Composer : Shri Vijayadasaru
ರಾಗ: ರಂಜಿನಿ, ಆದಿತಾಳ
ಅಂತರಂಗದ ಕದವು ತೆರೆಯಿತಿಂದು || ಪ ||
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ.ಪ||
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |
ವಾಸವಾಗಿದ್ದರೋ ದುರುಳರಿಲ್ಲಿ ||
ಮೋಸವಾಯಿತು ಇಂದಿನ ತನಕ ತಮಸಿನ |
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ || ೧ ||
ಹರಿಕರುಣವೆಂಬಂಥ ಕೀಲಿ ಕೈ ದೊರಕಿತು |
ಗುರುಕರುಣವೆಂಬಂಥ ಶಕ್ತಿಯಿಂದ ||
ಪರಮ ಭಾಗವತರ ಸಹವಾಸದಲಿ ಪೋಗಿ |
ಹರಿಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ || ೨ ||
ಸುತ್ತಲಿದ್ದವರೆಲ್ಲ ಪಲಾಯನವಾದರು |
ಭಕ್ತಿಕಕ್ಕಡವೆಂಬ ಜ್ಞಾನದೀಪ ||
ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ |
ಎತ್ತನೋಡಿದರತ್ತ ಶೃಂಗಾರಸದನ || ೩ ||
ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು |
ಪರ ದಾರಿಗೆ ಪ್ರಾಣ ಜಯವಿಜಯರು ||
ಮಿರುಗುವೊ ಮಧ್ಯಮಂಟಪ ಕೋಟಿರವಿಯಂತೆ |
ಸರಸಿಜನಾಭನ ಅರಮನೆಯ ಸೊಬಗು || ೪ ||
ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ |
ರಮೆಧರೆಯರಿಂದಲಾಲಿಂಗಿತ್ವದಿ ||
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- |
ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ || ೫ ||
rAga: raMjini, AditALa
aMtaraMgada kadavu tereyitiMdu || pa ||
eMtu puNyada Palavu prApti dorakito enage ||a.pa||
EsudinavAyito bIgamudreya mADi |
vAsavAgiddarO duruLarilli ||
mOsavAyitu iMdina tanaka tamasina |
rASiyoLage hULi kANisuttiralilla || 1 ||
harikaruNaveMbaMtha kIli kai dorakitu |
gurukaruNaveMbaMtha SaktiyiMda ||
parama BAgavatara sahavAsadali pOgi |
harismaraNeyiMdalli bIgamudreya tegede || 2 ||
suttaliddavarella palAyanavAdaru |
BaktikakkaDaveMba j~jAnadIpa ||
jattAgi hiDikoMDu dvAradoLage pokke |
ettanODidaratta SRuMgArasadana || 3 ||
horage dvAravu nAlku oLagaidu dvAragaLu |
para dArige prANa jayavijayaru ||
miruguvo madhyamaMTapa kOTiraviyaMte |
sarasijanABana aramaneya sobagu || 4 ||
svamUrtigaNa madhya saccidAnaMdaika |
ramedhareyariMdalAliMgitvadi ||
kamalajAdigaLiMda tutisikoLLuta hRudaya- |
kamaladoLagiruva SrI vijayaviThThalana kaMDe || 5 ||
Leave a Reply