Composer : Shri Kanakadasaru
ರಾಮಾನುಜರೇ ನಮೋ ನಮೋ ಸ್ವಾಮಿ
ಲಕ್ಷ್ಮಣ ರೂಪ ನಮೋ ನಮೋ [ಪ]
ಪಿಡಿದಿರೆ ದಂಡಿಕಾ ವೇಷ್ಟಿ ಮೃದಿಕಾ, ನಿಡು
ಶಿಖಿ ಯಜ್ಞೋಪವೀತ-ದಿಂದ,
ತೊಡೆದ ದ್ವಾದಶ ನಾಮ ಶ್ರೀ ಚೂರ್ಣದಿ ಒಪ್ಪುವ
ಒಡೆಯ ರಾಮಾನುಜರೆ ನಮೋ ನಮೋ [೧]
ಪಂಕಜನಾಭನ ಪಾವನ ಮೂರುತಿ,
ಶಂಕೆಯಿಲ್ಲದೆ ನೆನೆವರ ಪಾಲಿಪನೆ
ಮುಂಕೊಂಡು ಶ್ರುತಿಮತ ಚಾರ್ವಾಕರ
ಗೆದ್ದ, ಓಂಕಾರ ಮೂರುತಿ ನಮೋ ನಮೋ [೨]
ಕೇಶವ ಪಾದಾಂಬುಜ ಮಧುಕರಾ,
ಪಾಷಂಡ ಗರ್ವಹರ ಗುರು ತಿಲಕ
ಶೇಷಾವತಾರಿ ಮುನೀಶ ವಂದಿತ
ಆದಿಕೇಶವ ಮೂರುತಿ ನಮೋ ನಮೋ [೩]
rAmAnujarE namO namO svAmi
lakShmaNa rUpa namO namO [pa]
piDidire daMDikA vEShTi mRudikA, niDu
SiKi yaj~jOpavIta-diMda,
toDeda dvAdaSa nAma SrI cUrNadi oppuva
oDeya rAmAnujare namO namO [1]
paMkajanABana pAvana mUruti,
SaMkeyillade nenevara pAlipane
muMkoMDu Srutimata cArvAkara
gedda, OMkAra mUruti namO namO [2]
kESava pAdAMbuja madhukarA,
pAShaMDa garvahara guru tilaka
SEShAvatAri munISa vaMdita
AdikESava mUruti namO namO [3]
Leave a Reply