Hakkiya hegaleri

Composer : Shri Prasannavenkata dasaru

By Smt.Shubhalakshmi Rao

ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕ ಮನಸೋತೆ ನಾನವಗೆ |ಅ.ಪ|

ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ
ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ |೧|

ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ
ಅದಿತಿಯ ಕುಂಡಲ ಕಳಿಸಿದ ಹರ ವಿಧಿಸುರನೃಪರನು ಸಲಹಿದ |೨|

ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ |೩|

ನರಕಚತುರ್ದಶಿ ಪರ್ವದ ದಿನ ಹರುಷದಿ ಪ್ರಕಟಾದನು ದೇವ
ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ |೪|

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ
ಜಗದೀಶ ಪ್ರಸನ್ವೆಂಕಟೇಶನ ಭಕ್ತರಘಹಾರಿ ರವಿ ಕೋಟಿಪ್ರಕಾಶನ |೫|


hakkiya hegalEri baMdavage
nODakka manasOte nAnavage |a.pa|

satrAjitana magaLettida unmatta narakanoLu tA kAdida
matte keDahida avanaMgava satigittanu tA AliMganava |1|

hadinAru sAvira nAriyara sere mudadiMda biDisi manOhara
aditiya kuMDala kaLisida hara vidhisuranRuparanu salahida |2|

uttama prAgjOtiShapurava Bagadattage koTTa varABayava
karta kRuShNayyana naMbide SrImUrtiya pAdava hoMdide |3|

narakacaturdaSi parvada dina haruShadi prakaTAdanu dEva
SaraNAgatajana vatsalA raMga parama BAgavatara paripAla |4|

hogaLi kRuShNayyana mahimeya mukti nagarada arasana kIrtiyA
jagadISa prasanveMkaTESana BaktaraGahAri ravi kOTiprakASana |5|

Leave a Reply

Your email address will not be published. Required fields are marked *

You might also like

error: Content is protected !!