Pundaleeka varada

Composer : Shri Purandara dasaru

By Smt.Shubhalakshmi Rao

ಪುಂಡಲೀಕವರದ ಪಂಢರಿರಾಯನ
ಕೇಳವ್ವ ಕೇಳೆ ||ಪ||

ಗೋಕುಲದೊಳಗೆ ತಾನಿಪ್ಪ
ಮೂರು ಲೋಕಕೆ ತಾನಪ್ಪ
ಕೊಳಲ ಧ್ವನಿಯ ಮಾಡುತಲಿಪ್ಪ
ನಮ್ಮ ತುರುಗಳ ಕಾಯುತಲಿಪ್ಪ ||೧||

ವೃಂದಾವನದೊಳು ನಿಂದ
ನಂದನ ಕಂದ ಗೋವಿಂದ
ಕೊಳಲ ಧ್ವನಿ ಬಹು ಚಂದ
ಮೂಜಗವ ಪಾಲಿಪ ಮುಕುಂದ ||೨||

ಸುರತರುವಿನ ನೆರಳಲ್ಲಿ
ಇವನ ಹೆಗಲಿನ ಮೇಲೆ ಕೊಡಲಿ
ನೆರೆದಿಹ ಗೋಪಿಯರಲ್ಲಿ
ಗೋಪಾಲರಾಡುತ ಲೀಲೆಗಳಲ್ಲಿ ||೩||

ಕರ್ಪೂರ ವೀಳ್ಯವ ಮೆಲುವ
ನಮ್ಮ ಕಸ್ತೂರಿ ತಿಲಕ ಉಂಗುರವ
ಮುತ್ತಿನ ಓಲೆ ವರ ಚೆಲುವ
ವಿಸ್ತರದಿ ಹದಿನಾಲ್ಕು ಲೋಕ ಪೊರೆವ ||೪||

ಹಿಮಕರ ಚರಣದ ಕರನ
ಮೂಜಗ ಪಾಲಿಪ ಕರುಣ
ಅಮರರಿಗೆ ಒಲಿದವನ ನಮ್ಮ
ಪುರಂದರ ವಿಠಲರಾಯನ ||೫||


puMDaleekavarada paMDharirAyana
kELavva kELe ||pa||

gOkuladoLage tAnippa
mUru lOkake tAnappa
koLala dhvaniya mADutalippa
namma turugaLa kAyutalippa ||1||

vRuMdAvanadoLu niMda
naMdana kaMda gOviMda
koLala dhvani bahu caMda
mUjagava pAlipa mukuMda ||2||

surataruvina neraLalli
ivana hegalina mEle koDali
nerediha gOpiyaralli
gOpAlarADuta lIlegaLalli ||3||

karpUra vILyava meluva
namma kastUri tilaka uMgurava
muttina Ole vara celuva
vistaradi hadinAlku lOka poreva ||4||

himakara caraNada karana
mUjaga pAlipa karuNa
amararige olidavana namma
puraMdara viThalarAyana ||5||

Leave a Reply

Your email address will not be published. Required fields are marked *

You might also like

error: Content is protected !!