Composer : Shri Purandara dasaru
ಚಿಂತೆ ಯಾತಕೋ ಬಯಲ
ಭ್ರಾಂತಿ ಯಾತಕೋ, ಮನುಜಾ ||ಪ||
ಕಂತು ಪಿತನ ದಿವ್ಯ ನಾಮ
ಮಂತ್ರವಿರಲು ಜಪಿಸದೆ || ಅ.ಪ||
ಏಳುತುದಯ ಕಾಲದಲ್ಲಿ
ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ
ಹಾಲ ಕೊಟ್ಟು ಸಲಹಿತೆ ? [೧]
ಸಡಗರದಲಿ ನಾರಿಜನರು
ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ
ಪಿಡಿದು ರಕ್ಷಣೆ ಮಾಳ್ಪರಾರೊ ? [೨]
ಹೆತ್ತ ತಾಯಿ ಸತ್ತ ಶಿಶುವು
ಮತ್ತೆ ಕೆಟ್ಟಿತೆಂಬರು ಜನರು
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ
ನಿತ್ತು ರಕ್ಷಣೆ ಮಾಡುವರಾರು ? [೩]
ಗಟ್ಟಿ ಮಣ್ಣಿನ ಶಿಶುವ ಮಾಡಿ
ಹೊಟ್ಟೆಯೊಳಗೆ ಇರಿಸುವಂಥ
ಕೊಟ್ಟ ದೈವಕೊಂಡೋಯ್ದರೆ
ಕುಟ್ಟಿಕೊಂಡು ಅಳುವದ್ಯೇಕೆ [೪]
ನಂಬಿಗೆಗಿವು ಸಾಲವೆಂದು
ಹಂಬಲಿಪುದು ಲೊಕವೆಲ್ಲ
ನಂಬಿ ಪುರಂದರವಿಠ್ಠಲ-
ನೆಂಬ ನಾಮ ನುಡಿದ ಮೇಲೆ [೫]
ciMte yAtakO bayala
BrAMti yAtakO, manujA ||pa||
kaMtu pitana divya nAma
maMtraviralu japisade || a.pa||
ELutudaya kAladalli
vELeyaritu kUguvaMtha
kOLi tanna marige moleya
hAla koTTu salahite ? [1]
saDagaradali nArijanaru
haDeyuvAga sUlagitti
aDaviyoLage heruva mRugava
piDidu rakShaNe mALparAro ? [2]
hetta tAyi satta shishuvu
matte keTTiteMbaru janaru
huttina hAvige gubbige moleya
nittu rakShaNe mADuvarAru ? [3]
gaTTi maNNina SiSuva mADi
hoTTeyoLage irisuvaMtha
koTTa daivakoMDOydare
kuTTikoMDu aLuvadyEke [4]
naMbigegivu sAlaveMdu
haMbalipudu lokavella
naMbi puraMdaraviThThala-
neMba nAma nuDida mEle [5]
Leave a Reply