Tolasadakkiya

Composer : Shri Vijayadasaru

Smt. Sridevi

ಜಯಮಂಗಳಂ ನಿತ್ಯಶುಭ ಮಂಗಳಂ |ಪ|

ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆಸಿಕೊಂಬ
ಇಲ್ಲ ತನಗೆಂದು ಸುಳ್ಳು ಮಾತನಾಡಿದರೆ
ಎಲ್ಲವನು ಕಸಗೊಂಬ ಕಳ್ಳ ದೊರೆಗೆ |೧|

ತನ್ನ ನೋಡುವೆನೆಂದು ಮುನ್ನೂರ ಗಾವುದ
ಬಂದುತನ್ನ ಗುಡಿಯಾ ಪೊಕ್ಕ ಜನರಿಗೆಲ್ಲಾ
ಹೊನ್ನು ಹಣ ಕಸಿದುಕೊಂಡು ತನ್ನ
ದರುಶನ ಕೊಡದೆ
ಬೆನ್ನೊಡೆಯ ಹೊಡೆಸುವ ಅನ್ಯಾಯಕಾರಿಗೆ |೨|

ಗಿಡ್ಡ ಹಾರವನಾಗಿ ಒಡ್ಡಿ ದಾನ ಬೇಡಿ
ದುಡ್ಡು ಕಾಸುಗಳಿಗೆ ಕೈ ನೀಡಿ, ಅಡ್ಡ
ಬಿದ್ದ ಜನರ ವಿಡ್ಡೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿವಿಜಯವಿಠ್ಠಲಗೆ |೩|


jayamaMgaLaM nityaSuBa maMgaLaM |pa|

toLasadakkiya tiMba kilubutaLigeyaluMba
koLagadali haNagaLanu aLesikoMba
illa tanageMdu suLLu mAtanADidare
ellavanu kasagoMba kaLLa dorege |1|

tanna nODuveneMdu munnUra gAvuda
baMdutanna guDiyA pokka janarigellA
honnu haNa kasidukoMDu tanna
daruSana koDade
bennoDeya hoDesuva anyAyakArige |2|

giDDa hAravanAgi oDDi dAna bEDi
duDDu kAsugaLige kai nIDi, aDDa
bidda janara viDDUragaLa kaLedu
doDDavara mALpa sirivijayaviThThalage |3|

Leave a Reply

Your email address will not be published. Required fields are marked *

You might also like

error: Content is protected !!