Nodide na nodide

Composer : Shri Vijayadasaru

By kum.Brinda & Kum.Sukanya

ನೋಡಿದೇ ನಾ ನೋಡಿದೇ | ನೋಡಿದೇ ನಾ ನೋಡಿದೇ |
ಮೂಡಲ ಗಿರಿಯ ವಾಸನ ಯಾತ್ರೆಯ ಮಾಡಿದೆ ನಾ ಮಾಡಿದೆ | ಅ.ಪ.|

ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸಿರಿಕ್ಕದೆ ಏರಿದೆ |
ಕಟ್ಟೆ ಕಡೆಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ |
ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕೆ ಎರಗಿದೆ |
ಕ್ಲೇಶವ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೇ | ೧ |

ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ ನೋಡಿದೇ |
ಜಲದಲಿ ಮಿಂದು ವೇಗದಲಿ ತಿರುವೆಂಗಳ ದೇವನ ನೋಡ ಸಾಗಿದೇ | |
ಗುಡಿಯ ಪೊಕ್ಕೆನು ಗರುಡ ಗಂಬದ ಸಡಗರವನು ನಾ ನೋಡಿದೇ |
ಒಡನೇ ಪ್ರಾಣಾಚಾರದವರು ಪಡೆದ ವರಗಳ ಕೇಳಿದೇ | ೨ |

ಮುನ್ನ ಅವಸರ ಮನೆಯೊಳಗೆ ಅನ್ನಪೂರ್ಣೆಯ ನೋಡಿದೇ |
ಚೆನ್ನಾಗಿ ಮಂಟಪದೊಳು ಶ್ರೀನಿವಾಸನ್ನ ಮೂರುತಿಯ ನಾ ನೋಡಿದೇ |
ತೊಟ್ಟಿಲ ತೀರ್ಥವ ಕೊಂಡು ಪ್ರಸಾದ ಇಟ್ಟು ಮಾರುವುದು ನೋಡಿದೇ |
ನಿಷ್ಟ ಭಕ್ತರು ಸಮ್ಮುಖದಲ್ಲಿ ಮುಟ್ಟಿ ಪಾಡುವುದು ನೋಡಿದೇ | ೩ |

ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮಸ್ಕಾರವನು ಮಾಡಿದೇ |
ಭೋರನೇ ಕಟಾಂಜನದ ಫಲ್ಗುಣಿ ಬಂಗಾರದ ಬಾಗಿಲ ನೋಡಿದೇ |
ಇಂದು ರವಿಕೋಟಿ ತೇಜದ ಇಂದಿರೇಶನ ಪಾದ ಅರವಿಂದ ಯುಗ್ಮವ |
ಪುಳಕೋತ್ ಸಹದಿಂದ ಸಂದರುಶನ ನಾ ಮಾಡಿದೇ | ೪ |

ಇಟ್ಟಿದ್ದ ಅಂದುಗೆ ಉಟ್ಟ ಪೀತಾಂಬರ ಕಟ್ಟಿದ್ದ ಗಟ್ಟಿ ವಡ್ಡ್ಯಾಣ |
ಗಟ್ಟಿ ಕಂಕಣಾ ಕರದಲಾಯುಧ ಇಟ್ಟ ಕಸ್ತೂರಿಯ ನೋಡಿದೇ |
ಮಾಸದ ಪೂವು ಪೂಸಿದ ಗಂಧ ಭೂಷಣ ನಾನಾ ಪರಿವಿಧ |
ಸುಬಗೆಯಲಿ ಇಟ್ಟ ಶ್ರೀನಿವಾಸನ ಶೃಂಗಾರವನು ನಾ ನೋಡಿದೇ | ೫ |

ಜಯಜಯ ಜಗದೀಷ ಜಗನ್ನಿವಾಸ ಜಯಜಯ ಲಕುಮಿ ಪರಿತೋಷ |
ಜಯಜಯ ವಿಕಾಸ ಜಯಜಯ ಸರ್ವೇಶ ಜಯವೆಂದು ಸ್ತೋತ್ರವ ಮಾಡಿದೇ |
ಕೆಸಕ್ಕಿ ದಧ್ಯೋನ್ನ ಪರಮಾನ್ನ ದೋಸಿ ಬಿಸಿಬಿಸಿ ಮನೋಹರ |
ಲೇಸಾಗಿ ಚತುರ್ವಿಧ ಪ್ರಸಾದವನ್ನು ಈಸು ಅವಸರ ನೋಡಿದೇ | ೬ |

ಕರ್ಪೂರಾದರತಿ ಒಪ್ಪಿನಿಂದಲಿ ತಂದು ತಪ್ಪದಲೆ ಬೆಳಗೋದು ನೋಡಿದೇ |
ರೆಪ್ಪೆಯ ಹಾಕದೆ ಮನದಣಿಯ ತಿಮ್ಮಪ್ಪನ ವಿಗ್ರಹ ನೋಡಿದೇ |
ಹಿಮಋತು ಪ್ರಥಮ ಮಾಸದ ದಶಮಿ ಹಿಮಕರ ವಾರದ ದಿನದಲ್ಲಿ |
ಕ್ರಮದಿಂದಲಿ ಪೋಗಿ ಬಿಂಬಮೂರುತಿಯ ವಿಮಲ ಚಾರಿತ್ರವ ನೋಡಿದೇ | ೭ |

ಶತ ಅಪರಾಧವ ಮಾಡಲು ಕಳೆದು ಗತಿಯ ನೀವಾ ಇಂದಿರಾಪತಿ |
ವಿಜಯವಿಠ್ಠಲ ಪುರಂದರನ ಸಂಗತಿಯಲ್ಲಿ ಸತತ ಸಾಗಿದೇ | ೮ |


nODidE nA nODidE | nODidE nA nODidE |
mUDala giriya vAsana yAtreya mADide nA mADide | a.pa.|

beTTava kaMDenu sOpAnaMgaLu niTTusirikkade Eride |
kaTTe kaDeyaNa gOpura shiKara diTTisi kaNNili nODide |
ee samastara guruvAda bhArati Ishana pAdake eragide |
klEshava kaLedu edurAgi poLeva shrIshana mahadvAra nODidE | 1 |

balavAgi baMdu svAmi puShkaraNi oLage varahana nODidE |
jaladali miMdu vEgadali tiruveMgaLa dEvana nODa sAgidE | |
guDiya pokkenu garuDa gaMbada saDagaravanu nA nODidE |
oDanE prANAcAradavaru paDeda varagaLa kELidE | 2 |

munna avasara maneyoLage annapUrNeya nODidE |
cennAgi maMTapadoLu shrInivAsanna mUrutiya nA nODidE |
toTTila tIrthava koMDu prasAda iTTu mAruvudu nODidE |
niShTa Baktaru sammuKadalli muTTi pADuvudu nODidE | 3 |

dvArapAlakarige sAShTAMgadali namaskAravanu mADidE |
BOranE kaTAMjanada phalguNi baMgArada bAgila nODidE |
iMdu ravikOTi tEjada iMdirEshana pAda araviMda yugmava |
puLakOt sahadiMda saMdarushana nA mADidE | 4 |

iTTidda aMduge uTTa pItAMbara kaTTidda gaTTi vaDDyANa |
gaTTi kaMkaNA karadalAyudha iTTa kastUriya nODidE |
mAsada poovu pUsida gaMdha bhUShaNa nAnA parividha |
subageyali iTTa shrInivAsana shRuMgAravanu nA nODidE | 5 |

jayajaya jagadISha jagannivAsa jayajaya lakumi paritOSha |
jayajaya vikAsa jayajaya sarvEsha jayaveMdu stOtrava mADidE |
kesakki dadhyOnna paramAnna dOsi bisibisi manOhara |
lEsAgi caturvidha prasAdavannu Isu avasara nODidE | 6 |

karpUrAdarati oppiniMdali taMdu tappadale beLagOdu nODidE |
reppeya hAkade manadaNiya timmappana vigraha nODidE |
himaRutu prathama mAsada dashami himakara vArada dinadalli |
kramadiMdali pOgi biMbamUrutiya vimala cAritrava nODidE | 7 |

shata aparAdhava mADalu kaLedu gatiya nIvA iMdirApati |
vijayaviThThala puraMdarana saMgatiyalli satata sAgidE | 8 |

Leave a Reply

Your email address will not be published. Required fields are marked *

You might also like

error: Content is protected !!