Sharanu Shankara bhushanadrige

Composer : Shri Jagannatha dasaru

By Smt.Shubhalakshmi Rao

ಶರಣು ಶಂಕರ ಭೂಷಣಾದ್ರಿಗೆ
ಶರಣು ಅಭಯಾಚಲನಿಗೆ [ಪ]
ಶರಣು ಖಗಮೃಗ ತರುಲತಾಂಕಗೆ
ಶರಣು ವಿಂಶತಿ ನಾಮಗೆ [ಅ.ಪ.]

ವರಹ ನೀಲಾಂಜನ ಕನಕ ಋಷಿ
ಗರುಡ ಘನ ನಾರಾಯಾಣಾ
ಉರಗ ತೀರ್ಥಾನಂದ ಶ್ರೀ ಪು
ಷ್ಕರ ವೃಷಭ ವೈಕುಂಠಗೆ [೧]

ಜ್ಞಾನ ಪರ್ವತ ಮೇರು ಶೃಂಗಗೆ
ಶ್ರೀನಿವಾಸ ಸುಕ್ರೀಡಗೆ ಪಂ
ಚಾನನಾಹ್ವಯ ವೆಂಕಟಾದ್ರಿಗೆ
ಕ್ಷೋಣಿಯೊಳು ಸುರಮಾನ್ಯಗೆ [೨]

ರತುನ ಕಾಂಚನ ಶ್ರೀನಿವಾಸನ
ಪ್ರತಿಮೆಯಂದದಿ ಪೊಳೆವಗೆ
ಕೃತಿರಮಣ ಜಗನ್ನಥವಿಠಲಗೆ
ಅತುಳ ಮಂಗಳನೆನಿಪಗೆ [೩]


SaraNu SaMkara BUShaNAdrige
SaraNu aBayAcalanige [pa]
SaraNu KagamRuga tarulatAMkage
SaraNu viMSati nAmage [a.pa.]

varaha nIlAMjana kanaka RuShi
garuDa Gana nArAyANA
uraga tIrthAnaMda SrI pu
Shkara vRuShaBa vaikuMThage [1]

j~jAna parvata mEru SRuMgage
SrInivAsa sukrIDage paM
cAnanAhvaya veMkaTAdrige
kShONiyoLu suramAnyage [2]

ratuna kAMcana SrInivAsana
pratimeyaMdadi poLevage
kRutiramaNa jagannathaviThalage
atuLa maMgaLanenipage [3]

Leave a Reply

Your email address will not be published. Required fields are marked *

You might also like

error: Content is protected !!