Narayana Govinda Hari

Composer : Shri Gurushreesha vittala

ನಾರಾಯಣ ಗೊವಿಂದ ಹರಿ, ನಾರಾಯಣ ಗೊವಿಂದ |
ನಾರಾಯಣ ಗೊವಿಂದ ಮುಕುಂದ,
ನರವರ ಸುರರಾನಂದ ಹರಿ ,
ನಾರಾಯಣ ಗೊವಿಂದ [ಪ]

ಒಂದೆ ಮನದಲಿ ಬುಧರಿಂದ ಕೇಳಿ ಕಥೆ,
ತಂದರೆ ಮನಕಾನಂದ,
ಹರಿ ನಾರಾಯಣ ಗೊವಿಂದ [೧]

ಪರಮ ಭಕುತಿಯಲಿ ಹರಿ ಗುಣ ಕೀರ್ತಿಸೆ,
ಪೊರೆವನು ದೇವಕಿ ಕಂದ,
ಹರಿ ನಾರಾಯಣ ಗೊವಿಂದ [೨]

ಹರಿ ಸರ್ವೋತ್ತಮ ಸುರರೊಡೆಯನು ಎಂದು
ಸ್ಮರಿಸಲು ನಿತ್ಯಾನಂದ,
ಹರಿ ನಾರಾಯಣ ಗೊವಿಂದ [೩]

ಹರಿ ದಾಸರ ಸಂದರುಶನ ಪುಣ್ಯವು,
ಅರಿದರೆ ಪರಮಾನನ್ಂದ,
ಹರಿ ನಾರಾಯಣ ಗೊವಿಂದ [೪]

ಕಂಡ ಕಂಡಲ್ಲಿ ತನ್ನ ಕಂಡು ಅರ್ಚಿಸುವ,
ತೊಂಡರ ಬಿಡೇ ನಾನೆಂದ,
ಹರಿ ನಾರಾಯಣ ಗೊವಿಂದ [೫]

ಕೃಷ್ಣನ ವಂದನೆ ಅಷ್ಟಾಂಗದಿ ಮಾಡಿ,
ಪುಟ್ಟಿಸೆ ಪುನರಪಿ ಎಂದ,
ಹರಿ ನಾರಾಯಣ ಗೊವಿಂದ [೬]

ಸಕಲ ಬುಧರನು ಭಕುತಿಲಿ ಸೇವಿಸೆ,
ಮುಕುತಿಯೊಳಗೆ ಅವ ಬಂದ,
ಹರಿ ನಾರಾಯಣ ಗೊವಿಂದ [೭]

ಶ್ರೀಯರಸನು ತನ್ನ ಪ್ರಿಯನೆಂದವನು ಎನ್ನ
ಮಾಯವ ದಾಟಿದೆನೆಂದ,
ಹರಿ ನಾರಾಯಣ ಗೊವಿಂದ [೮]

ತನು ಮನ ಧನಗಳ ಚಿನುಮಯಗೊಪ್ಪಿಸಿದ-ವನು
ಹರಿ ಪುರದಲಿ ನಿಂದ,
ಹರಿ ನಾರಾಯಣ ಗೊವಿಂದ [೯]

ನವವಿಧ ಭಕುತಿಯ ಪವನನಯ್ಯನಲಿ
ವಿವರಿಸಿ ಮಾಡಲು ಚಂದ,
ಹರಿ ನಾರಾಯಣ ಗೊವಿಂದ [೧೦]

ಗುರು ಶ್ರೀಶ ವಿಠಲನು ಪರಮ
ಕರುಣದೀ-ಪರಿಯಲಿ ಆಚರಿಸೆಂದ,
ಹರಿ ನಾರಾಯಣ ಗೊವಿಂದ [೧೦]


nArAyaNa goviMda hari, nArAyaNa goviMda |
nArAyaNa goviMda mukuMda,
naravara surarAnaMda hari ,
nArAyaNa goviMda [pa]

oMde manadali budhariMda kELi kathe,
taMdare manakAnaMda,
hari nArAyaNa goviMda [1]

parama bhakutiyali hari guNa keertise,
porevanu dEvaki kaMda,
hari nArAyaNa goviMda [2]

hari sarvOttama suraroDeyanu eMdu
smarisalu nityAnaMda,
hari nArAyaNa goviMda [3]

hari dAsara saMdarushana puNyavu,
aridare paramAnanMda,
hari nArAyaNa goviMda [4]

kaMDa kaMDalli tanna kaMDu archisuva,
toMDara biDE nAneMda,
hari nArAyaNa goviMda [5]

kRuShNana vaMdane aShTAMgadi mADi,
puTTise punarapi eMda,
hari nArAyaNa goviMda [6]

sakala budharanu bhakutili sEvise,
mukutiyoLage ava baMda,
hari nArAyaNa goviMda [7]

SrIyarasanu tanna priyaneMdavanu enna
mAyava dATideneMda,
hari nArAyaNa goviMda [8]

tanu mana dhanagaLa chinumayagoppisida-vanu
hari puradali niMda,
hari nArAyaNa goviMda [9]

navavidha bhakutiya pavananayyanali
vivarisi mADalu chaMda,
hari nArAyaNa goviMda [10]

guru shreesha viThalanu parama
karuNadI-pariyali AchariseMda,
hari nArAyaNa goviMda [10]

Leave a Reply

Your email address will not be published. Required fields are marked *

You might also like

error: Content is protected !!