Entu ninna pooje

Composer : Shri Purandara dasaru

By Smt.Shubhalakshmi Rao

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ [ಪ]
ಚಿಂತಾಯಕನೆ ನಿನ್ನ ನಾಮ ಎನಗೊಂದು ಕೋಟಿ [ಅ.ಪ]

ಪವಿತ್ರೋದಕದಿ ಪಾದ ತೊಳೆವೆನೆಂಬೆನೆ |
ಪಾವನಳಾದ ಗಂಗೆ ಪಾದೋದ್ಭವೆ ||
ನವ ಕುಸುಮವ ಸಮರ್ಪಿಸುವೆನೆಂದರೆ ಉದು
ಭವಿಸಿದನು ಅಜ ನಿನ್ನ ಪೊಕ್ಕಳ ಪೂವಿನಲ್ಲಿ [೧]

ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ
ದ್ವೀಪಂಗಳೆಲ್ಲವನು ಬೆಳೆಗುತಿಹವು ||
ಆಪೋಶನವನಾದರೀ-ವೆನೆಂಬೆನೆ
ಆಪೋಶನವಾಯಿತೇಳು ಅಂಬುಧಿಯು [೨]

ಕಾಣಿಕೆಯಿತ್ತಾದರೂ ಕೈ ಮುಗಿವೆನೆಂಬೆನೆ
ರಾಣಿವಾಸವು ಸಿರಿದೇವಿ ನಿನಗೆ ||
ಮಾಣದೆ ಮನದೊಳು ನಿನ್ನ ನಾಮ ಸ್ಮರಣೆ
ಧ್ಯಾನವನು ದಯ ಮಾಡು ಪುರಂದರವಿಠಲ [೩]


eMtu ninna pUje mADi meccisuveno [pa]
ciMtAyakane ninna nAma enagoMdu kOTi [a.pa]

pavitrOdakadi pAda toLeveneMbene |
pAvanaLAda gaMge pAdOdBave ||
nava kusumava samarpisuveneMdare udu
Bavisidanu aja ninna pokkaLa pUvinalli [1]

dIpavanu beLaguvene ninna kaMgaLu sapta
dvIpaMgaLellavanu beLegutihavu ||
ApOSanavanAdarI-veneMbene
ApOSanavAyitELu aMbudhiyu [2]

kANikeyittAdarU kai mugiveneMbene
rANivAsavu siridEvi ninage ||
mANade manadoLu ninna nAma smaraNe
dhyAnavanu daya mADu puraMdaraviThala [3]

Leave a Reply

Your email address will not be published. Required fields are marked *

You might also like

error: Content is protected !!