Jaya Jayatu Jahnaviye

Composer : Shri Vijayadasaru

By Smt.Shubhalakshmi Rao

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ
ಜಯ ಮಂಗಳವನೀಯೆ ಜಯ ನಮ್ಮ ಕಾಯೆ ||ಪ||

ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-
ಕಮಲವನು ತೊಳೆಯಲಾವೇಗದಿಂದ
ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ
ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||೧||

ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ
ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ
ಭುವನದೊಳಗೀರೈದು ನೂರು ಯೋಜನದಗಲ
ತವಕದಿಂದಲಿ ಧುಮುಕಿ ಚತುರ ಭಾಗವಾದೆ ||೨||

ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ
ಭವದೊರೆ ಭಗೀರಥಗೆ ವಲಿದು ಬರುತ
ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ
ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ||೩||

ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಪಾವನವು ಸಂದೇಹವಿಲ್ಲ
ಸಲಿಲವನು ಸ್ಮರಿಸಿ ಮಜ್ಜನ ಪಾನ ಮಾಡಿದಗೆ
ಪೊಳೆಗೆ ವೈಕುಂಠಪುರ ಅವನ ಹೃದಯದಲಿ ||೪||

ದೇಶದೇಶಗಳಿಂದ ಬಂದ ಸುಜನರ ಪಾಪ
ನಾಶನವ ಮಾಳ್ಪ ನೀ ನಿಷ್ಕಾಮದಿ
ಕಾಶಿಸ್ಥ ಬಿಂದು ಮಾಧವ ವಿಜಯವಿಠ್ಠಲನ
ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ ||೫||


jayajayatu jAhnaviye Bakta saMjIvi
jaya maMgaLavanIye jaya namma kAye ||pa||

kamalajanu pAtreyoLu dharisalA haripAda-
kamalavanu toLeyalAvEgadiMda
vimala saMgatiyiMda maMdAdiniyenisi
sumana sAvaniyalli merede suranadiye||1||

dhruvalOkakiLidu amarAvatiya sAride
raviyaMte poLeyuta A jana madhyadiM
BuvanadoLagIraidu nUru yOjanadagala
tavakadiMdali dhumuki catura BAgavAde ||2||

Sivana mastakadalli SOBisuva mahamahime
Bavadore BagIrathage validu baruta
kavi janhumuniyiMda puTTi himagiri dATi
javana Baginiya kUDi maNikarNikeya nerade ||3||

aLakanaMdane ninna smaraNe mADida janake
kulakOTi pAvanavu saMdEhavilla
salilavanu smarisi majjana pAna mADidage
poLege vaikuMThapura avana hRudayadali ||4||

dESadESagaLiMda baMda sujanara pApa
nASanava mALpa nI niShkAmadi
kASistha biMdu mAdhava vijayaviThThalana
sOsiniMdali pogaLutihe suviKyAte ||5||

Leave a Reply

Your email address will not be published. Required fields are marked *

You might also like

error: Content is protected !!