Dhyanavanu madi triveni

Composer : Shri Vijayadasaru

By Smt.Shubhalakshmi Rao

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |
ಜ್ಞಾನ ಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |
ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |
ಪ್ರಾಣೇಶ ಕುಣಿಯುವನಯ್ಯಾ ಅಯ್ಯ ಅಯ್ಯಾ ||ಪ||

ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ |
ಶರೀರದಿಂದಲಿ ಅಷ್ಟ ಕ್ಷೇತ್ರಗಳ ಪುಟ್ಟಿಸಿ |
ವರದೇಶ ವೈಕುಂಠದಲ್ಲಿಟ್ಟನು ಸಪ್ತ |
ಪಿರಿಸಹಿತ ತೀರ್ಥರಾಜಾ ||
ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ |
ಇರುತಿಪ್ಪವಲ್ಲಿ ಮಿಗಿಲಾದುದಕೆ ಅತಿಶಯವೊ |
ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ |
ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ (೧)

ತರಣಿಸುತೆ ಮಾನಸೋತ್ತರ ಶೈಲದಲಿ ಕುಳಿತು |
ವರರಾಜ ತೀರ್ಥ ಮಾಧವನ ಸಾರುವೆನೆಂದು |
ಭರದಿಂದ ತಪವು ಮಾಡೆ ಸರಸಿಜೋದ್ಭವನೊಲಿದು |
ವರವಿತ್ತ ಮುಂದೆ ನೀನು ಧರೆಯೊಳು ಕಾಳಿಂ ||
ದ ರಾಯಗೆ ಕುವರಿ ಎನಿಸಿ ಮಹಾಸರತಿಯಾಗಿ ಪೋಗಿ |
ಸಿರಿ ಮಾಧವನ ಚರಣ |
ಶರಣು ಪೋಗೆನೆ ಸಪ್ತ ಶರಧಿ ಭೇದಿಸಿಯಲ್ಲಿ
ನೆರೆ ಮೆರೆದಳೈಯ್ಯಾ ಅಯ್ಯಾ ಅಯ್ಯಾ ಅಯ್ಯಾ (೨)

ತುರುಗಮ ನೆವದಿಂದ ಅರವತ್ತು ಸಾವಿರ ಸ |
ಗರನ ಕುಲದವರು ಕಪಿಲಾಖ್ಯಾ ಹರಿ ಮುನಿಯಿಂದ |
ಉರಿದು ಪೋಗೆನಲಾಗಿ ಭಗೀರಥ ಭೂಪತಿ ಉಗ್ರ |
ಧುರಧಿ ತಪವನ್ನೆ ಮಾಡೇ |
ಹರಿ ನಿರೂಪವ ತಾಳಿ ಗಿರಿಗಹ್ವರವನೊಡದು |
ಸುರಗಂಗೆ ಬಂದು ತ್ರಿವೇಣಿ ಮಾಧವನ ಸಿರಿ |
ಚರಣದೆಡೆಯಲ್ಲಿ ನಿಂದು ಯಮುನೆ ವಡಗೊಡಿ ಬಾ |
ಮರವಾದವಳಂದು ಅಯ್ಯ ಅಯ್ಯಾ ಅಯ್ಯಾ (೩)

ಸರಸ್ವತಿಯ ಬೆರೆದು ತ್ರಿವೇಣಿ ಸಂಗಮವೆಂದು |
ಕರಿಸಿಕೊಂಡಿತು ವಿಕರ ಸೋಮೇಶ್ವರನ ತನಕ |
ಪರಮೇಷ್ಠಿಯಿಲ್ಲಿಗೈತಂದು ಬೊಮ್ಮಾಂಡವನು |
ಸರಿ ಮಾಡಿ ತೊಲಗಲಾಗೀ ||
ಅವರೇ ಪೇಳುವದೇನು ಸುರರು ಶಿರದೂಗುತಿರೆ |
ವರರಾಜತೀರ್ಥ ಮಹಾಭಾರವಾಗಲು ಇದಕೆ |
ಸರಿ ಮಿಗಿಲು ಇಲ್ಲೆನುತ ಪೊಗಳಿ ಕರದರು ಮಹ |
ವರದ ಪ್ರಯಾಗವೆಂದಯ್ಯಾ ಅಯ್ಯಾ ಅಯ್ಯಾ (೪)

ಪುರವೈರಿ ನಟಣೆ ಪೂ ತುಲಸಿ ಸುರಪತಿ ವೈಶ್ವಾ |
ನರನು ತಿಲ ಹೋಮ ಯಮರಾಯಕಿಂಚಿತು ದಾನ |
ನಿರಋತಿಯು ಪೈತೃಕಕರ್ಮ ವರುಣ ಜಲದಾನಸ್ತುತಿ |
ಮರುತ ಭೂತನು ಕುಬೇರ ||
ಅರಗಳಿಗೆ ವಸತಿ ಈ ವಟನಿಕಟ್ಟಿಯಲಿಯಿದ್ದು |
ಪರಿಪರಿಯಿಂದಲಿ ಒಲಿಸಿ ಮಾಧವನಿಂದ |
ಪುರಷಾರ್ಥ ಪಡೆದು ಸುಖಿಸಿದರು ಸಮಸ್ತ ಬಗೆ |
ಅರಿತು ಕೊಂಡಾಡಿ ಜನರೈಯ್ಯ ಅಯ್ಯಾ ಅಯ್ಯಾ (೫)

ಎರಡೊಂದು ಮೂರು ಕುಲದ ಮಧ್ಯ ನಿಂದು |
ಕರ್ತಾರಿಯೊಳಗೆ ಮಿಂದು ಸತ್ಕರ್ಮವನೆಸಗಿ ಭೂ |
ಸುರರ ಮೆಚ್ಚಿಸಿ ಮನದಿ ಪಾಪಗಳ ಉಚ್ಚರಿಸಿ |
ಕರಣ ನಿರ್ಮಲಿನರಾಗಿ |
ನರನಾರಿ ಈರ್ವ ಜನ ವಿಪ್ರ ಚಂಡಾಲ ||
ಕುಲ ಪರಿಯಂತ ವಪನವೆ ಮುಖ್ಯವೆಂದು ತಿಳಿದು |
ಚರಿಸಿದರೆ ಅನಂತ ಜನ್ಮಕ್ಕೆ ಮಹಾಸೌಖ್ಯ |
ಬರಿದೆ ಆಗದು ಕಾಣಿರೈಯ್ಯ ಅಯ್ಯಾ ಅಯ್ಯಾ (೬)

ಧರೆಯ ಮೇಲೆ ಬಿದ್ದ ಶಿಶುಗಳ ತಂದು ಮುಂಡಣವ |
ಉರುತರ ಬುದ್ಧಿಯಿಂದ ಮಾಡಿಸಲಿ ಬೇಕು ವಿ |
ಸ್ತರಿಸುವೆನಯ್ಯಾ ಯೌವನ ವಾರ್ಧಿಕರಿಗೆ ನಿಜ |
ವರನಾರಿಯರಿಗೆ ವೇಣಿ ಸರಿ ಎನ್ನಿ ಸಾತ್ವೀಕ ||
ಪುರಾಣದಲಿ ಪೇಳಿದ ಎರಡು ಭುಜದಲ್ಲಿ ತಪ್ತ ಚಕ್ರ |
ವಿರಹಿತರಾಗಿ ಬರಲು ಷಣ್ಮುಖ ಜನಕ ಗತಿಯಿಲ್ಲ ಮತಿಯಿಲ್ಲ |
ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ (೭)

ಎರಡೈದು ತುರಗ ಕೃತು ಮೊದಲಾದ ತೀರ್ಥಗಳು |
ಪರಿಪರಿ ದೇವ ಮುನಿಗಳು ನಾಮದಲಿ ಉಂಟು |
ಪರಮ ಭಕುತಿಯಿಂದ ಮಜ್ಜನಾದಿಯ ಮಾಡೆ |
ಪರಲೋಕ ಕರತಳದೊಳು ||
ಇರುತಿಪ್ಪದು ನಿತ್ಯಾ ಪ್ರಯಾಗರಾಜನ |
ಸ್ಮರಣೆ ಮಾಡಿದ ಮನುಜನು ಆವಾವಲ್ಲ್ಯಾದರು ಇರಲು |
ಮರಣ ಕಾಲಕೆ ಮೂಲ ಮಾಧವ ವೊಳಗೆ ಮೊಳೆವ |
ದರುಶನವ ಕೊಡುತಲಯ್ಯ ಅಯ್ಯಾ ಅಯ್ಯಾ (೮)

ಅರುಣೋದಯಲೆದ್ದು ಶುದ್ಧಾತ್ಮರಾಗಿ |
ಪರಿಪರನೆಂಬೊ ಜ್ಞಾನದಲಿ ಹಾಡಿ ಪಾಡಿದವರ |
ತೆರಳಿ ಪೋಗದೆ ದುರಿತ ರಾಸಿಗಳ ದಹಿಸಿ ನಿಂ |
ದಿರದೆ ಸಂತರ ಕೊಡಿಸಿ ||
ಮೊರೆವುತಿಪ್ಪುದು ಗಡಾ ಸಿದ್ದಾರ್ಥ ಕ್ಷೇತ್ರವಿದು |
ನೆರೆನಂಬಿ ಮಾನವನು ಮಾನಸದಲಿ ಭಜಿಸಿ |
ಸಿರಿ ವಿಜಯವಿಠ್ಠಲ ಕರುಣವುಳ್ಳವನಿಗೆ |
ದೊರಕುವುದು ದೊರಕುವದಯ್ಯಾ ಅಯ್ಯಾ ಅಯ್ಯಾ (೯)


dhyAnavanu mADi trivENi kShEtrava biDade |
j~jAna Bakti vairAgya nAnA satkarma ni |
dAnadiM siddhipudu mAnasadali siri |
prANESa kuNiyuvanayyA ayya ayyA ||pa||

harivIra drupadanuddharisivAgalu tanna |
SarIradiMdali aShTa kShEtragaLa puTTisi |
varadESa vaikuMThadalliTTanu sapta |
pirisahita tIrtharAjA ||
merevadide puM kShEtra uLidavELu strI |
irutippavalli migilAdudake atiSayavo |
dharaNiyoLagidi kAlAMtarake haritaMda vaTa |
taru sahavAgi ayyA ayyA ayyA (1)

taraNisute mAnasOttara Sailadali kuLitu |
vararAja tIrtha mAdhavana sAruveneMdu |
BaradiMda tapavu mADe sarasijOdBavanolidu |
varavitta muMde nInu dhareyoLu kALiM ||
da rAyage kuvari enisi mahAsaratiyAgi pOgi |
siri mAdhavana caraNa |
SaraNu pOgene sapta Saradhi BEdisiyalli
nere meredaLaiyyA ayyA ayyA ayyA (2)

turugama nevadiMda aravattu sAvira sa |
garana kuladavaru kapilAKyA hari muniyiMda |
uridu pOgenalAgi BagIratha BUpati ugra |
dhuradhi tapavanne mADE |
hari nirUpava tALi girigahvaravanoDadu |
suragaMge baMdu trivENi mAdhavana siri |
caraNadeDeyalli niMdu yamune vaDagoDi bA |
maravAdavaLaMdu ayya ayyA ayyA (3)

sarasvatiya beredu trivENi saMgamaveMdu |
karisikoMDitu vikara sOmESvarana tanaka |
paramEShThiyilligaitaMdu bommAMDavanu |
sari mADi tolagalAgI ||
avarE pELuvadEnu suraru SiradUgutire |
vararAjatIrtha mahABAravAgalu idake |
sari migilu illenuta pogaLi karadaru maha |
varada prayAgaveMdayyA ayyA ayyA (4)

puravairi naTaNe pU tulasi surapati vaiSvA |
naranu tila hOma yamarAyakiMcitu dAna |
niraRutiyu paitRukakarma varuNa jaladAnastuti |
maruta BUtanu kubEra ||
aragaLige vasati I vaTanikaTTiyaliyiddu |
paripariyiMdali olisi mAdhavaniMda |
puraShArtha paDedu suKisidaru samasta bage |
aritu koMDADi janaraiyya ayyA ayyA (5)

eraDoMdu mUru kulada madhya niMdu |
kartAriyoLage miMdu satkarmavanesagi BU |
surara meccisi manadi pApagaLa uccarisi |
karaNa nirmalinarAgi |
naranAri Irva jana vipra caMDAla ||
kula pariyaMta vapanave muKyaveMdu tiLidu |
carisidare anaMta janmakke mahAsauKya |
baride Agadu kANiraiyya ayyA ayyA (6)

dhareya mEle bidda SiSugaLa taMdu muMDaNava |
urutara buddhiyiMda mADisali bEku vi |
starisuvenayyA yauvana vArdhikarige nija |
varanAriyarige vENi sari enni sAtvIka ||
purANadali pELida eraDu Bujadalli tapta cakra |
virahitarAgi baralu ShaNmukha janaka gatiyilla matiyilla |
sthiravAkya lAlipudu ayyA ayyA ayyA (7)

eraDaidu turaga kRutu modalAda tIrthagaLu |
paripari dEva munigaLu nAmadali uMTu |
parama BakutiyiMda majjanAdiya mADe |
paralOka karataLadoLu ||
irutippadu nityA prayAgarAjana |
smaraNe mADida manujanu AvAvallyAdaru iralu |
maraNa kAlake mUla mAdhava voLage moLeva |
daruSanava koDutalayya ayyA ayyA (8)

aruNOdayaleddu SuddhAtmarAgi |
pariparaneMbo j~jAnadali hADi pADidavara |
teraLi pOgade durita rAsigaLa dahisi niM |
dirade saMtara koDisi ||
morevutippudu gaDA siddArtha kShEtravidu |
nerenaMbi mAnavanu mAnasadali Bajisi |
siri vijayaviThThala karuNavuLLavanige |
dorakuvudu dorakuvadayyA ayyA ayyA (9)

Leave a Reply

Your email address will not be published. Required fields are marked *

You might also like

error: Content is protected !!