ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ
ಶ್ರೀನಿವಾಸನ ಪ್ರಾರ್ಥನಾ ಸುಳಾದಿ
ರಾಗ: ನಾಟಿ
ಧ್ರುವತಾಳ
ಶ್ರೀನಿವಾಸನೆ ಪೂರ್ಣಜ್ಞಾನನಂದನೆ ಸ್ವಾಮಿ
ದೀನವತ್ಸಲ ಕರುಣಿ ಜ್ಞಾನಿಗಳರಸನೆ
ಭಾನುಕೋಟಿತೇಜ ಜ್ಞಾನಗಮ್ಯ ಎನ್ನ
ಹೀನಮತಿಯ ಬಿಡಿಸಿ ಕಾಯೊ ಕೃಷ್ಣ
ಅನಾದಿಕಾಲದಿಂದ ನಾನು ನಿನ್ನವರವ
ನೀನೆನರಿಯೆ ಜಗದಂತರ್ಯಾಮಿ
ಏನು ಮಾಡುವದೆಲ್ಲ ಹೊರ ಒಳಗೆ ನಿಂತು
ನೀನೆ ಮಾಡಿಸುತಿಪ್ಪೆ ತಿಳಿಸದಲೆ
ನಾನು ನನ್ನದು ಎಂಬೊ ಹೀನ ಜ್ಞಾನ ಪುಟ್ಟಿಸಿ
ಕಾಣಿಸಿಕೊಳುವಲ್ಲಿ ಜಾಣತನದಿ
ಕಾಣದ ಕುರುಡಗೆ ಕನ್ನಡಿ ಕೊಟ್ಟಂತೆ
ನಾನಾ ಶಾಸ್ತ್ರವು ಓದಿ ಪೇಳಲೇನು
ನೀನು ನಿನ್ನವರಿಂದ ಕೂಡಿ ಮಾಡುವ ಚೇಷ್ಟೆ
ತಾನರಿಯದ ಮನುಜ ಜ್ಞಾನಿ ಏನೋ
ಏನು ಓದಿದರೇನು ಏನು ಪೇಳಿದರೇನು
ನೀನೊಲಿಯದಿರೆ ಆನಂದ ಪುಟ್ಟುವದೆ
ಜ್ಞಾನಿಗಳು ಹಿಂದೆ ಕೇಳಿಕೊಂಡಂತೆ ಸ್ವಾಮಿ
ಆ ನುಡಿಗಳಲ್ಲಿ ದೃಷ್ಟಿಯಿಟ್ಟೂ
ನಾನು ಕೇಳಿದಂತೆ ತರತಮ ಪಂಚಭೇದ
ಜ್ಞಾನ ಪುಟ್ಟಿಸಿ ನಿನ್ನ ಮೂರ್ತಿಗಳ
ಧ್ಯಾನವ ಮಾಡಿಸೊ ಅನುದಿನ ತಪ್ಪದಲೆ
ಶ್ರೀನಾಥ ಎನ್ನ ಹೃದ್ಗುಹನಿವಾಸೀ
ದಾನವಾಂತಕ ಗುರುಶ್ರೀಶವಿಟ್ಠಲರೇಯಾ
ದೀನ ರಕ್ಷಕನೆಂಬೊ ಬಿರದು ತೋರೋ || ೧ ||
ಮಟ್ಟತಾಳ
ಪದುಮನಾಭನೆ ಎನ್ನ ಮದಡ ಬುದ್ಧಿಯ ನೋಡಿ
ಗದಗದ ನಡುಗುವೆನೊ ಹೃದಯದೊಳಗೆ, ನಿನ್ನ
ಪದಗಳ ಪೂಜಿಸದೆ ಅಧಮ ಕರ್ಮಗಳಲ್ಲಿ
ಒದಗಿ ಪೋಗುವದಯ್ಯಾ ಬುಧರ ಸಂಗದಲ್ಲಿದ್ದು
ಮುದದಿಂದ ನಿನ್ನ ಮಹಿಮೆ ವದನದಲಿ ಪೊಗಳದಲೆ
ಮದ ಮತ್ಸರವಿಡಿದು ಕದುವದು ಸುಗುಣಗಳ
ವಿಧಿಪಿತ ನಿನ್ನಗಲಿ ಸುಖವ ಕಾಣೆನೊ ಪದೋ –
ಪದಿಗೆ ನಿನ್ನಯ ಸ್ಮರಣೆ ವೊದಗಿಸೊ ನರಹರಿ
ಮದನಜನಕ ಭವದ ಉದಧಿ ದಾಟಿಸೋ ತಂದೆ
ಉದಭವಿಸಲಾರೇ ನಾನಾ ಯೋನಿಗಳಲ್ಲಿ
ಒದಗಿ ಪಾಲಿಸೋ ಈಶ ಗುರುಶ್ರೀಶವಿಟ್ಠಲ || ೨ ||
ತ್ರಿವಿಡಿತಾಳ
ದಾಸನೆನಿಸಿದೆ ಅಭಾಸಕ ನಾನಾಗೀ
ಹೇಸಿಕಿ ಮಾರ್ಗವ ಆಚರಿಸೀ
ಕಾಸುವೀಸದ ಲಾಭಗೋಸುಗ ತಿರುಗಿದೆ
ದೇಶದೇಶಂಗಳ ಹೇಸಿಕಿ ಜನರಲ್ಲಿ
ಆ ಸುಜನರು ನುಡಿದ ದಿವ್ಯ ಉಕ್ತಿಗಳನ್ನು
ಸಾಸಿವಿ ಕಾಳಷ್ಟು ತಿಳಿಯದಲೇ
ಕಾಸಿಗೆ ಬಾರದ ಕಥೆಗಳನ್ನೇ ಪೇಳಿ
ಲೇಸಾಗಿ ಪೊಟ್ಟಿಯ ಪೊರದೆನಯ್ಯಾ
ಶ್ರೀಶ ನಿನ್ನಯ ಪಾದ ಧ್ಯಾಸದಲ್ಲಿದ್ದು ವಿ –
ಶ್ವಾಸ ಸಜ್ಜನರಲ್ಲಿ ಮಾಡಲಿಲ್ಲ
ಈಸು ಬಗೆಯಲಿ ನರದಾಸನಾಗಿ ಹರಿ –
ದಾಸನೆಂದೆನಿಸಿದೇ ಬಾಹೀರದಿ
ಶ್ರೀಶ ನಿನ್ನಯ ನಿಜದಾಸರಂತೆ ತೋರಿ
ಮೋಸಗೊಳಿಸುವೆನೋ ಅಲ್ಪಜ್ಞರ
ಈಸಪರಾಧವ ನೀನೆಣಿಸದೆ ಗುರು –
ಶ್ರೀಶವಿಟ್ಠಲನೆ ಉದ್ಧಾರ ಮಾಡೋ || ೩ ||
ಅಟ್ಟತಾಳ
ತಾಮಸ ಜನರೊಳು ಪಾಮರ ನಾನಾಗಿ
ನೇಮ ನಿತ್ಯಗಳೆಲ್ಲ ನಾ ಮರೆದೆನೋ ರಂಗ
ಭ್ರಾಮಕ ತನದಿಂದ ಸತಿಸುತರಲಿ ಸ್ನೇಹ
ನಾ ಮಾಡುವೆನೊ ನಿನ್ನ ಲೀಲೆಯ ತಿಳಿಯದೆ
ಈ ಮಹಾ ದುರ್ಮತಿ ಹೇಗೆ ಬಿಡುವದೈಯ್ಯಾ
ನಾಮ ಸುಧಿಯ ಪಾನವ ಮಾಳ್ಪರಲ್ಲಿಟ್ಟು
ಮಾಮನೋಹರ ಗುರುಶ್ರೀಶವಿಟ್ಠಲ ನಿನ್ನ
ನಾಮವ ನುಡಿಸೈಯ್ಯಾ ದಿವ್ಯಜ್ಞಾನವನಿತ್ತು || ೪ ||
ಆದಿತಾಳ
ನಿನ್ನ ಮೂರುತಿ ತೋರೊ ಕಣ್ಣುಗಳಿಗೆ
ನಿನ್ನ ಕಥೆ ಎನ್ನ ಕಿವಿಗಾಗಲೊ ಸ್ವಾಮಿ
ನಿನ್ನ ಮಂಗಳಗುಣ ಪೊಗಳಲೊ ಜಿಹ್ವೆ
ನಿನ್ನವರಂಗ ಸಂಗ ತ್ವಗೇಂದ್ರಿಗೆ
ನಿನ್ನಾಲೋಚನೆ ಮನದೊಳಗಿರಿಸಯ್ಯಾ
ನಿನ್ನ ನೋಡಿ ನಿನ್ನನೆ ಪಾಡಿಸೋ
ನಿನ್ನಾನಂದವೆ ತುಂಬಿ ತುಳಕಲಯ್ಯಾ
ಇನ್ನೊಂದು ಬಯಕೆನಗಿಲ್ಲ ಶ್ರೀಹರಿ
ಮನ್ನಿಸಬೇಕು ಗುರುಶ್ರೀಶವಿಟ್ಠಲ
ಪನ್ನಗಾಚಲ ಶ್ರೀವೆಂಕಟೇಶ || ೫ ||
ಜತೆ
ಅನ್ಯ ವಿಷಯದಾಸೆಯನ್ನೆ ಬಿಡಿಸಿ , ಭಕ್ತಿ
ನಿನ್ನಲ್ಲಿ ಕೊಡು ಸ್ವಾಮಿ ಗುರುಶ್ರೀಶವಿಟ್ಠಲ ||
ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ :
ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ ೧೨ ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ ” ಗುರುಶ್ರೀಶವಿಠಲ ” ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು . ಇವರು ೬ ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.
SrI guruSrISaviTThala dAsArya viracita
SrInivAsana prArthanA suLAdi
rAga: nATi
dhruvatALa
SrInivAsane pUrNaj~jAnanaMdane svAmi
dInavatsala karuNi j~jAnigaLarasane
BAnukOTitEja j~jAnagamya enna
hInamatiya biDisi kAyo kRuShNa
anAdikAladiMda nAnu ninnavarava
nInenariye jagadaMtaryAmi
Enu mADuvadella hora oLage niMtu
nIne mADisutippe tiLisadale
nAnu nannadu eMbo hIna j~jAna puTTisi
kANisikoLuvalli jANatanadi
kANada kuruDage kannaDi koTTaMte
nAnA SAstravu Odi pELalEnu
nInu ninnavariMda kUDi mADuva cEShTe
tAnariyada manuja j~jAni EnO
Enu OdidarEnu Enu pELidarEnu
nInoliyadire AnaMda puTTuvade
j~jAnigaLu hiMde kELikoMDaMte svAmi
A nuDigaLalli dRuShTiyiTTU
nAnu kELidaMte taratama paMcaBEda
j~jAna puTTisi ninna mUrtigaLa
dhyAnava mADiso anudina tappadale
SrInAtha enna hRudguhanivAsI
dAnavAMtaka guruSrISaviTThalarEyA
dIna rakShakaneMbo biradu tOrO || 1 ||
maTTatALa
padumanABane enna madaDa buddhiya nODi
gadagada naDuguveno hRudayadoLage, ninna
padagaLa pUjisade adhama karmagaLalli
odagi pOguvadayyA budhara saMgadalliddu
mudadiMda ninna mahime vadanadali pogaLadale
mada matsaraviDidu kaduvadu suguNagaLa
vidhipita ninnagali suKava kANeno padO –
padige ninnaya smaraNe vodagiso narahari
madanajanaka Bavada udadhi dATisO taMde
udaBavisalArE nAnA yOnigaLalli
odagi pAlisO ISa guruSrISaviTThala || 2 ||
triviDitALa
dAsaneniside aBAsaka nAnAgI
hEsiki mArgava AcarisI
kAsuvIsada lABagOsuga tirugide
dESadESaMgaLa hEsiki janaralli
A sujanaru nuDida divya uktigaLannu
sAsivi kALaShTu tiLiyadalE
kAsige bArada kathegaLannE pELi
lEsAgi poTTiya poradenayyA
SrISa ninnaya pAda dhyAsadalliddu vi –
SvAsa sajjanaralli mADalilla
Isu bageyali naradAsanAgi hari –
dAsaneMdenisidE bAhIradi
SrISa ninnaya nijadAsaraMte tOri
mOsagoLisuvenO alpaj~jara
IsaparAdhava nIneNisade guru –
SrISaviTThalane uddhAra mADO || 3 ||
aTTatALa
tAmasa janaroLu pAmara nAnAgi
nEma nityagaLella nA maredenO raMga
BrAmaka tanadiMda satisutarali snEha
nA mADuveno ninna lIleya tiLiyade
I mahA durmati hEge biDuvadaiyyA
nAma sudhiya pAnava mALparalliTTu
mAmanOhara guruSrISaviTThala ninna
nAmava nuDisaiyyA divyaj~jAnavanittu || 4 ||
AditALa
ninna mUruti tOro kaNNugaLige
ninna kathe enna kivigAgalo svAmi
ninna maMgaLaguNa pogaLalo jihve
ninnavaraMga saMga tvagEMdrige
ninnAlOcane manadoLagirisayyA
ninna nODi ninnane pADisO
ninnAnaMdave tuMbi tuLakalayyA
innoMdu bayakenagilla SrIhari
mannisabEku guruSrISaviTThala
pannagAcala SrIveMkaTESa || 5 ||
jate
anya viShayadAseyanne biDisi , Bakti
ninnalli koDu svAmi guruSrISaviTThala ||
SrI guruSrISaviTThaladAsara kiruparicaya :
rAyacUru jilleya gaMgAvati tAlUkina kanakagiri grAmadalli janisida SrInarasiMhadAsaru , SrIjagannAthadAsaralli 12 varSha SiShyatva vahisi avarannu sEvisidaru. gurugaLu anugrahisi , avara Aj~jeya prakAra SrI SrISaviThalAMkita huMDEkAra dAsariMda ” guruSrISaviThala ” eMba aMkita paDedaru. gaMgAvati tAlUkina kuMTOji eMba grAmadalli iddudariMda ivarige kuMTOji dAsareMdU kareyuvaru . ivaru 6 suLAdigaLannu racisiddAre. saMKye kaDimeyAdarU asaMKya aMtaHSakti I suLAdigaLalli aDagide.
Leave a Reply