Composer : Shri Vijayadasaru
ಬೂದಿ ಮುಚ್ಚಿದ ಕೆಂಡದಂತಿಪ್ಪರು
ಈ ಧರೆಯ ಮೇಲೆ ಶ್ರೀಹರಿಯ ಭಕ್ತ ಜನರು ||ಪ||
ಅಂಗನೋಡಲು ಅಷ್ಟ ವಕ್ರವಾಗಿಪ್ಪರು
ಕಂಗಳಿಂದಲಿ ನೋಡೆ ಘೋರತರರು
ಮಂಗಳಾಂಗನ ಅಂತರಂಗದಲಿ ಭಜಿಸುತ್ತ
ಹಿಂಗದೆ ಸಂತಜನ ಸಂಗದೊಳಿಹರೊ ||೧||
ನಾಡಜನರುಗಳಂತೆ ನಡೆಯರು ನುಡಿಯರು
ಚಾಡಿ ಕ್ಷುದ್ರವ ಕೇಳಿ ಒಡಲ ತುಂಬಿಸಿಕೊಳರು
ಕೂಡರೊ ಕುಟಿಲ ಜನ ಸಂಘದಲ್ಲಿ
ರೂಢಿಯೊಳಗೊಂದೊಂದೆ ಗೂಢವಾಗಿಹರು ||೨||
ಡಂಭಕತನದಿಂದ ಗೊಂಬೆ ನೆರಹಿಕೊಂಡು
ಡೊಂಬ ಕುಣಿದಂತೆ ಕುಣಿದಾಡರು
ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ
ಬಿಂಬಮೂರುತಿಯನ್ನೆ ಕೊಂಡಾಡುತಿಹರು ||೩||
ಶತ್ರು ಮಿತ್ರರುಗಳ ಸಮವಾಗಿ ಎಣಿಸುವರು
ಪುತ್ರ ಮಿತ್ರ ಭ್ರಾತೃಗಳ ನೆಚ್ಚರೊ
ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ
ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬರೊ ||೪||
ಕಷ್ಟ ಸೌಖ್ಯಂಗಳನೆ ಕಲಿವರಗರ್ಪಿಪರು
ಇಟ್ಟು ತೊಟ್ಟಿದ್ದು ಹರಿಕೊಟ್ಟನೆಂಬುವರು
ಸೃಷ್ಟೀಶ ಸಿರಿ ವಿಜಯ ವಿಠ್ಠಲನ ಪದ ಪದ್ಮ
ಮುಟ್ಟಿ ಭಜಿಸಿ ಮುಕ್ತಿ ಸಾಮ್ರಾಜ್ಯ ಪಡೆಯುವರು ||೫||
bUdi muccida keMDadaMtipparu
I dhareya mEle SrIhariya Bakta janaru ||pa||
aMganODalu aShTa vakravAgipparu
kaMgaLiMdali nODe GOratararu
maMgaLAMgana aMtaraMgadali Bajisutta
hiMgade saMtajana saMgadoLiharo ||1||
nADajanarugaLaMte naDeyaru nuDiyaru
cADi kShudrava kELi oDala tuMbisikoLaru
kUDaro kuTila jana saMGadalli
rUDhiyoLagoMdoMde gUDhavAgiharu ||2||
DaMBakatanadiMda goMbe nerahikoMDu
DoMba kuNidaMte kuNidADaru
haMbalaMgaLa biTTu haruShavuLLavarAgi
biMbamUrutiyanne koMDADutiharu ||3||
Satru mitrarugaLa samavAgi eNisuvaru
putra mitra BrAtRugaLa neccaro
yAtre tIrthaMgaLige hOgutta SrI hariya
stOtragaLa mADi sAdhane mADikoMbaro ||4||
kaShTa sauKyaMgaLane kalivaragarpiparu
iTTu toTTiddu harikoTTaneMbuvaru
sRuShTISa siri vijaya viThThalana pada padma
muTTi Bajisi mukti sAmrAjya paDeyuvaru ||5||
Leave a Reply