Prarthana suladi 65 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ – ೬೫
(ಹರಿದಾಸನನ್ನ ಮಾಡಿ ಸಂಸಾರ
ನಿವೃತ್ತಿ ಮಾಡೆಂದು ಪ್ರಾರ್ಥನೆ.)
ರಾಗ: ಕಲ್ಯಾಣಿ

ಧ್ರುವತಾಳ

ಪೊರಿಯೊ ಕರುಣದಲೆನ್ನ ಪೊರಿಯದಿದ್ದರೆ ನಿನ್ನ
ದುರುಳತನಗಳೆಲ್ಲ ದೂರದೆ ಬಿಡೆನಲ್ಲ
ಪೊರಿಯೊ ಕೀರ್ತಿಯ ಪೊತ್ತು ಪೊರಿಯೊ ಮತಿಯನಿತ್ತು
ಸರಿಯಿಲ್ಲ ನಿನಗೆಲ್ಲಿ ವರ ಪರಾಪರದಲ್ಲಿ
ಮರಿಯದಿರೆಲೊ ನಮ್ಮ ಗಿರಿಯ ಮೇಲ್ಗಿರಿತಿಮ್ಮ
ಶರಣೆಂಬೆ ಶಿರವಾಗಿ ಕರವೆತ್ತಿ ನಿನಗಾಗಿ
ಹರಣವ ಒಪ್ಪಿಸುವೆ ನಿರುತ ಸಮರ್ಪಿಸುವೆ
ಶೆರೆಯಾಗಿ ಸಂಸಾರವೆಂಬೊ ಮಹ ಗರಳ
ಶರಧಿಯೊಳಗಿರಲಾರೆ ಶರಧಿಶಯನ ಹರೆ
ಗುರುವೆ ಬ್ರಹ್ಮವರ್ಧನ ವಿಜಯವಿಟ್ಠಲ
ಎರದು ನಿನ್ನ ನಾಮ ನಾಲಿಗೆಯಲಿ
ಎರಕಾ ಹೊಯ್ದಂತಿರಲಿ
ಎರವೆನ್ನದಿರು ನಿನ್ನೆದಿರು ನಿನ್ನ
ಚರಣಯುಗಕೆ ಸಾವಿರ ಕೋಟಿ ಪ್ರಣಾಮ || ೧ ||

ಮಟ್ಟತಾಳ

ಹರಿದಾಸನ ಮಾಡು ಹರಿದಾಸನ ಮಾಡು
ಹರಿ ಕರುಣದಿಂದ ಹರಿದಾಸನಾಗುವ
ಹರತಿಕೆಯನು ತೋರಿ ಹರಿ ಹರಿದಾಡುವ
ಹರುಷಾಂಬುಧಿಯೊಳಗೆ
ಹರಿ ನಿಲಿಸಿ ಎನ್ನ ಹರಿದಿಂಬ ದುರಿತದ
ಹರಿಬಕೆ ನೀನೊದಗಿ ಪರಿಪಾಲಿಸು
ದರ್ಶನ ನಾಮ ವಿಜಯವಿಟ್ಠಲ ಎನ್ನ
ಹರಿ ಮಾರುವದೈಯ್ಯಾ ಹರಿ ಬಲ್ಲವರಿಗೆ || ೨ ||

ತ್ರಿವಿಡಿತಾಳ

ಮಜ್ಜ ಮಾಂಸ ರಕ್ತ ತ್ವಕು ಚರ್ಮಾಸ್ತಿಗಳಲ್ಲಿ
ರಜ್ಜದೊಳಗೆ ಶಿಲ್ಕಿ ನೋವಾದಿನೊ
ಮಜ್ಜಿಗಿಂದಲಿ ಪಾಲು ಹೆಪ್ಪುಗೊಟ್ಟಂತೆನ್ನ
ಸಜ್ಜನರೊಳು ಕಲೆಸು ಕಮಲನಾಭ
ಮೂಜ್ಜಗ ಮಧ್ಯದಲಿ ನಿನ್ನ ಪೋಲುವ ದೈವ
ಸಜ್ಜಾಗಿ ನೋಡಲು ಕಾಣೆನಯ್ಯ
ಮಜ್ಜಿಗಿ ಕದ್ದ ಸವಿತ ವಿಜಯವಿಟ್ಠಲ
ಅಜ್ಜುಗಾರನು ನೀನೆ ಅನಂತ ಕಾಲದಲ್ಲಿ || ೩ ||

ಅಟ್ಟತಾಳ

ಹೆಜ್ಜೆ ಹೆಜ್ಜೆಗೆ ನಿನ್ನ ಮರೆದರೆ ನಿನ್ನ ಪಾ –
ದಾಬ್ಜಗಳಾಣೆ ಜನನಾದಿ ವಿರಹಿತ
ಕಜ್ಜಾಯಕೆ ಮುರಿದದೆ ನಿನ್ನ ಪಾ –
ದಾಬ್ಜದ ಭಕ್ತಿಗೆ ತಿಳಿದಾದೆ ಮಾರ್ಗ
ಲಜ್ಜಗೇಡಿ ಸ್ವಸ್ಥ ವಿಜಯವಿಟ್ಠಲ
ಗುಜ್ಜಿಗೊಲಿದ ಮಹಗಾರುಡ ಮಹಿಮ || ೪ ||

ಆದಿತಾಳ

ಆನು ನಿನ್ನ ಬಯಸಿ ಬಂದೆ ಏನು ಇನ್ನೇನು
ನೀನೆ ದಯ ಮಾಡದಿರಲೇನು ಮುಂದೇನು
ಬೋನಿನೊಳು ಕುರಿಯಿರಲು ಪುಲಿ ಪೋಗಿ ಸಿಕ್ಕಂತೆ
ಹೀನ ಸಂಸಾರಕ್ಕೆ ಬಿಡದೆ ಪ್ರಾಣವನ್ನು ಒಪ್ಪಿಸುವೆ
ಏನು ಯಿನ್ನೇನು ಸ್ವಾಮಿ ಏನು ಯಿನ್ನೇನು
ಜಾನಕೀಶ ಚತುರ್ಭಾವ ವಿಜಯವಿಟ್ಠಲರೇಯ
ಯೋನಿ ಮುಖಕೆ ಬಾರದಂತೆ ಪೋಣಿಸುವದು ಹಾರದೊಳಗೆ || ೫ ||

ಜತೆ

ಅಭಯವನೀಯೊ ಸ್ವಾಭುಜ ವಿಜಯವಿಟ್ಠಲ
ಅಭಿಪ್ರಾಯವರಿತು ಸಾಕುವ ಅನಿಮಿಷಧೀಶ ||


SrIvijayadAsArya viracita
prArthanA suLAdi – 65
(haridAsananna mADi saMsAra
nivRutti mADeMdu prArthane.)
rAga: kalyANi

dhruvatALa

poriyo karuNadalenna poriyadiddare ninna
duruLatanagaLella dUrade biDenalla
poriyo kIrtiya pottu poriyo matiyanittu
sariyilla ninagelli vara parAparadalli
mariyadirelo namma giriya mElgiritimma
SaraNeMbe SiravAgi karavetti ninagAgi
haraNava oppisuve niruta samarpisuve
SereyAgi saMsAraveMbo maha garaLa
SaradhiyoLagiralAre SaradhiSayana hare
guruve brahmavardhana vijayaviTThala
eradu ninna nAma nAligeyali
erakA hoydaMtirali
eravennadiru ninnediru ninna
caraNayugake sAvira kOTi praNAma || 1 ||

maTTatALa

haridAsana mADu haridAsana mADu
hari karuNadiMda haridAsanAguva
haratikeyanu tOri hari haridADuva
haruShAMbudhiyoLage
hari nilisi enna haridiMba duritada
haribake nInodagi paripAlisu
darSana nAma vijayaviTThala enna
hari mAruvadaiyyA hari ballavarige || 2 ||

triviDitALa

majja mAMsa rakta tvaku carmAstigaLalli
rajjadoLage Silki nOvAdino
majjigiMdali pAlu heppugoTTaMtenna
sajjanaroLu kalesu kamalanABa
mUjjaga madhyadali ninna pOluva daiva
sajjAgi nODalu kANenayya
majjigi kadda savita vijayaviTThala
ajjugAranu nIne anaMta kAladalli || 3 ||

aTTatALa

hejje hejjege ninna maredare ninna pA –
dAbjagaLANe jananAdi virahita
kajjAyake muridade ninna pA –
dAbjada Baktige tiLidAde mArga
lajjagEDi svastha vijayaviTThala
gujjigolida mahagAruDa mahima || 4 ||

AditALa

Anu ninna bayasi baMde Enu innEnu
nIne daya mADadiralEnu muMdEnu
bOninoLu kuriyiralu puli pOgi sikkaMte
hIna saMsArakke biDade prANavannu oppisuve
Enu yinnEnu svAmi Enu yinnEnu
jAnakISa caturBAva vijayaviTThalarEya
yOni muKake bAradaMte pONisuvadu hAradoLage || 5 ||

jate

aBayavanIyo svABuja vijayaviTThala
aBiprAyavaritu sAkuva animiShadhISa ||

Leave a Reply

Your email address will not be published. Required fields are marked *

You might also like

error: Content is protected !!