Composer : Shri Vijayadasaru
ನೋಡು ನೋಡು ಗರುಡಗಮನನೆ
ಮಾಡು ದಯವನು ವೇಗದಿ [ಪ]
ಪಾಡುವೆ ಆನಂದದಲಿ ನಿನ್ನನು
ಕೊಂಡಾಡುವೆನು ನಿನ್ನ ಮೂರ್ತಿಯಾ [ಅ.ಪ]
ಮಂಗಳಾಂಗನೆ ಮನ್ಮಥನ ಪಿತ
ಸಂಗೀತ ಸುರಲೋಲನೆ
ಕಂಗಳಬ್ಬರ ತೀರುವಂತೆ
ಚರಣಂಗಳನೆ ತೋರೋ ವಿನಯದಿ [೧]
ಪರಮ ಪುರುಷನೆ ಪುಣ್ಯ ಶ್ಲೋಕನೆ
ದುರುಳ ದೈತ್ಯರ ದಲ್ಲಣ
ಮರಿಯಲೀಸದೆ ನಿನ್ನ ಚರಣ
ಸ್ಮರಣೆ ಒದಗಿಸೊ ವದನಕೆ [೨]
ವಂದನೆಯು ಗೋವಿಂದ ಗೋಪಾಲಾ
ಮಂದರಧರ ಮಾಧವಾ
ಇಂದು ವಿಜಯವಿಠ್ಠಲ ನಿನ್ನ
ಸಂದರ್ಶನವ ಕೋರುತಾ [೩]
nODu nODu garuDagamanane
mADu dayavanu vEgadi [pa]
pADuve AnaMdadali ninnanu
koMDADuvenu ninna mUrtiyA [a.pa]
maMgaLAMgane manmathana pita
saMgIta suralOlane
kaMgaLabbara tIruvaMte
caraNaMgaLane tOrO vinayadi [1]
parama puruShane puNya SlOkane
duruLa daityara dallaNa
mariyalIsade ninna caraNa
smaraNe odagiso vadanake [2]
vaMdaneyu gOviMda gOpAlA
maMdaradhara mAdhavA
iMdu vijayaviThThala ninna
saMdarSanava kOrutA [3]
Leave a Reply