Composer : Shri Vijayadasaru
ಸಾಧನಕ್ಕೆ ಬಗೆಗಾಣೆ ಎನ್ನಬಹುದೆ
ಸಾದರದಿ ಗುರುಕರುಣ ತಾ ಪಡೆದ ಬಳಿಕ [ಪ]
ಕಂಡ ಕಂಡದ್ದೆಲ್ಲ ಕಮಲನಾಭನ ಮೂರ್ತಿ
ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ
ತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ
ಹಿಂಡು ಮಾತುಗಳೆಲ್ಲ ಹರಿಯ ನಾಮ (೧)
ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರ
ಕೈಮೀರಿ ಹೋದದ್ದೆ ಕೃಷ್ಣಾರ್ಪಣ
ವೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ
ಹೋಯ್-ಮಾಲಿತನವೆಲ್ಲ ಹರಿಯ ವಿಹಾರ (೨)
ವಾಗತ್ಯಪಡುವದೆ ವಿಧಿ ನಿಷೇಧಾರಚರಣೆ
ರೋಗಾನುಭವವೆಲ್ಲ ಉಗ್ರತಪವು
ಆಗದವರಾಡಿಕೊಂಬುವುದೆ ಆರ್ಶೀವಾದ
ಬೀಗುರುಪಚಾರವೇ ಭೂತದಯವು (೩)
ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ
ನಡೆದಾಡುವೋದೆಲ್ಲ ತೀರ್ಥಯಾತ್ರೆ
ಬಡತನವು ಬರಲದೇ ಭಗವದ್ ಭಜನೆ ಯೋಗ
ಸಡಗರದಲ್ಲಿಪ್ಪುದೆ ಶ್ರೀಶನಾಜ್ಞೆ (೪)
ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು
ಯದೃಚ್ಛಾಲಾಭವೇ ಸುಖವು ಯೆನಲು
ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ
ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳ್ಳನು (೫)
sAdhanakke bagegANe ennabahude
sAdaradi gurukaruNa tA paDeda baLika [pa]
kaMDa kaMDaddella kamalanABana mUrti
uMDu uTTaddella viShNu pUje
taMDa taMDada vArte vArijAkShana kIrti
hiMDu mAtugaLella hariya nAma (1)
maimaretu malaguvude dharaNige namaskAra
kaimIri hOdadde kRuShNArpaNa
vai manOvRuttigaLe viShayadali vairAgya
hOy-mAlitanavella hariya vihAra (2)
vAgatyapaDuvade vidhi niShEdhAracaraNe
rOgAnuBavavella ugratapavu
AgadavarADikoMbuvude ArSIvAda
bIgurupacAravE BUtadayavu (3)
hiDida haTa pUraisaladu hariya saMkalpa
naDedADuvOdella tIrthayAtre
baDatanavu baraladE Bagavad Bajane yOga
saDagaradallippude SrISanAj~je (4)
buddhisAlade summaniruvudE sammatavu
yadRucCAlABavE suKavu yenalu
madhvAMtargata SrI vijayaviThThalarEya
hRudgatArthava tiLidu oppisikoLLanu (5)
Leave a Reply