಿದ್ರ್ಯವ ಕಳೆದು |
ಮಧ್ವಪ ಅಭಿನವ ಪ್ರಾಣೇಶ ವಿಠಲ ಪಾದ | ಪದ್ಮವ
ತೋರುವುದೆಂದು ಪ್ರಾರ್ಥಿಸಿದ ನಯದಿ || ೨ ||
ತಾಳ:ತ್ರಿವಿಡಿ ನಾರಾಯಣ ಪೇಳ್ದ ಧಾರುಣಿಸುರ ಕೇಳೋ |
ದಾರಿದ್ರ್ಯ ಭವರೋಗಾವ ಅಗಾಧವಾದುದು || ಶೌರಿ ಶ್ರೀ
ಸತ್ಯನಾರಾಯಣ ವ್ರತವೆ | ಮೀರಿದುಪಾಯವು ಕಲಿ ಕಾಲದಿ ||
ಚಾರು ಸದ್ಭಕ್ತಿಯಿಂದಾಚರಿಸುವದೆಂದು | ಸಾರಿ ಪೇಳಿದನೆಲ್ಲ
ವ್ರತ ವಿಧಾನವು || ಮಾರಮಣಭಿನವ
ಪ್ರಾಣೇಶವಿಠ್ಠಲನು | ತೋರಿ ನಡೆದನು ತನ್ನ ಕ್ಷೀರ
ಸಾಗರಕೆ || ೩ ||
ತಾಳ:ಅಟ್ಟ
ವಿಪ್ರನಿದನು ಕೇಳಿ ಪರಮಾದರದಿಂದ | ಕ್ಷಿಪ್ರದಿ ಬಂಧು
ಬಾಂಧವರೊಡಗೂಡುತ | ಪಕ್ಷೀಂದ್ರ ಸ್ಯಂದನ
ಸತ್ಯನಾರಾಯಣ | ನ ಪ್ರತಿ ವ್ರತವನ್ನು ಮಾಡಿದ ಪಾಡಿದ |
ಅಪ್ರತಿ ಅಭಿನವಪ್ರಾಣೇಶವಿಠ್ಠಲನ | ಅಪ್ರಾಕೃತ
ಸತ್ಯಪುರವನೆ ಪಡೆದ | ತಾಳ:ಆದಿ ಕಾಷ್ಠ ಕ್ರೀತ
ದ್ವಿಜನೋರ್ವನು ಪೂಜಿಸಿ | ಶೇಷ್ಠ ಕಥಾಮೃತ
ವಿವರಗಳಾಲಿಸಿ | ನಿಷ್ಠೆಯಿಂದ ಸತ್ಯದೇವನ ಪೂಜಿಸಿ |
ಶಿಷ್ಟರಿಂದೊಡಗೂಡಿ ವ್ರತವಾಚರಿಸುತ | ಸೃಷ್ಟಿಯೊಳತಿ
ಸುಖವನುಭವಿಸುತ ಪರ | ಮೇಷ್ಠಿನುತ ಅಭಿನವ
ಪ್ರಾಣೇಶವಿಠ್ಠಲನ | ಪಟ್ಟಣ ಸೇರಿದನತಿ ಸುಖಪಡೆದ
ತಾಳ: ಜತೆ
ವಾಸುದೀವಾಭಿನವ ಪ್ರಾಣೇಶವಿಠ್ಠಲನ |
ದಾಸರೊಳು ಸದ್ಭಕ್ತಿ ದ್ವಿತಿಯೋಧ್ಯಾಯ
ಇತಿ ಶ್ರೀ ಸತ್ಯನಾರಯಣ ಕಥಾದ್ವಿತೀಯೋಧ್ಯಾಯ
ತೃತಿಯೋಧ್ಯಾಯಯಃ ಸುಳಾದಿ
ತಾಳ: ಧ್ರುವ
ಪೊಡವಿ ಪಾಲಕನುಲ್ಕಾಮುಖನೆಂಬೊ ರಾಜ ತನ್ನ |
ಮಡದಿಯಿಂದೊಡಗೂಡಿ ಪರಿವಾರ ಸಹ ನದಿ | ದಡದಲ್ಲಿ
ಸಿರಿಸತ್ಯನಾರಾಯಣಾರ್ಚನ |
ಸಡಗರದಿಂದಲಾಚರಿಸುತಿರಲು ||
ತೊಡೆಜಾತ ವಣಜಿಗ ಸಾಧುನಾಮಕನೋರ್ವ | ದೃಢಭಕ್ತಿ
ರಹಿತನು ಹರಿ ಹರಿದಾಸರಲ್ಲಿ | ವಡವೆ ಸಹಿತ ನದಿ ದಡದಲ್ಲಿ
ಬಂಧಿಸಿ | ನಡೆತಂದು ಭೂಪಗೆ ಪೊಡಮಟ್ಟ ವಿನಯದಿ |
ನುಡಿದನೀ ವ್ರತವೇನು? ಮಾಡುವ ಬಗೆಯೇನು? ಪೊಡವಿಪ ಇದರ
ವಿಧಾನವೇನು? ಬಿಡೆದೆನಗರುಹೆಂದು ದೈನ್ಯದಿ ಪ್ರಾರ್ಥಿಸೆ |
ಕಂಡು ಹರುಷದಿ ನೃಪ ನುಡಿದನಿಂತು | ಜಡಜಾಕ್ಷ
ಶ್ರೀಸತ್ಯದೇವನ ವ್ರತವಿದು | ಪಡೆವಗೋಸುಗ ಸಂತಾನ
ಸೌಭಾಗ್ಯವ | ಬಿಡದೆ ಮಾಡುವೆನಯ್ಯ ನಿಷ್ಠೆಯಿಂದ |
ದೃಡ ಮನದಿಂದಲಾಚರಿಸುವುದೀ ವ್ರತ | ಗಡನೆ
ಪೇಳಿದನೆಲ್ಲ ವ್ರತ ವಿಧಾನ ||
ನುಡಿ ಕೇಳಿ ವಣಜಿಗ ಹರುಷ ಮಾನಸನಾಗಿ |
ಒಡನೇನಗಾಪತ್ಯವಾದರೆ ಶ್ರೀಸತ್ಯ | ಮೃಡಗೇಯ ಅಭಿನವ
ಪ್ರಾಣೇಶ ವಿಠಲ ವ್ರತ ||
ಧೃಡ ಮನದಿ ಮಾಡುವೆನು ಬಿಡದೆ ನಾನು | ತಾಳ:ಮಟ್ಟ
ಪುರಕೆ ಬಂದು ಸಾಧುಸತಿ ಲೀಲಾವತಿಗೆ | ಅರುಹಿದ ಸಂತಸದಿ
ಇರುತಿರೆ ಕೆಲಕಾಲ | ನರಹರಿ ಕೃಪೆಯಿಂದ ಹರುಷ ತೋರಿತು
ಗೃಹದಿ | ಸರಿ ಮಾಸದಿ ಶುಭದಿವಸ ಕನ್ಯಾ ರತ್ನ | ಪರಮ
ಕಲಾವತಿ ಜನಿಸಲು ವಣಜಿಗನು | ಮರೆತು ಬಿಡಲು ವ್ರತವ
ಗರತಿಯು ಎಚ್ಚರಿಸೆ | ತರಳೆಯ ಮದುವೆಯಲಿ
ಮಾಡುವೆನೆಂತೆಂದ | ಪರಿಣಯ ಕಾಲಕ್ಕೂ ಮಾಡಲಿಲ್ಲ ವ್ರತವ
| ಖರಮದ ವೈಶ್ಯನಿಗೆ ಭ್ರಷ್ಟ ಪ್ರತಿಜ್ಞನಿಗೆ | ಉರುತರ
ದುಃಖಗಳು ಪ್ರಾಪ್ತವಾಗಲೆಂದು | ಹರಿಯಭಿನವ
ಪ್ರಾಣೇಶವಿಠಲ ನುಡಿದ ||
ತಾಳ:ತ್ರಿವಿಡಿ
ಕೆಲಕಾಲದಲಿ ಸಾಧು ಅಳಿಯನಿಂದೊಡಗೂಡಿ | ಗಳಿಸಬೇಕು
ಧನ ವಿಪುಲವೆಂದು || ಜಲಧಿ ತಟದ ರತ್ನಸಾರ ಪುರಕೆ
ಬಂದು | ನೆಲಸುತ ಬಹುವಿತ್ತಗಳಿಸಿದನು |
ಇಳೆಯಾಣ್ಮನಾಗಾರದಿಂದ ತಸ್ಕರಿಸಿದ | ಬೆಲೆಯುಳ್ಳ ವಸ್ತು
ವೈಶ್ಯನ ಗೃಹದ || ಬಳಿಯಲ್ಲಿ ಕಾಣುತ ರಾಜ ಭಟರು ಬಂದು
| ಎಳೆದೊಯ್ದರೀರ್ವರ ಬಂಧಿಸುತ | ಹಲವು ಪರಿಯಲಿಂದ
ಪ್ರಾರ್ಥಿಸೆ ಕೇಳದೆ | ಬಲು ಬಂಧದಿಟ್ಟರು ಕಾರಾಗೃಹದಿ ||
ಇಳಿಜಾಣ್ಮನಭಿನವ ಪ್ರಾಣೇಶ ವಿಠ್ಠಲನ | ಸಲೆ
ಮಾಯದಿಂದ ಬಂಧಿತರೆಲ್ಲರು ||
ತಾಳ:ಅಟ್ಟ
ಇತ್ತ ಲೀಲಾವತಿ ಮನೆಯೊಳಿದ್ದುದೆಲ್ಲ | ವಿತ್ತ ಧನ ಧಾನ್ಯ
ಕಳುವಾಗಿ ಪೋಗಲು | ಅತ್ಯಂತ ದುಃಖದಿ ಪುತ್ರಿಯಿಂದೊಡಗೂಡಿ |
ನಿತ್ಯ ಭಿಕ್ಷಾನ್ನದಿ ಉಪಜೀವಿಸುತಲಿರೆ | ಮತ್ತು
ಕಲಾವತಿಯೊಂದಿನ ಕ್ಷುಧೆಯಿಂದ | ಪೃಥ್ವಿಸುರನ
ಮನೆಗೈದಿರಲಾಗಲ್ಲಿ | ಸತ್ಯದೇವನ ಪೂಜೆ ಯಾಗುವದನು
ಕಂಡು | ಭಕ್ತಿಯಿಂ ಕಥೆ ಕೇಳಿ ಪ್ರಾಸದವನು ಕೊಂಡು |
ಹೊತ್ತಾಗಿ ಬಂದಿಹ ಮಗಳ ಕಂಡು ತಾಯಿ | ಎತ್ತಪೋಗಿದ್ದಿಯ ಈ
ದಿನ ಬಹು ಕಾಲ | ಚಿತ್ತದೊಳೇನಿದೆ ಕರುಣಿಸಿ ಪೇಳೆನೆ |
ಸತ್ಯದೇವನ ವ್ರತ ವೃತ್ತಾಂತವರುಹಲು | ಆತ್ಯಂತ ದೈನ್ಯದಿ
ಬೇಡಿಕೊಂಡಳು ಎನ್ನ- | ಭರ್ತ ಜಾಮಾತರ ಅಪರಾಧ ಮನ್ನಿಸು
| ಇತ್ತ ಕಡೆಗೆ ಬೇಗ ಬರುವಂತೆ ಕರುಣಿಸು | ಶಕ್ತ್ಯಾನುಸಾರದಿ
ಪೂಜಿಸುವೆನು ದೇವ | ಮತ್ತು ಮತ್ತು ತುತಿ ಮಾಡಲು ಪಾಡಲು |
ಭಕ್ತ ವತ್ಸಲ ಸತ್ಯನಾರಾಯಣನಿತ್ತ | ಪೃಥ್ವಿಪತಿಯ
ಸ್ವಪ್ನದಲಿ ಬಂದು ಪೇಳಿದ | ಮತ್ತೊಂದು ವಿಚಾರ ಮಾಡದೆ
ವೈಶ್ಯರ | ಮುಕ್ತರ ಮಾಡು ಧನವನೆಲ್ಲವ ಕೊಡು |
ಮತ್ತಿದರೊಳು ತಡವಾದರೆ ನಿನ್ನಯ | ಸತ್ತಿಗಿ ಸೌಭಾಗ್ಯ
ನಾಶವಾಗುವುದೆಂದು | ಸತ್ಯಾಭಿನವ ಪ್ರಾಣೇಶವಿಠಲ
ನುಡಿದ || ೪ ||
ತಾಳ: ಆದಿ
ಗರುಡಾಗ್ರಜಕೆ ನೃಪವರನೇಳುತ | ಹರಿಯನು ಸ್ಮರಿಸುತ
ತ್ವರಿತದಿ ಸಭೆಯನು | ನೆರಸಿದ ಕನಸಿನ ಪರಿಯನು ಪೇಳಿದ |
ಕರೆಸಿದ ವೈಶ್ಯರ ಹರಿಸಿದ ಬಂಧನ | ಹರುಷದಿ ಮಂಗಲ
ಸ್ನಾನವಗೈಸಿದ | ಎರಡರಷ್ಟು ಧನವಿತ್ತವ ನೀಡಿದ |
ಪರಿಪರಿಯಲಿ ಸಂತಯಿಸಿ ದನವರಿಗೆ | ಹರಿಯಭಿನವ
ಪ್ರಾಣೇಶವಿಠ್ಠಲನ | ಸ್ಮರಿಸುತ ಪೋಗಿರೆಂದು ಹರಸಿದ
ನೃಪನು || ೫ || ತಾಳ:ಜತೆ ವಿಷಯಾಸೆ ಉಳ್ಳನಕ ವಸುದೇವ
ಸುತನೊಲಿಯ | ವಸುಧೀಶ ಅಭಿನವ ಪ್ರಾಣೇಶ ವಿಠಲರಾಯ || ೬
||
ಇತಿ ಶ್ರೀ ಸತ್ಯನಾರಾಯಣ ಕಥಾ ತೃತಿಯೋಧ್ಯಾಯಃ
ಸಂಪೂರ್ಣಃ.
ಶ್ರೀ ಸತ್ಯನಾರಯಣ ಕಥಾ ಚತುರ್ಥೋಧ್ಯಾಯಃ ಸುಳಾದಿ
ತಾಳ: ಧ್ರುವ
ಮಂದಜ ಕೇತು ಭೂಪಗೊಂದಿಸಿ ವಿನಯದಿ | ಅಂದದಿ ಭೂಸುರ
ವೃಂದಕ್ಕೆ ಶಿರಬಾಗಿ | ಬಂದಿಹ ಧನರಾಶಿ ಹೊಂದಿಸಿ
ನೌಕೆಯಲ್ಲಿ | ಮಂದಧಿಯೊಳು ತನ್ನ ಮಂದಿರ ಮಾರ್ಗವಾಗಿ |
ಹೊಂದಿ ಕೊಂಡಳಿಯನಿಂದ ಸಾಧು ನಡೆದ ||
ಬಂದಿತು ಮಧ್ಯಾಹ್ನ ಬಂಧಿಸಿ ನಾವೆತಟದಿ | ಸಂಧ್ಯಾತಿ
ಕರ್ಮಗಳಂದದಿಗೈಯುತಿರೆ | ಇಂದಿರೇಶನು ಯತಿಯಂದದಿ
ರೂಪತಾಳಿ | ಬಂದು ಕೇಳಿದನತಿ ಮಂದಹಾಸದಿ ನಗುತ |
ಬಂಧಿತವಾದ ನಿಮ್ಮ ನೌಕೆಯೋಳೇನಿದೆ | ಎಂದು ಕೇಳುವ
ನುಡಿಯಾಲಿಸಿ ವೈಶ್ಯನು | ಅಂಧ ಮದಧಿ ನುಡಿದ ಕುಹಕ
ತನದಿ || ಸಂಧಿಸಿ ಹಣ ವಿತ್ತವೆತ್ತ ಬೇಕೆನ್ನುವಿಯಾ | ಬಂದ
ಹಾದಿಗೆ ಸುಂಕವಿಲ್ಲಾ ಕಾಣೋ | ಸಂದೇಹವೇಕೆ ನಮ್ಮ
ನಾವಿಕೆಯು ಸಂಪೂರ್ಣ | ಇಂಧನ ಲತ ಪತ್ರ-ಪುಷ್ಪ
ಫಲಾದಿಗ- | ಳಿಂದ ತುಂಬಿಹುದಯ್ಯ ಸಟಿಯಲ್ಲವು ||
ಮಂದನ ಕಟುವಾಕು ಕೇಳುತ ಶಾಂತದಿ | ಇಂದು
ಧರನತಾತ, ಗಂಧವಾಹನ ಪಿತ |
ಸಿಂಧುಶಯ್ಯನಭಿನವ ಪ್ರಾಣೇಶ ವಿಠಲಗೋ | ವಿಂದ
ನುಡಿದ ನೀನಂದಂತೆಯಾಗಲಿ |
ತಾಳ: ಮಟ್ಟಾ
ಮುಗಿಸಿ ಸಂಧ್ಯ ಕರ್ಮ ನಗುತತಿ-ವಣಜಿಗನು | ಲಗುಬಗೆಯಲಿ
ಬಂದು ನೌಕೆಯ ನೀಕ್ಷಿಸಲು | ಅಗಣಿತ ಧನರಾಶಿ
ಮಾಯವಾಗಿಯಲ್ಲಿ ಬಗೆ ಬಗೆ ಲತಾ ಪತ್ರ ಫಲ-ಪುಷ್ಪಗಳಿರುವ
| ಬಗೆಯನರಿತು ಸಾಧು ಬಹು ವ್ಯಾಕುಲದಿಂದ | ದುಗುಡ
ಮನದಿ ಧರೆಗೆ ಉರುಳಿದ ಶೋಕದಲಿ ||
ಹಗರಣವನು ಕಂಡು ವೈಶ್ಯನಳಿಯ ಜವದಿ | ಬಿಗಿದೆಬ್ಬಿಸಿ
ನಿಲಿಸಿ ಪೇಳುವನೀ ತೆರದಿ | ನಗೆಯಾಡಿದ ಫಲವು ಮಸ್ಕರಿಯೊಡನೆ
ಇದು | ಮಿಗೆ ಸಂಶಯ ಸಲ್ಲ ಆ ಯತಿಯೇ ಸರ್ವ | ಜಗಸ್ಥಿತಿ-ಲಯ
ಕರ್ತ ಆತನಲ್ಲಿಗೇ ಪೋಗಿ | ಮುಗಿದು ಕರವ ನಯದಿ ಕ್ಷಮೆ
ಕೋರುವದೊಳಿತು | ಯುಗಪತಿ-ಅಭಿನವ ಪ್ರಾಣೇಶವಿಠಲ ಚರಣ
| ಯುಗಲ ಮೊರೆಹೊಕ್ಕಲ್ಲದೆ ಈ ಕ್ಲೇಶ ಬಿಡದು || ೨ ||
ತಾಳ:ತ್ರಿವಿಡಿ
ಕೇಳಿ ಜಾಮಾತನ ವಾಣಿಯ ವೈಶ್ಯನು | ತಾಳುತ ಶಾಂತಿಯ ಕರ
ಜೋಡಿಸಿ || ಶೀಲ ಸುವ್ರತಿ ಯತಿ-ಸನ್ನಿಧಿಗೈತಂದು | ಮೇಲು
ಸಾಷ್ಟಾಂಗ ನಮನ ಗೈಯುತ ||
ಪೇಳುವ ನೀಪರಿ ಗದ್ಗದ ಕಂಠದಿ |
ಪೇಳಿದೆ ಸಟಿನುಡಿ ಕುಹಕತನದಿ ||
ಬಾಲಿಶನಪರಾಧ ಮನ್ನಿಸೊ ಮಹರಾಯಾ | ಏಳಲ ಮಾಡದೆ
ಸಲಹೋಜೀಯಾ | ಲೀಲಾ ಮಾನುಷ ಹರಿ ಯತಿವೇಷ ನರಹರಿ |
ಪೇಳುವ ವೈಶ್ಯಗೆ ನಗು-ನಗುತ | ಕೇಳಲೊ ದುರ್ಬುದ್ಧಿ
ಸತ್ಯವ್ರತ ಮರೆದು | ಕಾಲ ಕಳೆದುದಕೆ ಈ ದುಃಖವು || ಮೇಲು
ದೃಷ್ಟಿನಿಡು ಸತ್ಯವ್ರತವ ಮಾಡು | ಹೇಳದೆ ಪೋಪವು
ಕ್ಲೇಶಗಳು || ಪಾಲಿಸು ಹರಿ ಮತ ನಿನ್ನಾಭೀಷ್ಟಗಳೆಲ್ಲ |
ಮೇಳವಾಗುವವೆಂದು ಪೇಳಿ ನಡೆದ | ಏಳುತ ವಣಜಿಗ ಪರಮ
ಸಂತಸದಿಂದ | ಬಾಲ ಗೋಪಾಲನ ಸವನಗೈದಾ | ಮೇಲೆ
ನೋಡಲು ನಾವೆ ಧನದಿಂದ ತುಂಬಿದೆ | ತೂಳಿದಾನಂದ
ಸಂದೋಹದಿಂದ || ಕಾಲಾಭಿನವ ಪ್ರಾಣೇಶವಿಠ್ಠಲನ
ಬಹು | ಲೀಲೆಗಳ ನೆನೆಯುತ್ತ ಸ್ವಪುರ ಪಥನಾದ | || ೩ ||
ತಾಳ:ಅಟ್ಟ
ಪುರಕೆ ಬಂದು ತನ್ನ ಬರುವನು ತಿಳಿಸಿದ | ಹರಿ
ಪೂಜೆಯೊಳಗಿದ್ದ ತಾಯಿ ಮಗಳು ಬಹು | ಹರುಷಾತಿಶಯದಿಂದ
ಹರಿವಿಸ್ಮೃತರಾಗಿ | ಹರಿಪೂಜೆ ತೊರೆಯುತ ಶರಧಿ ತಟಕೆ ಬರೆ
| ಭರತನ ಕಾಣದೆ ವರ ಕಲಾವತಿತನ್ನ | ಪರಿಯನರಿತು
ದುಃಖ ಭರಿತಳಾಗಿ ತನ್ನ | ಉರವನಪ್ಪಳಿಸುತ ವರಲುತ್ತ
ಚೀರುತ್ತ | ಅರೆಯಾಳಿನಂತಾಗಿ ಧರಿಗುರಳಲು ಜನ |
ಪರಮಾಶ್ಚರ್ಯದಿ ದಿಂಙಮೂಡರಾದರು | ತರಣಿ ವಿತ್ತ
ಧನ ಅಳಿಯನ ಕಾಣದೆ | ಪರಿತಪಿಸುವರೆಲ್ಲರೂ
ಶೋಕದುಮ್ಮಳದಿಂದ | ವರಲುತ ಹೊರಳುವ ತರಳೆಯ
ಪಿಡಿದೆತ್ತಿ | ವರ ಸಾಧು ಶೋಕದಿ ಸತಿಯಿಂದೊಡಗೂಡಿ | ಇರವ
ಕಾಣದೆ ಬಗೆಯರಿಯದೆ ಕೊನೆಯಲ್ಲಿ | ಹರಿಯಲೀಲೆಯಂದರಿತು
ಭಕ್ತಿಯಿಂದ | ಹರಿಸತ್ಯ ವ್ರತ ವಿಸ್ಮೃತಿ-ಯೆ ಇದೆಂದು | ಅರಿತು
ನಯದಿ ಕರ ಜೋಡಿಸಿ ತುತಿಪರು | ಪೊರೆದೆ ಪಿಂತೆ, ಪಾಂಚಾಲಿಯ
ಕರಿ ದ್ವಿಜ | ತರಳ ಪ್ರಹ್ಲಾದನ, ನರ, ಧ್ರುವ, ಸುರಪನ |
ಪೊರೆದಂತೆ ಎಮ್ಮನು ರಕ್ಷಿಸು ಕುವರಿಯ | ಭರತನ ತೋರಿಸು
ಮಾಂಗಲ್ಯ ರಕ್ಷಿಸು | ಕರುಣಿಸು ಕರುಣಿಸು ಎಂದೊರಲುವ
ಸಾಧು | ವರನಿಗೆ ಪೇಳಿದ ಹರಿಪದರವದಿಂದ | ಕರುಣಾಳು
ಅಭಿನವ ಪ್ರಾಣೇಶವಿಠ್ಠಲ || ೪ ||
ತಾಳ: ಆದಿ
ಹರಿ ವಿಸ್ಮೃತಿ-ಎಲ್ಲ ಹರಿಬಕ್ಕೆ ಕಾರಣ | ಹರಿಸ್ಮೃತಿ-
ತೊರೆದುದಕೀ ಪರಿಯಾಗಿದೆ | ಹರಿಸ್ಮೃತಿ-ಯೆಂಬ ಪ್ರಾಸದವ
ಪಡೆದ ಆ- | ಸರ್ವ ಸುಮಂಗಲವೆಂಬ ಘೋಷಕೇಳಿ | ಸರುವರು
ನಮಿಸಲು ಶಿರ ಸಾಷ್ಟಾಂಗದಿ | ಹರಿಸ್ಮೃತಿ-ಫಲದ
ಪ್ರಸಾದವು ಲಭಿಸಲು | ತರುಣಿ, ತರುಣ, ಧನ, ಅಳಿಯನ
ಕಾಣುತ | ಪರಮಾನಂದದಲಿ ಹರಿಯನು ಸ್ಮರಿಸುತ |
ಸರ್ವರೊಡನೆ ತನ್ನರಮನೆ ಪೊಕ್ಕನು | ನಾರಾಯಣಸತ್ಯನ
ವ್ರತವಾಚರಿಸುತ | ವರುಷ ವರುಷ ಪರ್ವ ಕಾಲದಿ ಸಂತತ |
ಹರಿಯಭಿನವ ಪ್ರಾಣೇಶವಿಠ್ಠಲನ | ಚರಣದೊಲಿಮೆ
ಗಳಿಸಿ ಸದ್ಗತಿ ಪಡೆದ ||೫ ||
ತಾಳ:ಜತೆ
ಹರಿಸ್ಮೃತಿ-ಸಗ್ಗ, ವಿಸ್ಮೃತಿ-ನರಕವಯ್ಯಾ | ಸಿರಿಯರಸ
ಅಭಿನವ ಪ್ರಣೇಶ ವಿಠಲ ಜೀಯಾ || ೬ ||
ಇತಿ ಶ್ರೀ ಸತ್ಯನಾಯಣ ಕಥಾ ಚತುರ್ಥೋಧ್ಯಾಯಃ
ಶ್ರೀ ಸತ್ಯನಾರಾಯಣ ಕಥಾ ಪಂಚಮೋಧ್ಯಾಯಃ ಸುಳಾದಿ
ತಾಳ:ಝಂಪೆ
ಪೂರ್ವದಲಿರುತಿರ್ದನು ತುಂಗಧ್ವಜನೆಂಬ | ಓರ್ವರಾಜನು
ಪ್ರಜರ ಪಾಲಿಸುತ್ತ || ವೀರ ಶಬರರ ನೆರಹಿ
ಮೃಗಯಾವಿಹಾರಕ್ಕೆ ||
ಸೇರಿದನು ಗಹನಾಟವಿಯ ಬೇಗನೆ || ಕ್ರೂರ ಸಿಂಹ ವ್ಯಾಘ್ರ
ಚಿರತೆಗಳ ಸಂಹರಿಸಿ | ಘೋರ ಭೂಭಾರಗಳ ಸೊಲ್ಲಡಗಿಸಿ ||
ತೀರೆ ಮೃಗಯಾಕಾಂಕ್ಷೀಪುರ ಸಮೀಪದೊಳಿರ್ದ |
ಮೀರಿದುತ್ಸಹಾದಲ್ಲಿ ಸತ್ಯನಾರಾಯಣನ | ಆರಾಧಿಸುತಲಿರ್ಪ
ಗೋಪಾಲರು ||
ಭೂ ರಮಣ ಅಭಿನವ ಪ್ರಾಣೇಶವಿಠ್ಠಲನ | ಚಾರು
ಪ್ರಸಾದ ಭೂಪನಿಗಿತ್ತರು ||೧ ||
ತಾಳ:ಮಟ್ಟ
ತುಂಗಧ್ವಜರಾಜಾಪಾಂಗ ಗರ್ವದಿಂದ | ತಿಂಗಳಭಾಂಗ
ಶ್ರೀರಂಗನಿಗೊಂದಿಸದೆ | ಮಂಗಳ ವಿಗ್ರಹವ
ಕಂಗಳಿಂದೀಕ್ಷಿಸದೆ | ತುಂಗಮಹಿಮ
ಪಾಂಡುರಂಗಪ್ರಸಾದ | ಅಂಗದಿ ಮುಟ್ಟದಲೆ ಭಂಗಿಸಿ
ಪೋಗುತಿರೆ | ಜಂಗಮ ಜಡವ್ಯಾಪ್ತ ಗಂಗಾ ಪಿತ ಮನುಜ |
ಸಿಂಗನ ಕೋಪದಲಿ ಹಿಂಗಿಪೊಗೆ ನೂರು | ಅಂಗಜರು ರಾಜ್ಯ ರಂಗು
ರಂಗು ಭಾಗ್ಯ | ಭಂಗ ಬಡುತ ಭೂಪ ಹಿಂಗರಣಿಸಿ ಬಂದ |
ಮಂಗಳಾಂಗಭಿನವ ಪ್ರಾಣೇಶವಿಠ್ಠಲನ | ಮಂಗಳ
ಮೂರುತಿ-ರಂಗನ ತುತಿಸಿದ
ತಾಳ:ತ್ರಿವಿಡಿ
ಸಿಂಧೂರ ಧ್ರುವ ಮುಚಕುಂದ ವರದ ಹರಿ | ಸ್ಯಂದನ
ಸಿರಿಯದು ನಂದದೇವ | ಮಂದರ ಧರ ನಿನ್ನ ಸುಂದರ
ವಿಗ್ರಹಾ | ನಂದಿ ನೋಡದೆ ವಂದಿಸದೆ || ತಂದಿತ್ತ ಪ್ರಸಾದ
ನಂದದಿ ಗ್ರಹಿಸದೆ | ಹಿಂದುರಿಗಿಹೆನೊ ಮದಾಂಧ ತನದಲಿ |
ತಂದೆ ನಿನ್ನಯ ಪಾದ ಮಂದಜ ಕೆರಗುವೆ | ಕಂದನ
ಅಪರಾಧ ಕ್ಷಮಿಸಿ ಸಲಹೊ | ಎಂದು ತುತಿಸಿ ಹರಿಗೊಂದಿಸಿ
ವಿನಯದಿ | ನಂದದ ಪ್ರಸಾದಾನಂದದಿ ಭುಂಜಿಸಿ |
ಹಿಂದುರಿಗಿದ ತನ್ನ ಮಂದಿರಕೆ || ಬಂಧು ಬಾಂಧವ ಶತ
ನಂದನರೆಲ್ಲರು | ಮಂದಾಹಾಸದಲಲ್ಲೆ ನಿಂದಿಹರು || ಬೆಂದು
ಪೋದ ಭಾಗ್ಯ ಬಂದಿರುವುದ ಕಂಡು |
ನಂದಿದಿಂದಪ್ಪಿದನಂದನರನ್ನು || ಮಂದಜಾ ಧವ
ಸತ್ಯಾನಂದನೋಪಾಸನ | ಬಂಧುರ ವ್ರತ ನೇಮದಿಂದ
ಗೈದು || ನಂದಜ ಅಭಿನವ ಪ್ರಾಣೇಶವಿಠ್ಠಲನ | ಪೊಂದಿ
ನಿತ್ಯಾನಂದ ಮಂದಧಿಯೊಳ್ ನಲಿದ || ೩ ||
ತಾಳ: ಅಟ್ಟ
ಶ್ರೀ ಲಕುಮೀಶನ ಪ್ರಸಾದ ಪಡೆಯಲು | ಹಾಲು ಶರ್ಕರ ಫಲ
ಸಜ್ಜಿಗಿ ಘೃತಗಳ | ಮೇಳೈಸಿ ಸಪಾದ ಭಕ್ಷವ ಮಾಡುತ |
ಮೇಲು ಸುತತ್ವ ದೇವತೆಗಳ ಒಲಿಸುತ | ಶ್ರೀ ಲಕುಮೀ ವಿಧಿ ಪವನ
ಭಾರತಿ ವಾಣಿ | ಶೀಲ ಸುಗುರುಗಳನುಗ್ರಹ ಗಳಿಸುತ | ಕಾಳಿ
ರಮಣ ಹೃದಯಾಲಯ ಸರಸಿಜಾ | ಲೋಲನೋಪಾಸನ ಮಾಡುವ
ಸುಜನಕ್ಕೆ | ಮೇಲು ಪ್ರಸಾದವ ತೂಳಿದಾನಂದವ |
ಕಾಲಾಭಿನವ ಪ್ರಾಣೇಶವಿಠಲನೀವ || ೪ ||
ತಾಳ: ಆದಿ
ಸತ್ಯನ ಗುಣ ರೂಪ ಕ್ರೀಯಗಳನರಿಯುತ | ಸತ್ಯ ಮರುತ ಮತ
ದರ್ಶನ ತಿಳಿಯುತ | ಸತ್ಯ ದಾಸ್ಯ ರತಿ ಮಿಥ್ಯ ಭಾಷ್ಯ ಖತಿ |
ಸೋತ್ತಮರಿಂದದರ್ಥವ ಗ್ರಹಿಸುತ | ಸತ್ಯಸಂಧತೆಯ ಚಿತ್ತ
ಶುದ್ಧಿಯಲಿ | ಸತ್ಯೋಪಾಸನೆಯನುತ್ತಮರೊಡಗೂಡಿ | ನಿತ್ಯದಿ
ಗೈಯಲು ಭವ ಭಯ ಪರಿಹಾರ | ನಿತ್ಯಾನಂದವು ನಿಶ್ಚಿತ
ನಿಶ್ಚಿತ | ಸತ್ಯವು ಸತ್ಯವು ಸಂಶಯ ಪಡಸಲ್ಲ | ಸತ್ತಮ
ಗುರು ವರದೇಂದ್ರರ ಕರುಣದಿ | ಸತ್ ಕಥೆ ಬರೆದೆನು ಸ್ಕಂದ
ಪುರಾಣದ | ಸತ್ಯವಂತ ಜನರೋದಲಿ ಹರಸಲಿ | ಸತ್ಯಾಭಿನವ
ಪ್ರಾಣೇಶವಿಠ್ಠಲನು | ಸತ್ ಪಥದೊಳು ರತಿ-ಇತ್ತು ರಕ್ಷಿಸಲಿ ||
೫ ||
ತಾಳ: ಜತೆ
ಹರಿ ಭಕ್ತರಭಿಲಾಷೆ ಪೂರೈಸುವುದೇ ಪೂಜೆ |
ಸಿರಿಯಭಿನವ
ಪ್ರಾಣೇಶವಿಠ್ಠಲ ರಾಜಾ || ೬ ||
ಇತಿ ಸತ್ಯನಾರಾಯಣ ಕಥಾ ಪಂಚಮೋಽಧ್ಯಾಯಃ
satyanArAyaNa kathAsAra suLAdi
dhruva taaLa
satyanArAyaNa vratavannu mALpudu satyavaMtarAgi
nityadalli | satyavratavidu muktige sOpaana | martyara Bava
baMdha vinaashana || satyavrataraada shaunakaadigaLige |
bittarisida sUta nimiSha vanadi || chittaja maate vidhi
chittajaaraatimuKa | tatva dEvategaLu biDade nitya |
satyadEvana vrata maaDuta saMtata | atyaMta suKa
pUrNarAgiharu || uttama nara dEha naimiShaaraNyavu |
sUtra naamaka prANa sUtAchaarya | nityellaroLu nelasi
haMsa maMtrava japisi | satyOpAsane maaLpa gaaLi dEva ||
uttama praaNana avatAra traya chariya | hattELu viMshati- graMtha mUla marma |
nityadi kulaguru suKatIrthareMdu
tiLidu | satyadEvana vrata maaDirayya | satyaaBinava
praaNEsha viThThala validu | satyalOkavanIva satyavati
tanaya || 1 ||
taaLa:maTTa
oMdina vaikuMTha maMdiradali shrIgO | viMdanu
pIThadali iMdireyoDagUDi | naMdadi kuLitiralu baMdanu
dEva RuShi | maMdara dhara harige maMdadhi tanayaLige |
vaMdisi padagaLige dvaMdva karava mugidu | maMdAkini
janaka, daMdashUka talpa | iMdu BUmiyalli baMdhura kali
bAdhe | yiMda sujanarella, beMdu Bavadi nitya |
baMdhitaraagiharu baMdha vimOchanada | suMdara
pathatOru eMdu tutise muniyu | naMdaja aBinava
praaNEsha viThThalanu | maMdahAsadi nuDiva
mommagiMteMdu || 2 ||
taaLa: triviDi
lOkEsha suta ninna vaaku baNNipe nODu | lOkOpakArada
manava kaMDu || shrIkara shrI satyanaaraayaNa vrata |
vEkOpAyavu idake kali yugadi || BIkara BavabaMdha
shOkataapagaLella | Ekakaalake beMdu pOpavayya ||
raakabja tithiyamavaasye saMkramaNadi | bEkAda
samayadi maaLpudayya || maakaaMta shrI
satyanaaraayaNanige | naaku naaku pUje maaDutali ||
shrIka, pavana, vaaNi dvayaranugraha paDedu | naakoMdu
kOsha vij~jaanavaridu || AkaLa GRuta kShIra gOdhUma
chUrNava | saakaShTu sharkaraverasi kadaLI Pala ||
paakavagaidu shrI kRuShNaarpaNavenne |
maakaLatraaBinava praaNEsha viThThalavaliva || 3 ||
taaLa: aTTa
satyamaaDuva pratiyobba maanava | atyaMta haruShadi
svajanariMdoDagUDi | satyanaaraayaNa vratavannu
maaDalu | martyataapagaLella parihaara parihaara |
satyaaBinava praaNEsha viThThalanu | nityAnaMdavIva
mRutyuMjaya taata || 4 ||
taaLa:aadi
nIrajanaaBaniMdupadEsha paDeyuta | naaradamuni hari
siri padakeruguta | dhaaruNiyoLu saMcharisuta saMtata |
bIrida nIvratakathAmahimegaLa | sUri sujanarella parama
haruShadiMda | ArAdhisi siri satyadEva pada | chAru
suKaMgaLa paDeyutalaMtyadi | Ira prItaBinava praaNEsha
viThThalana | mUruti kaMDaru hRudayaagasadi || 5 ||
taaLa: jati
yaj~jaaBinava praaNEsha viThThalana |
vij~jaanavariyuvade prathamOdhyaaya || 6 ||
iti shrI satyanArAyaNa kathaa prathamOdhyaayaH
shrI satyanaaraayaNa kathaa dvitiyOdhyaaya suLaadi
tALa: JaMpe
bharata khaMDada puNya bhUmiyoLu shObhisuvA vara
kShEtra shrI kAshi paTTaNadoLu irutirda dvijanOrva
satkarmaniratanu urutarada dAridryavanubhavisutta niruta
bhikShAnakke toLalutta baLalutta tirugutirdanu grAma
grAmaMgaLa dharaNi suranI duHkha paraharisalOsuga
karuNAvAridhi satyanArAyaNa varavRuddha brAhmaNa
surUpavanu dharisibhU surage kANisikoMDa karuNArNava
| siri manOhara charaNa sharadhi Bava taaraNa | karivarada
aBinava praaNEsha viThThala
taaLa: maTTa
vRudhdha mahIsurana kaaNutalI dvijanu |
eddaregidapadage baddha BakutiyiMda | baddhaaMjaliyaagi
gadgadakaMThadali | uddharisuvudu daaridryava kaLedu |
madhvapa aBinava praaNEsha viThala paada | padmava
tOruvudeMdu prArthisida nayadi || 2 ||
taaLa:triviDi naaraayaNa pELda dhaaruNisura kELO |
daaridrya BavarOgAva agaadhavaadudu || shauri shrI
satyanaaraayaNa vratave | mIridupaayavu kali kaaladi ||
chaaru sadBaktiyiMdAcharisuvadeMdu | saari pELidanella
vrata vidhaanavu || maaramaNaBinava
prANEshaviThThalanu | tOri naDedanu tanna kShIra
saagarake || 3 ||
taaLa:aTTa
vipranidanu kELi paramaadaradiMda | kShipradi baMdhu
bAMdhavaroDagUDuta | pakShIMdra syaMdana
satyanaaraayaNa | na prati vratavannu maaDida paaDida |
aprati aBinavaprANEshaviThThalana | apraakRuta
satyapuravane paDeda | taaLa:aadi kAShTha krIta
dvijanOrvanu pUjisi | shREShTha kathaamRuta
vivaragaLaalisi | niShTheyiMda satyadEvana pUjisi |
shiShTariMdoDagUDi vratavaacharisuta | sRuShTiyoLati
suKavanuBavisuta para | mEShThinuta aBinava
prANEshaviThThalana | paTTaNa sEridanati suKapaDeda
tALa: jate
vaasudeevaaBinava prANEshaviThThalana |
daasaroLu sadBakti dvitiyOdhyaaya
iti shrI satyanaarayaNa kathaadvitIYOdhyaaya
tRutiyOdhyaayayaH suLaadi
tALa: dhruva
poDavi paalakanulkaamuKaneMbo raaja tanna |
maDadiyiMdoDagUDi parivaara saha nadi | daDadalli
sirisatyanaaraayaNaarchana |
saDagaradiMdalaacharisutiralu ||
toDejaata vaNajiga saadhunaamakanOrva | dRuDhaBakti
rahitanu hari haridaasaralli | vaDave sahita nadi daDadalli
baMdhisi | naDetaMdu BUpage poDamaTTa vinayadi |
nuDidanI vratavEnu? maaDuva bageyEnu? poDavipa idara
vidhaanavEnu? biDedenagaruheMdu dainyadi praarthise |
kaMDu haruShadi nRupa nuDidaniMtu | jaDajaakSha
shrIsatyadEvana vratavidu | paDevagOsuga saMtAna
sauBAgyava | biDade maaDuvenayya niShTheyiMda |
dRuDa manadiMdalAcharisuvudI vrata | gaDane
pELidanella vrata vidhaana ||
nuDi kELi vaNajiga haruSha maanasanaagi |
oDanEnagaapatyavaadare shrIsatya | mRuDagEya aBinava
prANEsha viThala vrata ||
dhRuDa manadi maaDuvenu biDade naanu | taaLa:maTTa
purake baMdu saadhusati lIlAvatige | aruhida saMtasadi
irutire kelakaala | narahari kRupeyiMda haruSha tOritu
gRuhadi | sari maasadi shuBadivasa kanyaa ratna | parama
kalaavati janisalu vaNajiganu | maretu biDalu vratava
garatiyu echcharise | taraLeya maduveyali
maaDuveneMteMda | pariNaya kaalakkU maaDalilla vratava
| Karamada vaishyanige BraShTa pratij~janige | urutara
duHKagaLu praaptavaagaleMdu | hariyaBinava
praaNEshaviThala nuDida ||
taaLa:triviDi
kelakaaladali saadhu aLiyaniMdoDagUDi | gaLisabEku
dhana vipulaveMdu || jaladhi taTada ratnasaara purake
baMdu | nelasuta bahuvittagaLisidanu |
iLeyaaNmanaagaaradiMda taskarisida | beleyuLLa vastu
vaishyana gRuhada || baLiyalli kaaNuta raaja BaTaru baMdu
| eLedoydarIrvara baMdhisuta | halavu pariyaliMda
praarthise kELade | balu baMdhadiTTaru kaaraagRuhadi ||
iLijANmanabhinava praaNEsha viThThalana | sale
maayadiMda baMdhitarellaru ||
taaLa:aTTa
itta leelaavati maneyoLiddudella | vitta dhana dhaanya
kaLuvaagi pOgalu | atyaMta duHKadi putriyiMdoDagUDi |
nitya BikShaannadi upajeevisutalire | mattu
kalaavatiyoMdina kShudheyiMda | pRuthvisurana
manegaidiralaagalli | satyadEvana pooje yaaguvadanu
kaMDu | BaktiyiM kathe kELi praasadavanu koMDu |
hottaagi baMdiha magaLa kaMDu taayi | ettapOgiddiya I
dina bahu kaala | chittadoLEnide karuNisi pELene |
satyadEvana vrata vRuttAMtavaruhalu | aatyaMta dainyadi
bEDikoMDaLu enna- | Barta jaamaatara aparaadha mannisu
| itta kaDege bEga baruvaMte karuNisu | shaktyaanusaaradi
pUjisuvenu dEva | mattu mattu tuti maaDalu paaDalu |
Bakta vatsala satyanaaraayaNanitta | pRuthvipatiya
svapnadali baMdu pELida | mattoMdu vichaara maaDade
vaishyara | muktara maaDu dhanavanellava koDu |
mattidaroLu taDavaadare ninnaya | sattigi sauBAgya
naashavaaguvudeMdu | satyaaBinava prANEshaviThala
nuDida || 4 ||
taaLa: aadi
garuDAgrajake nRupavaranELuta | hariyanu smarisuta
tvaritadi saBeyanu | nerasida kanasina pariyanu pELida |
karesida vaishyara harisida baMdhana | haruShadi maMgala
snaanavagaisida | eraDaraShTu dhanavittava nIDida |
paripariyali saMtayisi danavarige | hariyaBinava
praaNEshaviThThalana | smarisuta pOgireMdu harasida
nRupanu || 5 || taaLa:jate viShayaase uLLanaka vasudEva
sutanoliya | vasudhIsha aBinava prANEsha viThalaraaya || 6
||
iti shrI satyanaaraayaNa kathaa tRutiyOdhyaayaH
saMpUrNaH.
shrI satyanaarayaNa kathaa chaturthOdhyaayaH suLaadi
tALa: dhruva
maMdaja kEtu BUpagoMdisi vinayadi | aMdadi BUsura
vRuMdakke shirabaagi | baMdiha dhanaraashi hoMdisi
naukeyalli | maMdadhiyoLu tanna maMdira maargavaagi |
hoMdi koMDaLiyaniMda saadhu naDeda ||
baMditu madhyaahna baMdhisi naavetaTadi | saMdhyAti
karmagaLaMdadigaiyutire | iMdirEshanu yatiyaMdadi
rUpatALi | baMdu kELidanati maMdahaasadi naguta |
baMdhitavaada nimma naukeyOLEnide | eMdu kELuva
nuDiyaalisi vaishyanu | aMdha madadhi nuDida kuhaka
tanadi || saMdhisi haNa vittavetta bEkennuviyaa | baMda
haadige suMkavillaa kaaNO | saMdEhavEke namma
naavikeyu saMpUrNa | iMdhana lata patra-puShpa
Palaadiga- | LiMda tuMbihudayya saTiyallavu ||
maMdana kaTuvaaku kELuta shaaMtadi | iMdu
dharanataata, gaMdhavaahana pita |
siMdhushayyanaBinava prANEsha viThalagO | viMda
nuDida nInaMdaMteyaagali |
taaLa: maTTA
mugisi saMdhya karma nagutati-vaNajiganu | lagubageyali
baMdu naukeya nIkShisalu | agaNita dhanaraashi
maayavaagiyalli bage bage lataa patra Pala-puShpagaLiruva
| bageyanaritu saadhu bahu vyaakuladiMda | duguDa
manadi dharege uruLida shOkadali ||
hagaraNavanu kaMDu vaishyanaLiya javadi | bigidebbisi
nilisi pELuvanI teradi | nageyaaDida Palavu maskariyoDane
idu | mige saMshaya salla A yatiyE sarva | jagasthiti-laya
karta aatanalligE pOgi | mugidu karava nayadi kShame
kOruvadoLitu | yugapati-aBinava prANEshaviThala charaNa
| yugala morehokkallade I klEsha biDadu || 2 ||
taaLa:triviDi
kELi jaamaatana vaaNiya vaishyanu | tALuta shAMtiya kara
jODisi || sheela suvrati yati-sannidhigaitaMdu | mElu
saaShTaaMga namana gaiyuta ||
pELuva nIpari gadgada kaMThadi |
pELide saTinuDi kuhakatanadi ||
baalishanaparaadha manniso maharaayaa | ELala maaDade
salahOjIyaa | leelaa maanuSha hari yativESha narahari |
pELuva vaishyage nagu-naguta | kELalo durbuddhi
satyavrata maredu | kaala kaLedudake I duHKavu || mElu
dRuShTiniDu satyavratava mADu | hELade pOpavu
klESagaLu || paalisu hari mata ninnABIShTagaLella |
mELavaaguvaveMdu pELi naDeda | ELuta vaNajiga parama
saMtasadiMda | baala gOpaalana savanagaidA | mEle
nODalu naave dhanadiMda tuMbide | tULidaanaMda
saMdOhadiMda || kaalaaBinava prANEshaviThThalana
bahu | leelegaLa neneyutta svapura pathanaada | || 3 ||
taaLa:aTTa
purake baMdu tanna baruvanu tiLisida | hari
poojeyoLagidda taayi magaLu bahu | haruShaatishayadiMda
harivismRutaraagi | haripUje toreyuta sharadhi taTake bare
| Baratana kANade vara kalaavatitanna | pariyanaritu
duHKa BaritaLAgi tanna | uravanappaLisuta varalutta
chIrutta | areyaaLinaMtaagi dhariguraLalu jana |
paramaashcharyadi diM~gamUDaraadaru | taraNi vitta
dhana aLiyana kANade | paritapisuvarellarU
shOkadummaLadiMda | varaluta horaLuva taraLeya
piDidetti | vara saadhu shOkadi satiyiMdoDagUDi | irava
kaaNade bageyariyade koneyalli | hariyaleeleyaMdaritu
BaktiyiMda | harisatya vrata vismRuti-ye ideMdu | aritu
nayadi kara jODisi tutiparu | porede piMte, paaMchaaliya
kari dvija | taraLa prahlaadana, nara, dhruva, surapana |
poredaMte emmanu rakShisu kuvariya | Baratana tOrisu
mAMgalya rakShisu | karuNisu karuNisu eMdoraluva
saadhu | varanige pELida haripadaravadiMda | karuNALu
aBinava prANEshaviThThala || 4 ||
tALa: Adi
hari vismRuti-ella haribakke kaaraNa | harismRuti-
toredudakI pariyaagide | harismRuti-yeMba praasadava
paDeda A- | sarva sumaMgalaveMba GOShakELi | saruvaru
namisalu shira saaShTaaMgadi | harismRuti-Palada
prasaadavu laBisalu | taruNi, taruNa, dhana, aLiyana
kaaNuta | paramaanaMdadali hariyanu smarisuta |
sarvaroDane tannaramane pokkanu | naaraayaNasatyana
vratavaacharisuta | varuSha varuSha parva kaaladi saMtata |
hariyaBinava praaNEshaviThThalana | charaNadolime
gaLisi sadgati paDeda ||5 ||
taaLa:jate
harismRuti-sagga, vismRuti-narakavayyaa | siriyarasa
aBinava praNEsha viThala jIYaa || 6 ||
iti shrI satyanaayaNa kathaa chaturthOdhyaayaH
shrI satyanaaraayaNa kathaa paMchamOdhyaayaH suLaadi
taaLa:JaMpe
pUrvadalirutirdanu tuMgadhvajaneMba | Orvaraajanu
prajara paalisutta || veera shabarara nerahi
mRugayaavihaarakke ||
sEridanu gahanaaTaviya bEgane || krUra siMha vyaaGra
chirategaLa saMharisi | GOra BUBAragaLa sollaDagisi ||
teere mRugayaakaaMkShIpura samIpadoLirda |
mIridutsahaadalli satyanaaraayaNana | Araadhisutalirpa
gOpAlaru ||
BU ramaNa aBinava prANEshaviThThalana | chaaru
prasaada BUpanigittaru ||1 ||
tALa:maTTa
tuMgadhvajaraajaapaaMga garvadiMda | tiMgaLaBAMga
shrIraMganigoMdisade | maMgaLa vigrahava
kaMgaLiMdIkShisade | tuMgamahima
paaMDuraMgaprasaada | aMgadi muTTadale BaMgisi
pOgutire | jaMgama jaDavyaapta gaMgaa pita manuja |
siMgana kOpadali hiMgipoge nUru | aMgajaru raajya raMgu
raMgu BAgya | BaMga baDuta BUpa hiMgaraNisi baMda |
maMgaLAMgaBinava praaNEshaviThThalana | maMgaLa
mUruti-raMgana tutisida
taaLa:triviDi
siMdhUra dhruva muchakuMda varada hari | syaMdana
siriyadu naMdadEva | maMdara dhara ninna suMdara
vigrahA | naMdi nODade vaMdisade || taMditta prasaada
naMdadi grahisade | hiMdurigiheno madaaMdha tanadali |
taMde ninnaya pAda maMdaja keraguve | kaMdana
aparaadha kShamisi salaho | eMdu tutisi harigoMdisi
vinayadi | naMdada prasaadaanaMdadi bhuMjisi |
hiMdurigida tanna maMdirake || baMdhu baaMdhava shata
naMdanarellaru | maMdaahaasadalalle niMdiharu || beMdu
pOda BAgya baMdiruvuda kaMDu |
naMdidiMdappidanaMdanarannu || maMdajA dhava
satyaanaMdanOpaasana | baMdhura vrata nEmadiMda
gaidu || naMdaja aBinava prANEshaviThThalana | poMdi
nityaanaMda maMdadhiyoL nalida || 3 ||
tALa: aTTa
shrI lakumIshana prasaada paDeyalu | haalu sharkara Pala
sajjigi GRutagaLa | mELaisi sapaada BakShava mADuta |
mElu sutatva dEvategaLa olisuta | shrI lakumI vidhi pavana
bhaarati vaaNi | sheela sugurugaLanugraha gaLisuta | kALi
ramaNa hRudayaalaya sarasijaa | lOlanOpaasana mADuva
sujanakke | mElu prasaadava tULidaanaMdava |
kaalaaBinava prANEshaviThalanIva || 4 ||
tALa: Adi
satyana guNa rUpa krIyagaLanariyuta | satya maruta mata
darshana tiLiyuta | satya daasya rati mithya bhAShya Kati |
sOttamariMdadarthava grahisuta | satyasaMdhateya chitta
shuddhiyali | satyOpaasaneyanuttamaroDagUDi | nityadi
gaiyalu Bava Baya parihAra | nityaanaMdavu nishchita
nishchita | satyavu satyavu saMshaya paDasalla | sattama
guru varadEMdrara karuNadi | sat kathe baredenu skaMda
puraaNada | satyavaMta janarOdali harasali | satyaaBinava
prANEshaviThThalanu | sat pathadoLu rati-ittu rakShisali ||
5 ||
taaLa: jate
hari BaktaraBilaaShe pUraisuvudE pUje |
siriyaBinava
prANEshaviThThala raajaa || 6 ||
iti satyanaaraayaNa kathaa paMchamO&dhyaayaH
Leave a Reply