Prarthana suladi – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
(ಸಂಸಾರ ನಿವೃತ್ತಿ ವಿಷಯ ಪ್ರಾರ್ಥನಾ ಸುಳಾದಿ)
ರಾಗ: ಕೇದಾರಗೌಳ

ಧ್ರುವತಾಳ

ಈಸಲಾರೆನು ನಾನು ಈ ಸಂಸಾರದೊಳು
ಏಸೇಸು ಪರಿ ವಿಚಾರಿಸಲು ನೆಲೆಗಾಣೆ
ಭೇಷಜವೆಂಬೊ ಮಾಯ ಪಾಶಗಳಕ್ಕೆ ಸುತ್ತಿ
ಶ್ವಾಸೋಚ್ಛ್ವಾಸ ಬರಲೀಸದೆ ಕೊಲ್ಲುತಿದೆ
ಕೀಸಿದಾ ಹುಣ್ಣಿಗೆ ಸಾಸಿವೆ ತೊಡದಂತೆ
ಘಾಸಿಗೊಳಿಸುತ್ತಾಯಾಸವ ಬಡಿಸುತ್ತಾ
ಶೇಷ ಕರ್ನಕ್ಕೆ ಕರ್ಕಶವಾಗಿದೆ ಇದರ
ಘೋಷ ಕೇಳಿದರೆ ಆಕಾಶ ನಡುಗುತಿದೆ
ಹೇಸಿಕೆ ಸಂಸಾರ ಸುಲಭವೆಂದ ಮಾ –
ನೀಸಗೆ ಶರಣೆಂದು ನಾ ಶಿರಬಾಗುವೆ
ದೇಶಾಧಿಪತಿ ನಿಧೆ ವಿಜಯವಿಟ್ಠಲ ನಿನ್ನ
ಆಶೆ ಮಾಡದೆ ವ್ಯರ್ಥ ಕ್ಷೇಶ ಮಾನವನಾದೆ || ೧ ||

ಮಟ್ಟತಾಳ

ಬಿಸಲೊಳಗೋರ್ವನು ಪೋಗುತ ಪೋಗುತಲಿ
ಬಿಸಲಿಗಾರದಲೇವೆ ತನ್ನ ನೆರಳು ತಾನೆ
ಬಿಸಲಿಗೆ ಮರೆಮಾಡಿಕೊಂಡು ಕುಳಿತು ಥ –
ಮ್ಮಿಸಿ ಪೋಗುವೆನೆಂದು ಅಡವಿಯೆಲ್ಲ ತಿರುಗಿ
ದೆಸೆಗೇಡಾದಂತೆ ಸಂಸಾರವೆಂಬುವಂಥ
ವಿಷದ ನೆಳಲಲ್ಲಿ ಗತಿ ತಂಪಾಗುವದೆ
ವಿಷಾಕೃತೇ ನಾಮ ವಿಜಯವಿಟ್ಠಲರೇಯ
ಪಶು ಜ್ಞಾನಿಯಾಗಿ ಕಾಲವನು ಕಳದೆ || ೨ ||

ತ್ರಿವಿಡಿತಾಳ

ಮಡದಿ ಮಕ್ಕಳು ಸರ್ವ ಒಡೆತನ ಸಡಗರ
ಪಡದೆ ನಾನೆಂಬೊ ಉಘ್ಘಡದಲ್ಲಿ ತಿರುಗಿ
ಬಿಡದೆ ಘಳಿಸಿ ಘತ್ತೈಸಿ ಧನಧಾನ್ಯವ
ಕೊಡದೆ ಬಚ್ಚಿಟ್ಟು ಬಲು ಕೃಪಣನಾಗಿ
ಮಡಿದರೆ ಆರಿಗಾಗುವದೆಂದು ತಿಳಿಯದೆ
ಮಡಗಿ ಮಡಗಿಕೊಂಡು ತೊಳಲುವೆನೊ
ಪೊಡವೇಶ ಮಹಯಜ್ಞ ವಿಜಯವಿಟ್ಠಲ ಎನ್ನ
ಒಡೆಯ ನಿನ್ನಡಿಗಳ ನೆನಿಯದೆ ಕಲಿಯಾದೆ || ೩ ||

ಅಟ್ಟತಾಳ

ಗಾಣದ ಖಣಿ ಒಬ್ಬ ಮಾನವನು ನೋಡಿ
ಏನಿದರ ಸುಖ ಕಾಣುವೆನೆನುತಲಿ
ತಾನು ರಾತ್ರಿಯಲ್ಲಿ ಲೀನನಾಗಿ ಪೋಗಿ
ಗಾಣದ ಒಳಗಿರೆ ಗಾಣಿಗ ತಿಲತುಂಬಿ
ಕಾಣದಂತೆ ಇರಲಾ ದಿನ ಪೋಗಲು
ಗಾಣವಾಡಲು ಒಳಗೀನ ಸುಖವನ್ನು
ಏನೇನು ಕಾಣುವ ಈ ನಾಯಿ ಸಂಸಾರ
ಕೋಣಿಯೊಳಗೆ ಬಿದ್ದು ನಾನದರಿಮ್ಮಿಡಿ ಬ್ಯಾನೆ
ಬಡುವನಯ್ಯ
ಪ್ರಾಣದನ್ನಾಮ ಸಿರಿ ವಿಜಯವಿಟ್ಠಲ ದಯ –
ವಾನು ಪಾಲಿಸಿ ಪುನೀತನ್ನ ಮಾಡೊ || ೪ ||

ಆದಿತಾಳ

ಅಡವಿಯ ಗಿಡವೆದ್ದು ಬಡಿದರೆ ಆರು ಎನ್ನ
ಬಿಡಿಸಿ ಕೊಂಡೊಯ್ದು ಕರ ಪಿಡಿವರು ಒಬ್ಬರುಂಟೆ
ನಡು ಅಡವಿ ಸಂಸಾರ ನಡುವೆ ಬಿಡದಲ ಸುತ್ತ
ಮುಡಿ ಹಿಡಿಕೊಂಡು ಸುತ್ತ ಬಿಡದೆ ಸುತ್ತುತಲಿರೆ
ಒಡಿಯ ಪ್ರಭುವೆ ನಾಮ ವಿಜಯವಿಟ್ಠಲ ನಿನ್ನ
ಅಡಿಗಳ ತೋರಿ ಭವದೆಡಿಯಿಂದ ದೂರ ಮಾಡೊ || ೫ ||

ಜತೆ

ಬರಿದಾಗದಂತೆನ್ನ ಸೊಲ್ಲು ಲಾಲಿಸು ಮಹೇ –
ಶ್ವರ ನಾಮ ವಿಜಯವಿಟ್ಠಲ ಭವಾಂಬುಧಿ ವಡಬ ||


SrIvijayadAsArya viracita
prArthanA suLAdi
(saMsAra nivRutti viShaya prArthanA suLAdi)
rAga: kEdAragauLa

dhruvatALa

IsalArenu nAnu I saMsAradoLu
EsEsu pari vicArisalu nelegANe
BEShajaveMbo mAya pASagaLakke sutti
SvAsOcCvAsa baralIsade kollutide
kIsidA huNNige sAsive toDadaMte
GAsigoLisuttAyAsava baDisuttA
SESha karnakke karkaSavAgide idara
GOSha kELidare AkASa naDugutide
hEsike saMsAra sulaBaveMda mA –
nIsage SaraNeMdu nA SirabAguve
dESAdhipati nidhe vijayaviTThala ninna
ASe mADade vyartha kShESa mAnavanAde || 1 ||

maTTatALa

bisaloLagOrvanu pOguta pOgutali
bisaligAradalEve tanna neraLu tAne
bisalige maremADikoMDu kuLitu tha –
mmisi pOguveneMdu aDaviyella tirugi
desegEDAdaMte saMsAraveMbuvaMtha
viShada neLalalli gati taMpAguvade
viShAkRutE nAma vijayaviTThalarEya
paSu j~jAniyAgi kAlavanu kaLade || 2 ||

triviDitALa

maDadi makkaLu sarva oDetana saDagara
paDade nAneMbo uGGaDadalli tirugi
biDade GaLisi Gattaisi dhanadhAnyava
koDade bacciTTu balu kRupaNanAgi
maDidare ArigAguvadeMdu tiLiyade
maDagi maDagikoMDu toLaluveno
poDavESa mahayaj~ja vijayaviTThala enna
oDeya ninnaDigaLa neniyade kaliyAde || 3 ||

aTTatALa

gANada KaNi obba mAnavanu nODi
Enidara suKa kANuvenenutali
tAnu rAtriyalli lInanAgi pOgi
gANada oLagire gANiga tilatuMbi
kANadaMte iralA dina pOgalu
gANavADalu oLagIna suKavannu
EnEnu kANuva I nAyi saMsAra
kONiyoLage biddu nAnadarimmiDi byAne
baDuvanayya
prANadannAma siri vijayaviTThala daya –
vAnu pAlisi punItanna mADo || 4 ||

AditALa

aDaviya giDaveddu baDidare Aru enna
biDisi koMDoydu kara piDivaru obbaruMTe
naDu aDavi saMsAra naDuve biDadala sutta
muDi hiDikoMDu sutta biDade suttutalire
oDiya praBuve nAma vijayaviTThala ninna
aDigaLa tOri BavadeDiyiMda dUra mADo || 5 ||

jate

baridAgadaMtenna sollu lAlisu mahE –
Svara nAma vijayaviTThala BavAMbudhi vaDaba ||

Leave a Reply

Your email address will not be published. Required fields are marked *

You might also like

error: Content is protected !!