Hadinalku lokangala

Composer : Shri Vijayadasaru

By Smt.Shubhalakshmi Rao

ಹದಿನಾಲ್ಕು ಲೋಕಂಗಳನಾಳುವ ತಂದೆಗೆ |
ಮುದದಿಂದ ನಾನೊಬ್ಬ ಭಾರವಾದೆನೆ ||ಪ||

ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||
ಭರದಿಂದ ಪೋಗಿ ಬೆನ್ನಾಂತು ಪೊತ್ತೆ ||
ಧರಣಿಯು ಮೊರೆಯಿಡೆ ತ್ವರಿತದಲಿ ಬಂದು |
ಭೂತರುಣಿಯ ಸೆರೆಬಿಡಿಸಿ ಉಳುಹಿಕೊಳ್ಳಲಿಲ್ಲವೆ ||೧||

ಸುರಪತಿ ಮುನಿದು ಏಳು ಹಗಲಿರುಳು ಮಳೆಗರೆಯೆ |
ಬೆರಳಲಿ ಧರಿಸಿ ತರುಗಳ ಕಾಯ್ದು ನಿಜದಿ ||
ವರಮುನಿ ಪಥವನು ಬೇಡಲಾಗಿ ಬೆದರಿ ನರ- |
ನರಸಿ ನಿನ್ನ ಕರೆಯೆ ಕರುಣದಿ ಪಾಲಿಸಿದೆ ||೨||

ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |
ಸಲಹಬೇಕೆಂದು ಬೇಸರಿಸಲಿಲ್ಲಾ ||
ಸುಲಭದಲಿ ಶೇಷಾಚಲನಾಗಿಪ್ಪ |
ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲ ||೩||


hadinAlku lOkaMgaLanALuva taMdege |
mudadiMda nAnobba BAravAdene ||pa||

suragiriyu SaradhiyoLu kaDevAga muNagalA ||
BaradiMda pOgi bennAMtu potte ||
dharaNiyu moreyiDe tvaritadali baMdu |
BUtaruNiya serebiDisi uLuhikoLLalillave ||1||

surapati munidu ELu hagaliruLu maLegareye |
beraLali dharisi tarugaLa kAydu nijadi ||
varamuni pathavanu bEDalAgi bedari nara- |
narasi ninna kareye karuNadi pAliside ||2||

jalajAkSha beTTavanu pottu baLalidAga |
salahabEkeMdu bEsarisalillA ||
sulaBadali SEShAcalanAgippa |
olidenna saMrakShiso vijayaviThThala ||3||

Leave a Reply

Your email address will not be published. Required fields are marked *

You might also like

error: Content is protected !!