Composer : Shri Vijayadasaru
ಮನವೆ ನೀ ದೃಢವಾದರೆ ಮನಸಿ-
ಜನಯ್ಯನ ಚರಣ ಕಾಂಬುವೆನು ನಾನು ||ಪ||
ಹಂಬಲವನ್ನು ಮಾಡದಿದ್ದರೆ ಹರಿ
ಎಂಬ ನಾಮ ಪೀಯೂಷ ದೊರಕುವುದು ||೧||
ಚಂಚಲವುಳ್ಳವನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ||೨||
ಅತ್ತಲಿತ್ತಲಿ ಪೋಗದಿರು ಎ-
ನ್ನತ್ತ ವಿಜಯವಿಠ್ಠಲ ಬರಲಿ ||೩||
manave nI dRuDhavAdare manasi-
janayyana caraNa kAMbuvenu nAnu ||pa||
haMbalavannu mADadiddare hari
eMba nAma pIyUSha dorakuvudu ||1||
caMcalavuLLavanAgadiddare duShTa
paMcEMdriyagaLa sthiravAgi nillisuve ||2||
attalittali pOgadiru e-
nnatta vijayaviThThala barali ||3||
Leave a Reply