Composer : Shri Indiresha Ankita
ಏನು ಕಾರಣ ಕೃಷ್ಣಾ ಏನು ಕಾರಣ [ಪ]
ಏನು ಕಾರಣ ಎನ್ನ ಕಣ್ಣಿಗೆ ನೀನು
ತೋರದಿರುವುದಿದು [ಅ.ಪ]
ಖಗ ಮೃಗಾದಿಗಳಿಗೆ ನೀನು
ರಘು ಕುಲೇಶ ದರ್ಶನವಿತ್ತೆ
ಸೊಗಸು ಮೋಕ್ಷವಿತ್ತೆ ಅದಕು
ಖಗವರೂಢ ಕಡಿಮೆಯೇನು (೧)
ಶಬರಿ ಎಂಜಲುಂಡು ವನದಿ
ಅಬುಜ ಶಯನ ದರುಶವಿತ್ತೆ
ಕುಬುಜೆ ಕೂಡಿದೆಲ್ಲೊ ಅದಕು
ವಿಬುಧ ವಂದ್ಯ ಕಡಿಮೆ ನೋವಾ (೨)
ಮುರಲಿನೂದಿ ವನದಿ ಹರಿಯು
ತರುಲ ತಾದಿಗಳಿಗೆ
ದರ್ಶನವಿತ್ತು ಕಾಯ್ದು ಅದಕು
ಪರಮ ಪುರುಷ ಕಡಿಮೆ ನೋವಾ (೩)
ಹಾದಿಲ್-ಹೋಗೋ ಕೀಟನಿಗೆ
ವೇದನಾಥ ದರುಶನಿತ್ತು
ಆದಿ ವರ್ಣದವನು ಅದಕು
ಬಾದರಾಯಣ ಕಡಿಮೆ ಏನೋ (೪)
ಎಷ್ಟು ಎಷ್ಟು ಜನರಿಗೀಗ
ಭೆಟ್ಟಿ ನೀಡಿ ಸುಖವನಿತ್ತೆ
ಶ್ರೇಷ್ಠನೆಂದು ಸ್ತುತಿಪೆ ನಿನ್ನ
ಕೃಷ್ಣ ಕರುಣಿ ಬೇಗನೆ ಬಾ (೫)
ಇಂಥಾ ಜನುಮದಲ್ಲಿ ನಿನ್ನ
ಕಂತು ಪಿತನೆ ಕಾಣದಿರಲು
ಪಂಥಗಾಣೆ ಮುಂದಿನ ತನು
ಎಂಥದಾಗುವುದೋ ತಿಳಿಯೆ (೬)
ಇಂದಿರೇಶ ಮುರಲಿ ಶೋಭಿತ
ಇಂದು ಬಿಂಬ ವಿಜಯ ವದನ
ತಂದು ತೋರಿಸೆನ್ನ ಮನಕಾ-
ನಂದಿಸೀಗ ನಂದನಸುತ (೭)
Enu kAraNa kRuShNA Enu kAraNa [pa]
Enu kAraNa enna kaNNige nInu
tOradiruvudidu [a.pa]
Kaga mRugAdigaLige nInu
raGu kulESa darSanavitte
sogasu mOkShavitte adaku
KagavarUDha kaDimeyEnu (1)
Sabari eMjaluMDu vanadi
abuja Sayana daruSavitte
kubuje kUDidello adaku
vibudha vaMdya kaDime nOvA (2)
muralinUdi vanadi hariyu
tarula tAdigaLige
darSanavittu kAydu adaku
parama puruSha kaDime nOvA (3)
hAdil-hOgO kITanige
vEdanAtha daruSanittu
Adi varNadavanu adaku
bAdarAyaNa kaDime EnO (4)
eShTu eShTu janarigIga
BeTTi nIDi suKavanitte
SrEShThaneMdu stutipe ninna
kRuShNa karuNi bEgane bA (5)
iMthA janumadalli ninna
kaMtu pitane kANadiralu
paMthagANe muMdina tanu
eMthadAguvudO tiLiye (6)
iMdirESa murali SOBita
iMdu biMba vijaya vadana
taMdu tOrisenna manakA-
naMdisIga naMdanasuta (7)
Leave a Reply