Composer : Shri Uragadrivasa vittala
ಮುನಿಯುವರೇ ಕೃಷ್ಣಾ ಮುನಿಯುವರೆ [ಪ]
ಮುನಿಗಳೆಲ್ಲರು ನಿನ್ನ ಮನೆಯವರೇನೊ
ದಣಿಸಲಾಗದೊ ನಿನ್ನ ನೆನೆವ ಭಕುತರೊಳು [ಅ.ಪ]
ಮುನಿಗಳು ಮನದೊಳು ಕ್ಷಣ ಬಿಡದಲೆ ನಿನ್ನ
ದಣಿಸಿ ಕುಣಿಸುವರೊ ಮೌನದಿಂದಲಿ ನಾ,
ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆ
ಕೆಣಕಿದವರ ನೀ ಕ್ಷಣದಿ ಕಾಪಾಡಿದೆ (೧)
ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆ
ಶಿಲೆಯನೊತ್ತಿ ಸುಶೀಲೆಯ ಪೊರೆದೆ,
ಜಲಧಿಶಯನಾ ನೀ ರಥಕೆ ಸಾರಥಿಯಾದೆ
ಛಲವೇತಕೆನ್ನೊಳು ನೀನೆ ಗತಿ ಎಂದರೆ (೨)
ಎಂಜಲಾಸೆಗೆ ಸೋತು ಶಬರಿಯ ಪೊರೆದೆ
ಸಂಜೆ ಹಗಲೆನ್ನದೆ ಎಂಜಲ ಬಳಿದೆ,
ಅಂಜದೆ ಅಜಾಮಿಳಗೊಲಿದೆಯೋದೇವ
ಅಂಜೆನೊ ಎಂದಿಗೂ ಕುಂಜರವರದಾ (೩)
ಶಪಥ ಮಾಡಿ ನಿನ್ನ ಪಂಥವ ಕೆಡಿಸಲು
ಕುಪಿತನಾಗಲಿಲ್ಲ ಕುರು ಪಿತಾಮಹನೊಳು,
ಆಪ್ತನಿಮಿತ್ತ ಬಾಂಧವನೆಂದು ನಿನ್ನ
ಪ್ರಾಪ್ತಿಯ ಬೇಡಲು ಬಂದುದಕೆ ಈಗ (೪)
ಶಂಕಿಸಿ ಈ ಪರಿ ಅಂಕಿತ ಪೇಳದೆ
ಬಿಂಕತನದಲಿ ಕಾಲವ ಕಳೆದೆ
ಶಂಕರನುತ ಶ್ರೀ ವೇಂಕಟೇಶ ನಿನ್ನ
ಕಿಂಕರನೆನಿಸೆನ್ನ ಸಂಕಟ ಹರಿಸೂ (೫)
muniyuvarE kRuShNA muniyuvare [pa]
munigaLellaru ninna maneyavarEno
daNisalAgado ninna neneva BakutaroLu [a.pa]
munigaLu manadoLu kShaNa biDadale ninna
daNisi kuNisuvaro maunadiMdali nA,
maNidu bEDuve baride haNidu bisuDuvare
keNakidavara nI kShaNadi kApADide (1)
baliya yAcisi Baktibalege nI silukide
Sileyanotti suSIleya porede,
jaladhiSayanA nI rathake sArathiyAde
CalavEtakennoLu nIne gati eMdare (2)
eMjalAsege sOtu Sabariya porede
saMje hagalennade eMjala baLide,
aMjade ajAmiLagolideyOdEva
aMjeno eMdigU kuMjaravaradA (3)
Sapatha mADi ninna paMthava keDisalu
kupitanAgalilla kuru pitAmahanoLu,
Aptanimitta bAMdhavaneMdu ninna
prAptiya bEDalu baMdudake Iga (4)
SaMkisi I pari aMkita pELade
biMkatanadali kAlava kaLede
SaMkaranuta SrI vEMkaTESa ninna
kiMkaranenisenna saMkaTa harisU (5)
Leave a Reply