Ninna Olumeyinda

Composer : Shri Vijayadasaru

By Smt.Shubhalakshmi Rao

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು ||ಪ||

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ
ಊರ್ಣ ವಿಚಿತ್ರ ಸುವಸನ
ವರ್ಣವರ್ಣದಿಂದ ಬಾಹೋದೇನೊ
ಸಂಪೂರ್ಣ ಗುಣಾರ್ಣವ ದೇವಾ (೧)

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವದಕ್ಕಿನ್ನು
ತಬ್ಬಿಬ್ಬುಗೊಂಡೆನೊ ಹಿಂದೆ
ನಿರ್ಭರದಿಂದಲಿ ಸರ್ವರ ಕೂಡುಂಬೊ
ಹಬ್ಬದೂಟವ ಉಣಿಸುವಿಯೋ (೨)

ಸಂಜೀತನಕ ಇದ್ದು ಸಣ್ಣ ಸವುಟಿನ
ತುಂಬ ಗಂಜಿ ಕಾಣದೆ ಬಳಳಿದೆನೊ
ವ್ಯಂಜನ ಮೊದಲಾದ ನಾನಾ ರಸಂಗಳ
ಭುಂಜಿಸುವುದು ಮತ್ತೇನೋ (೩)

ಮನೆಮನೆ ತಿರುಗಿದರು ಕಾಸು ಪುಟ್ಟದೆ
ಸುಮ್ಮನೆ ಚಾಲವರಿದು ಬಾಳಳಿದೆನೊ
ಹಣ ಹೊನ್ನು ದ್ರವ್ಯಂಗಳ್ ಇದ್ದಲ್ಲಿಗೆ
ತನಗೆ ಪ್ರಾಪ್ತಿ ನೋಡೋ ಜೀಯ (೪)

ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೆನೆಂದರೆ ಈಯಗಾಣೆ
ಈ ಧರೆಯೊಳಗೆ ಸತ್ಪಾತ್ರರ ಕೂಡುಂಬೊ
ಪದ್ಧತಿ ನೋಡೊ ಪುಣ್ಯಾತ್ಮ (೫)

ನೀಚೋಚ್ಛ ತಿಳಿಯದೆ ಸರ್ವರ ಚರಣಕೆ
ಚಾಚಿದೆನೊಸಲ ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕ್ಕೆ ನಿಲುಕದೊ ಹರಿಯೆ (೬)

ವೈದಿಕ ಪದವೀಯ ನೀವಗೆ ಲೌಕಿಕ
ಐದಿಸುವದು ಬಲುಖ್ಯಾತೆ
ಮೈದುನಗೊಲಿದ ಶ್ರೀ ವಿಜಯವಿಠಲ ನಿನ್ನ
ಪಾದ ಸಾಕ್ಷಿಯ ಅನುಭವವೊ (೭)


ninna olumeyiMda niKiLa janaru baMdu
mannisuvaro maharAya
enna puNyagaLiMda I pari uMTEnO
ninnadE sakala saMpattu ||pa||

jIrNa malina vastra kANada manujage
UrNa vicitra suvasana
varNavarNadiMda bAhOdEno
saMpUrNa guNArNava dEvA (1)

obba heMgasina hoTTege hAkuvadakkinnu
tabbibbugoMDeno hiMde
nirbharadiMdali sarvara kUDuMbo
habbadUTava uNisuviyO (2)

saMjItanaka iddu saNNa savuTina
tuMba gaMji kANade baLaLideno
vyaMjana modalAda nAnA rasaMgaLa
BuMjisuvudu mattEnO (3)

manemane tirugidaru kAsu puTTade
summane chAlavaridu bALaLideno
haNa honnu dravyaMgaL iddallige
tanage prApti nODO jIya (4)

madhyAhna kAlakke atithigaLige anna
meddeneMdare IyagANe
I dhareyoLage satpAtrara kUDuMbo
paddhati nODo puNyAtma (5)

nIcOcCa tiLiyade sarvara caraNake
cAcidenosala hastagaLa
yOcisi nODalu sOjigavAgide
vAcakke nilukado hariye (6)

vaidika padavIya nIvage laukika
aidisuvadu baluKyAte
maidunagolida SrI vijayaviThala ninna
pAda sAkShiya anuBavavo (7)

Leave a Reply

Your email address will not be published. Required fields are marked *

You might also like

error: Content is protected !!