Baruvanene Ranga node

Composer : Shri Vijayadasaru

By Smt.Viraja

ಬರುವನೇನೆ ರಂಗ ನೋಡೆ , ಸೌಭಾಗ್ಯ ನಿಧಿಯು [ಪ]
ಬರುವನೇನೆ ರಂಗ ನೋಡೆ , ಕರುಣದಿಂದ ಮಾತನಾದೆ,
ಗರುಡನೇರಿ ಗಗನದೊಳಗೆ ಕಡಳೊಲುದಿಸಿದ ಚಂದ್ರನಂತೆ [ಅ.ಪ]

ಸಾಟಿಯಿಲ್ಲದೆ ಬೆಲೆಯು ಬಾಳುವ, ನವರತ್ನದ
ಕಿರೀಟವನ್ನೆ ಧರಿಸಿ ಮೆರೆಯುತ |
ಹಾಟಕಾಂಬರವನುಟ್ಟು ಲಲಾಟದಲ್ಲಿ ತಿಲಕವಿಟ್ಟು,
ನೋಟದಲ್ಲಿ ಜಗವ ಮೋಹಿಪ ಕೋಟಿ ಸೂರ್ಯರುದಿಸಿದಂತೆ [೧]

ಶಂಖ ಚಕ್ರಗಳನೆ ಧರಿಸುತ,
ವೈಯ್ಯಾರದಿಂದ ಬಿಂಕದಿಂದ ಕೊಳಲನೂದುತ |
ಪಂಕಜಾಕ್ಷಿಯರ ಮನವ, ಮಂಕು ಮಾಡಿ ಕುಣಿಸುತಿರುವ
ವೆಂಕಟೇಶ ಪಂಕಜಾಕ್ಷ ಶಂಕರಾದಿ ಸುರರವಂದ್ಯ [೨]

ಮುತ್ತಿನ್-ಹಾರಗಳನೆ ಧರಿಸುತ, ವೈಯ್ಯಾರದಿಂದ
ಪುತ್ಥಳಿಯ ಸರವು ಹೊಳೆಯುತ |
ಅಚ್ಚ ಶ್ರೀ ತುಳಸಿದಂಡೆ, ಪಚ್ಚೆ ಸರಗಳಂತೆ ಕಾಣುತ
ಪಕ್ಷಿವಾಹನ ಪರಮ ಪುರುಷ, ರತ್ನ ಪದಕ ಧರಿಸಿ ಕೃಷ್ಣ [೩]

ಎರಡು ಏಳು ಲೋಕ ಜೀವರ, ತನ್ನುದರದಲ್ಲಿ
ಸದನವನ್ನೆ ಮಾಡಿ ಸಲಹುವ |
ಅಜನ ನಾಭಿಯಲ್ಲಿ ಪಡೆದ, ಮದನನಯ್ಯ ಮೋಹನಾಂಗ,
ತ್ರಿಜಗವಂದಿತ ಯದುಕುಲೇಶ, ದ್ವಿಜರ ವೇದ ಗೋಷದಿಂದ [೪]

ತೊಡೆಗಳೆರಡು ಕದಳಿ ಸ್ತಂಬವೆ, ಕನ್ನಡಿಗಳಂತೆ
ಇಡುವೊ ಜಾಣು ಜಂಘೆ ಚಂದವೇ |
ದ್ವಜ ವಜ್ರಾಂಕುಶ ಪಾದ ಇಡುವೊ ಹೆಜ್ಜೆ
ಧರಣಿ ದೇವಿಗೆ , ಒಡವೆಯಂತೆ ತೋರುತಿರ್ಪುದು
ವಿಜಯ ವಿಠ್ಠಲ ರಜತ ಧೊರೆಯು [೫]


baruvanEne raMga nODe , saubhAgya nidhiyu [pa]
baruvanEne raMga nODe , karuNadiMda mAtanAde,
garuDanEri gaganadoLage kaDaLoludisida chaMdranaMte [a.pa]

sATiyillade beleyu bALuva, navaratnada
kireeTavanne dharisi mereyuta |
hATakAMbaravanuTTu lalATadalli tilakaviTTu,
nOTadalli jagava mOhipa kOTi sooryarudisidaMte [1]

shaMkha chakragaLane dharisuta,
vaiyyAradiMda biMkadiMda koLalanUduta |
paMkajAkShiyara manava, maMku mADi kuNisutiruva
veMkaTEsha paMkajAkSha shaMkarAdi suraravaMdya [2]

muttin-hAragaLane dharisuta, vaiyyAradiMda
putthaLiya saravu hoLeyuta |
accha shrI tuLasidaMDe, pacce saragaLaMte kANuta
pakShivAhana parama puruSha, ratna padaka dharisi kRuShNa [3]

eraDu ELu lOka jeevara, tannudaradalli
sadanavanne mADi salahuva |
ajana nAbhiyalli paDeda, madananayya mOhanAMga,
trijagavaMdita yadukulEsha, dvijara vEda gOShadiMda [4]

toDegaLeraDu kadaLi staMbave, kannaDigaLaMte
iDuvo jaaNu jaMghe chaMdavE |
dvaja vajrAMkusha pAda iDuvo hejje
dharaNi dEvige , oDaveyaMte tOrutirpudu
vijaya viThThala rajata dhoreyu [5]

Leave a Reply

Your email address will not be published. Required fields are marked *

You might also like

error: Content is protected !!