Composer : Shri Lakshmipati vittala
ಶ್ರೀ ಲಕ್ಷ್ಮೀಪತಿವಿಠಲದಾಸಾರ್ಯ ವಿರಚಿತ ಶ್ರೀ ಗುರುಶ್ರೀಶವಿಠಲದಾಸರ ಸ್ತೋತ್ರ ಸುಳಾದಿ
ರಾಗ: ಕಲ್ಯಾಣಿ
ಧ್ರುವತಾಳ
ಶ್ರೀರಮಣಗೆ ಪ್ರೀತಿ ಕಾರಣವಾಗಿ ಹರಿ –
ಪ್ರೇರಿಸಿದಂತೆ ಎನ್ನ ಯೋಗ್ಯತಾನು –
ಸಾರ ಬರದೆ ಗುರು ಚಾರುಚರಣಕ್ಕೆರಗಿ
ನಾರಾಯಣ ದಾಸರ ಅಣುಗನಾಗಿ
ಮೂರು ಜಗಕೆ ಗುರುಮಧ್ವರಾಯರು ಇವರ
ಕಾರುಣ್ಯಪಾತ್ರರಾಗಿ ಧರೆಯೊಳಗೆ
ತೋರಿ ನರರಂತೆ ತಮ್ಮ ಸೇರಿದವರ ಉ –
ದ್ಧಾರ ಮಾಡಿದರೆಂದು ಹರಿ ಆಜ್ಞದಿ
ಧೀರರೆನಿಸಿದರು ಪುರಂದರ ವಿಜಯದಾಸಾ –
ರ್ಯಾರು ಮೊದಲಾಗಿ ಕರುಣದಿಂದ
ಘೋರ ಸಂಸಾರವೆಂಬೊ ವಾರಿಧಿಯೊಳು ಶಿಲ್ಕಿ
ಧಾರುಣಿಯೊಳು ಮುಂದೆ ಪಾಮರರೂ
ಸೇರಿ ಹರಿಯ ಭಜಿಸಲಾರದೆ ಕೆಡುವರೆಂದು
ವಾರವಾರದಲ್ಲಿ ಹರಿಯ ಪ್ರಾರ್ಥಿಸಲು
ಮಾರಜನಕ ಇವರ ದ್ವಾರ ಸಜ್ಜನರ ಉ –
ದ್ಧಾರವಾಗಲಿ ಎಂದು ಕಳುಹೆ ಬಂದು
ತೋರಿಕೊಳ್ಳದೆ ಜನಕೆ ಮೂರು ಕಾಲದಿ ಹರಿಯ
ಆರಾಧಿಸುತ ಹರಿಯ ದಾಸರೆನಿಸಿ
ಕಾರಣಕರ್ತನಾ ವ್ಯಾಪಾರ ಚಿಂತಿಸುತನ್ಯಾ –
ದಾರಿ ಮೆಟ್ಟದೆ ದೂರರಾಗಿ ಅಘಕೇ
ಸಾರಿದವರಿಷ್ಟಾರ್ಥ ಪೂರೈಸುತಿಪ್ಪರ ಪಾ –
ದಾರವಿಂದಕ್ಕೆ ಮೊರೆಹೊಕ್ಕವರೆಲ್ಲ
ಪುಣ್ಯನಿಧಿ ಲಕ್ಷ್ಮೀಪತಿವಿಟ್ಠಲನ್ನ ಚರಣ
ಆರಾಧಕರು ಎನ್ನ ಭಾರಕರ್ತರಾದರೂ || ೧ ||
ಮಟ್ಟತಾಳ
ದೇಶದೊಳಗೆ ಗುರುಶ್ರೀಶರಾಯರೆಂಬುವಾ
ಪೆಸರಿನಿಂದ ತೋರಿಕೊಳುತ ವೀತನಲಿ ಸತತ
ಕಾಸು ವೀಸಲಾಭಾದಾಸೀಯ ತೊರದು
ಮೀಸಲ ಮನದಿಂದ ಎಲ್ಲ ಕಾಲದಿ ಶ್ರೀನಿ –
ವಾಸನ ಭಜಿಸುತಲಿ ಸಜ್ಜನರಿಗೆ ಉಪ –
ದೇಶ ಗೈಯ್ಯುತ್ತ ನಿರ್ಮತ್ಸರರಾಗಿ
ವಾಸುದೇವನ ಹೃದಯಾಕಾಶದೊಳಗೆ ನಿಲ್ಲಿಸಿ
ಲೇಸು ಭಕುತಿಯಿಂದ ಮೆಚ್ಚಿಸಿ ಭಜಿಸುತ
ಈ ಸುಮನಸರೆನ್ನನು ಪೋಷಿಸಬೇಕೆಂದು ವಿಶಿಷ್ಟ ಕರುಣದಿಂದ
ಹೇಸಿ ಮಾನವ ನಾನು ಕಾಸು ಬಾಳೆ ಎನ್ನ ಶಿರದಲ್ಲಿ ಕೈಯಿಟ್ಟು
ನಾಶರಹಿತ ಲಕ್ಷ್ಮೀಪತಿವಿಟ್ಠಲನ್ನ
ದಾಸರ ದಾಸ್ಯವನು ತೋರಿಕೊಟ್ಟರು ಎನಗೆ
ಸಾಸಿರ ನಾಮವನು ಕೊಂಡಾಡುವದೆಂದು || ೨ ||
ರೂಪಕತಾಳ
ಅಪರಾಧಿಯೆನ್ನದೆ ಕೃಪಣವತ್ಸಲರಾಗಿ
ಕೃಪೆಯನ್ನೆ ಮಾಡಿದರು ಸುಪಥದಿಂದ
ವಿಪರೀತವಾಗಿದೆ ಎನ್ನಾಸಿ ನೋಡಲು ಎಲ್ಲ
ಶ್ವಪಚಾರೊಳಗೆ ನಾನು ಮೊದಲೀಗಾನು ನಾ
ತಪಿಸುವೆ ನಾ ಪರಧನ ಪರವನಿತೆರ ನೋಡಿ
ಕಪಟತ್ವದಲಿ ಕಾಲ ಕಳೆವುತಲಿಪ್ಪೆ
ಅಪರಿಮಿತ ದೋಷಕಾರಿಯಾದವನೊಳು
ಕೃಪೆಯು ಮಾಡಿದ ಮಹಿಮೆ ವೆಗ್ಗಳವೂ
ಕುಪಿತ ಮರದು ಲಕ್ಷ್ಮೀಪತಿವಿಟ್ಠಲನ ದಾಸರು ಹರುಷರಾದರು
ಕುಪಿತಾ ಕರ್ಮಿಯು ಎನದೆ || ೩ ||
ಝಂಪೆತಾಳ
ಎಷ್ಟೆಂದು ಪೇಳಲಿ ಶಿಷ್ಟರಾ ಮಹಿಮೆ ಉ –
ತ್ಕೃಷ್ಟ ಜ್ಞಾನಾ ಭಕುತಿ ನಿಷ್ಟಿ ಶ್ರೀಹರಿಯಲ್ಲಿ
ಇಷ್ಟು ಗುಣಗಳು ಘಟ್ಟ್ಯಾಗಿ ಇಹವು ಮನ –
ಮುಟ್ಟಿ ಇವರ ಪಾದ ಥಟ್ಟನೆ ಭಜಿಸಲು
ಕೆಟ್ಟು ಪೋಪವಘ ಕೃಷ್ಣ ಒಲಿದು ಸರ್ವಾ –
ಭೀಷ್ಟಗಳನಿತ್ತು ತಾ ಪ್ರೇಷ್ಟನ ಮಾಡುವದು
ಧಿಟ್ಟವೆನ್ನಿರಿ ಎಳ್ಳಷ್ಟು ಸಂಶಯವಿಲ್ಲ
ಭ್ರಷ್ಟನಾದವನಿಗೆ ತಿಳಿಯದಿನ್ನು
ಪೊಟ್ಟಿಯೊಳು ಮೂರ್ಜಗವಿಟ್ಟು ಲಕ್ಷ್ಮೀಪತಿ –
ವಿಟ್ಠಲನ ದಾಸರಿಷ್ಟರಿಗಲ್ಲದೆ || ೪ ||
ತ್ರಿವಿಡಿತಾಳ
ಅನ್ನಕ್ಕೆ ಅಭಿಗಾರವನ್ನು ಮಾಡಿದಂತೆ
ಇನ್ನು ಲೋಹಕ್ಕೆ ಪರಶು ಸೋಕಿದಂತೆ
ಅನ್ಯಗೆ ತಪ್ತಮುದ್ರಿಗಳನ್ನು ಪ್ರಾರ್ಥಿಸಿದಂತೆ
ಘನ್ನ ನದಿಗೆ ನಾಲಿ ತಂದಿತ್ತಂತೆ
ಮುನ್ನೆ ಉದಕವು ಪಾಂಚಜನ್ಯದೊಳು ನೀಡಿದಂತೆ
ಎನ್ನನುದ್ಧರಿಸಿದ್ದಾರೆ ನಂಬಿಕೊ
ಘನ್ನ ಮಹಿಮ ಲಕ್ಷ್ಮೀಪತಿವಿಟ್ಠಲನ್ನಾ ಕಾ –
ರುಣ್ಯ ಪಾತ್ರರು ತಾವು ಸತ್ಕರುಣದಿ || ೫ ||
ಅಟ್ಟತಾಳ
ಎಂತು ಪೇಳಲಿವರ ಅಂತರಂಗದ ಸಿರಿ –
ಕಾಂತ ಒಲಿದು ಸತು ಪಂಥವ ತೋರಿ ಪರಮ –
ತ್ಯಂತ ಜ್ಞಾನ ಭಕುತಿ ಇತ್ತು ನೀಡಿದರು ವೆ –
ನ್ನಂಥ ಸದ್ದೋಷಿಗನೆಂತು ಪೊರೆವನೆಂಬೊ ಚಿಂತಿ ಮಾಡಲ್ಯಾಕೆ
ಕಂತುಜನಕ ಲಕ್ಷ್ಮೀಪತಿವಿಟ್ಠಲನ ಪಾದಾ –
ಕ್ರಾಂತರಾಗಿ ಎನ್ನ ಸಂತೋಷಿಸುತಿಹ್ಯರೊ || ೬ ||
ಆದಿತಾಳ
ಯಾಮ ಯಾಮಕ್ಕೆ ಇವರ ನಾಮವು ಎನ್ನ ಹೃದಯ
ಧಾಮದೊಳಗೆ ಬಲು ನೇಮದಿಂ ಇಪ್ಪಂತೆ
ಶ್ರೀಮನೋಹರ ಒಲಿದು ಪ್ರೇಮದಿ ಪ್ರೇರಿಸಿ
ಈ ಮಹಾ ದೋಷವನಧಿ ಸೀಮಿ ದಾಟಿಸಲೆನ್ನ
ಮಾಮನೋಹರ ಲಕ್ಷ್ಮೀಪತಿವಿಟ್ಠಲನ್ನ ದಿವ್ಯ –
ನಾಮಧಾರಿಗಳು ಇಂಥ ಪಾಮರನ್ನ ಕರುಣದಿ || ೭ ||
ಜತೆ
ಶ್ರೀಲಕ್ಷ್ಮೀಪತಿವಿಟ್ಠಲನ ಚರಣ ಸೇವಕರು
ಪಾಲಿಸಿದರು ಎನ್ನ ಮ್ಯಾಲೆ ಸತ್ಕರುಣದಿ ||
SrI lakShmIpativiThaladAsArya viracita SrI guruSrISaviThaladAsara stOtra suLAdi
rAga: kalyANi
dhruvatALa
SrIramaNage prIti kAraNavAgi hari –
prErisidaMte enna yOgyatAnu –
sAra barade guru cArucaraNakkeragi
nArAyaNa dAsara aNuganAgi
mUru jagake gurumadhvarAyaru ivara
kAruNyapAtrarAgi dhareyoLage
tOri nararaMte tamma sEridavara u –
ddhAra mADidareMdu hari Aj~jadi
dhIrarenisidaru puraMdara vijayadAsA –
ryAru modalAgi karuNadiMda
GOra saMsAraveMbo vAridhiyoLu Silki
dhAruNiyoLu muMde pAmararU
sEri hariya BajisalArade keDuvareMdu
vAravAradalli hariya prArthisalu
mArajanaka ivara dvAra sajjanara u –
ddhAravAgali eMdu kaLuhe baMdu
tOrikoLLade janake mUru kAladi hariya
ArAdhisuta hariya dAsarenisi
kAraNakartanA vyApAra ciMtisutanyA –
dAri meTTade dUrarAgi aGakE
sAridavariShTArtha pUraisutippara pA –
dAraviMdakke morehokkavarella
puNyanidhi lakShmIpativiTThalanna caraNa
ArAdhakaru enna BArakartarAdarU || 1 ||
maTTatALa
dESadoLage guruSrISarAyareMbuvA
pesariniMda tOrikoLuta vItanali satata
kAsu vIsalABAdAsIya toradu
mIsala manadiMda ella kAladi SrIni –
vAsana Bajisutali sajjanarige upa –
dESa gaiyyutta nirmatsararAgi
vAsudEvana hRudayAkASadoLage nillisi
lEsu BakutiyiMda meccisi Bajisuta
I sumanasarennanu pOShisabEkeMdu viSiShTa karuNadiMda
hEsi mAnava nAnu kAsu bALe enna Siradalli kaiyiTTu
nASarahita lakShmIpativiTThalanna
dAsara dAsyavanu tOrikoTTaru enage
sAsira nAmavanu koMDADuvadeMdu || 2 ||
rUpakatALa
aparAdhiyennade kRupaNavatsalarAgi
kRupeyanne mADidaru supathadiMda
viparItavAgide ennAsi nODalu ella
SvapacAroLage nAnu modalIgAnu nA
tapisuve nA paradhana paravanitera nODi
kapaTatvadali kAla kaLevutalippe
aparimita dOShakAriyAdavanoLu
kRupeyu mADida mahime veggaLavU
kupita maradu lakShmIpativiTThalana dAsaru haruSharAdaru
kupitA karmiyu enade || 3 ||
JaMpetALa
eShTeMdu pELali SiShTarA mahime u –
tkRuShTa j~jAnA Bakuti niShTi SrIhariyalli
iShTu guNagaLu GaTTyAgi ihavu mana –
muTTi ivara pAda thaTTane Bajisalu
keTTu pOpavaGa kRuShNa olidu sarvA –
BIShTagaLanittu tA prEShTana mADuvadu
dhiTTavenniri eLLaShTu saMSayavilla
BraShTanAdavanige tiLiyadinnu
poTTiyoLu mUrjagaviTTu lakShmIpati –
viTThalana dAsariShTarigallade || 4 ||
triviDitALa
annakke aBigAravannu mADidaMte
innu lOhakke paraSu sOkidaMte
anyage taptamudrigaLannu prArthisidaMte
Ganna nadige nAli taMdittaMte
munne udakavu pAMcajanyadoLu nIDidaMte
ennanuddharisiddAre naMbiko
Ganna mahima lakShmIpativiTThalannA kA –
ruNya pAtraru tAvu satkaruNadi || 5 ||
aTTatALa
eMtu pELalivara aMtaraMgada siri –
kAMta olidu satu paMthava tOri parama –
tyaMta j~jAna Bakuti ittu nIDidaru ve –
nnaMtha saddOShiganeMtu porevaneMbo ciMti mADalyAke
kaMtujanaka lakShmIpativiTThalana pAdA –
krAMtarAgi enna saMtOShisutihyaro || 6 ||
AditALa
yAma yAmakke ivara nAmavu enna hRudaya
dhAmadoLage balu nEmadiM ippaMte
SrImanOhara olidu prEmadi prErisi
I mahA dOShavanadhi sImi dATisalenna
mAmanOhara lakShmIpativiTThalanna divya –
nAmadhArigaLu iMtha pAmaranna karuNadi || 7 ||
jate
SrIlakShmIpativiTThalana caraNa sEvakaru
pAlisidaru enna myAle satkaruNadi ||
Leave a Reply