Composer : Shri Lakshmipati vittala on Shri Gurushrisha vittala
ದಾಸರ ನೆರೆನಂಬಿರೋ | ಗುರು |
ಶ್ರೀಶ ದಾಸರ ನ್ರೆನಂಬಿರೋ |
ದಾಸರ ನೆರೆ ನಂಬಿ ಲೇಸು
ಪೊಂದಿಸಿ ಮನದ |
ಕ್ಲೇಶವ ಕಳದಭಿಲಾಷೆ
ಪೂರೈಸುವ || ಪ.||
ಸುರಧೇನು ಮನೆಯೊಳಗಿರಲು
ಮಜ್ಜಿಗೆ ಬಯಸಿ |
ಪರರಲ್ಲಿ ಪೋಗಿ ಬಾಯಿ
ತೆರೆವುದ್ಯಾತಕೆ ಹರಿ || ೧ ||
ಅಕ್ಷಯಾತ್ಮ ಕಲ್ಪವೃಕ್ಷ
ತಾನಿರುತಿರೆ |
ಕುಕ್ಷಿಗೋಸುಗ ಪೋಗಿ ಭಿಕ್ಷಾ
ಬೇಡುವುದ್ಯಾಕೆ || ೨ ||
ಸಂತತಾ ಕೈಯೊಳು
ಚಿಂತಾಮಣಿಯು ಯಿರಲು |
ಭ್ರಾಂತನಾಗಿ ಅನ್ಯ ಚಿಂತೆ
ಮಾಡುವದ್ಯಾತಕೆ || ೩ ||
ಸುರನದಿ ಮನೆ ಮುಂದೆ
ಪರಿಯಲು ಉದಕಕೆ |
ವರತಿಯಾತೆಗುವಾ ಬ್ಯಾ-
ಸರದ ಧಾವತಿಯಾಕೆ || ೪ ||
ತುತಿಪದ್ಯಾತಕೆ ಖಳರಾ
ಪ್ರತಿದಿನದಲಿ | ಲಕ್ಷ್ಮೀ |
ಪತಿವಿಠಲನ ಪಾದಾಶ್ರಿತರೆ
ಭಕುತಿಯಲಿ || ೫ ||
dAsara nerenaMbirO | guru |
SrISa dAsara nrenaMbirO |
dAsara nere naMbi lEsu
poMdisi manada |
klESava kaLadaBilAShe
pUraisuva || pa.||
suradhEnu maneyoLagiralu
majjige bayasi |
pararalli pOgi bAyi
terevudyAtake hari || 1 ||
akShayAtma kalpavRukSha
tAnirutire |
kukShigOsuga pOgi BikShA
bEDuvudyAke || 2 ||
saMtatA kaiyoLu
ciMtAmaNiyu yiralu |
BrAMtanAgi anya ciMte
mADuvadyAtake || 3 ||
suranadi mane muMde
pariyalu udakake |
varatiyAteguvA byA-
sarada dhAvatiyAke || 4 ||
tutipadyAtake khaLarA
pratidinadali | lakShmI |
pativiThalana pAdASritare
Bakutiyali || 5 ||
Leave a Reply