Composer : Shri Vijayadasaru
ದಯವಿರಲಿ ಎನ್ನಲ್ಲಿ ಧರಣಿಧರನೆ || ಪ ||
ಭಯಗಳನು ಪೋಗಾಡು ಭಕ್ತಜನ ಪ್ರೀಯಾ || ಅ.ಪ ||
ಎರಗಿಸುವುದು ಚರಣದಲಿ ಶಿರಸು |
ಎರಗಲಿ ನಿನ್ನ ಧ್ಯಾನದಲಿ ಮನಸು ||
ಎರವೆರವು ಮಾಡದಲೆ ನಿನ್ನ ನಾಮಾಮೃತವ |
ಎರದು ಸಾಕುವದು ಸಂತತ ಎನ್ನ ಬಿಡದೆ || ೧ ||
ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ |
ಶ್ರುತಿಗಳೊಳು ಪೇಳುತಿದೆ ವರದೊರದೂ ||
ಕ್ಷಿತಿಯೊಳಗೆ ರವಿ ಶಶಿಯ ಗತಿತಪ್ಪಿದರೇನು |
ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ || ೨ ||
ಕೊಡುವಲ್ಲಿ ಕೊಳುವಲ್ಲಿ ಯಡಿಗಡಿಗೆ ಭಕುತಿರಸ |
ಕುಡಿಸುವಲಿ ಕೆಲಕಾಲ ಸಂತೋಷವ ||
ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ |
ಮೃಡನೊಡೆಯಾ ಸಿರಿ ವಿಜಯವಿಠಲ ತಿರುಮಲೇಶಾ || ೩ ||
dayavirali ennalli dharaNidharane || pa ||
BayagaLanu pOgADu Baktajana prIyA || a.pa ||
eragisuvudu caraNadali Sirasu |
eragali ninna dhyAnadali manasu ||
eraveravu mADadale ninna nAmAmRutava |
eradu sAkuvadu saMtata enna biDade || 1 ||
matigeTTa mAnavage gati nIne AvAvA |
SrutigaLoLu pELutide varadoradU ||
kShitiyoLage ravi SaSiya gatitappidarEnu |
patita pAvana ninna kRupege eNegANe || 2 ||
koDuvalli koLuvalli yaDigaDige Bakutirasa |
kuDisuvali kelakAla saMtOShava ||
baDisi porevalli ninagAvalli sarigANe |
mRuDanoDeyA siri vijayaviThala tirumalESA || 3 ||
Leave a Reply