Composer : Shri Gururama vittala
ಪ್ರಾಣದೇವ ಜೀಯ್ಯಾ ದೇಹದಲಿ
ತ್ರಾಣ ತಗ್ಗಿತಯ್ಯಾ [ಪ]
ಕಾಣೆ ಕಾಯುವರ ನೀ ಕೈ ಬಿಟ್ಟರೆ
ಜಾಣರಾಮ ಕಾರ್ಯ ಧುರೀಣ ಗುರುವೇ [ಅ.ಪ]
ಕಾಲು ನೋಯುತಿಹುದು ಕೈಸೋತು
ಬೀಳಾಗಿರುತಿಹುದು |
ಕಾಲಮೃತ್ಯುಬಹ ಕಾಲದಲ್ಲಿ ಗೋ
ಪಾಲನ ಸ್ಮೃತಿ ಕೊಡು ಜಾಲವ ಮಾಡದೆ [೧]
ಜನರ ಬೇಡಲಾರೆ ನಿನಗಿದು
ವಿನೋದವೇನೋ ದೊರೆ |
ಅನುದಿನದಲಿ ದುರ್ಜನರರಿಯದೆಯಿವ
ಧನಿಕನೆನ್ನುತಲಿ ಗೊಣಗಿ ಕೊಂಬುವರು [೨]
ವರುಷವೈವತ್ತಾರು ಕಳೆದಿತು
ಪರಿಪಾಲಿಪರ್ಯಾರು |
ಕರವಪಿಡಿದು ಶ್ರೀ ಗುರುರಾಮವಿಠಲನ
ಚರಣವ ತೋರಿಸಿ ದುರಿತವ ಕಳೆಯೈ [೩]
prANadEva jIyyA dEhadali
trANa taggitayyA [pa]
kANe kAyuvara nI kai biTTare
jANarAma kArya dhurINa guruvE [a.pa]
kAlu nOyutihudu kaisOtu
bILAgirutihudu |
kAlamRutyubaha kAladalli gO
pAlana smRuti koDu jAlava mADade [1]
janara bEDalAre ninagidu
vinOdavEnO dore |
anudinadali durjanarariyadeyiva
dhanikanennutali goNagi koMbuvaru [2]
varuShavaivattAru kaLeditu
paripAliparyAru |
karavapiDidu SrI gururAmaviThalana
caraNava tOrisi duritava kaLeyai [3]
Leave a Reply