Paramatmane nee sari

Composer : Shri Vijayadasaru

By Smt.Shubhalakshmi Rao

ಪರಮಾತ್ಮನೆ ನೀ ಸರಿ ಎಂದು
ಕರಗದ ತಮದಲ್ಲಿ ಸೇರುವದೆ ||ಪ||

ಜೀವ ಪರಮಾತ್ಮಗೆ ಭೇದವ
ಆವಾವ ಕಾಲಕ್ಕೆಯಿಲ್ಲವೆಂದು
ದೇವನ ಬಳಿಗೆ ನೀ ದೂರಾಗಿ
ಈ ವಸುಧೆಯೊಳು ಬದುಕುವರೆ [೧]

ಭೇದ ಜೀವಕೆ ಜೀವ ಎಂದಿ
ಗಾದರು ಇಲ್ಲವೆಂದು ನುಡಿದು
ಈ ದುರಾಚಾರದಲ್ಲಿ ನಡೆದು
ಮಾದಿಗನಂತೀಗ ಮಾರ್ಮಲಿದು [೨]

ಜಡ ಪರಮಾತ್ಮ ಜಡ ಜಡಕೆ
ಜಡ ಜೀವಕೆ ಅಭೇದವೆಂದು
ಕಡುಗರ್ವದಿಂದಲಿ ಉಚ್ಚರಿಸಿ
ಮಡಿದು ನರಕಕ್ಕೆ ಉರುಳುವರೆ [೩]

ಅರಸಿನ ಬಳಿಗೆ ತೋಟಿಗ ಬಂದು
ಅರಸೆ ನೀನೆ ನಾನೆಂದಡೆ
ಉರವಣಿಸಿ ಕೊಲ್ಲಿಸಿ ಅವನ
ಶೆರಿಯ ಹಾಕದೆ ಮನ್ನಿಸುವನೆ [೪]

ದಾಸನ ದಾಸನು ಎಂದು
ಏಸು ಜನ್ಮಕೆ ಅಹುದೆಂದು
ದ್ವೇಷವು ತೊರೆದು ನೆನಿಸಿದರೆ
ಮೀಸಲಾಗಿಡುವ ವಿಜಯವಿಠ್ಠಲಾ [೫]


paramAtmane nI sari eMdu
karagada tamadalli sEruvade ||pa||

jIva paramAtmage BEdava
AvAva kAlakkeyillaveMdu
dEvana baLige nI dUrAgi
I vasudheyoLu badukuvare [1]

BEda jIvake jIva eMdi
gAdaru illaveMdu nuDidu
I durAcAradalli naDedu
mAdiganaMtIga mArmalidu [2]

jaDa paramAtma jaDa jaDake
jaDa jIvake aBEdaveMdu
kaDugarvadiMdali uccarisi
maDidu narakakke uruLuvare [3]

arasina baLige tOTiga baMdu
arase nIne nAneMdaDe
uravaNisi kollisi avana
Seriya hAkade mannisuvane [4]

dAsana dAsanu eMdu
Esu janmake ahudeMdu
dvEShavu toredu nenisidare
mIsalAgiDuva vijayaviThThalA [5]

Leave a Reply

Your email address will not be published. Required fields are marked *

You might also like

error: Content is protected !!