Composer : Shri Gurujagannatha dasaru
ಹರಿ ನೀನೆ ಸರ್ವೋತ್ತಮ ಸರ್ವಜ್ಞ ಸರ್ವಾಧಾರ
ಹರಿ ನೀನೆ ಸರ್ವೋತ್ಪಾದಕ ಸರ್ವಪಾಲಕ
ಹರಿ ನೀನೆ ಸರ್ವನಾಶಕ ಸರ್ವಪ್ರೇರಕ
ಹರಿ ನೀನೆ ನಿಯಾಮಕ ನಿಯಮ್ಯನೋ [೧]
ಹರಿ ನೀನೆ ಬಾಧ್ಯ ಭಾಧಕ ವ್ಯಾಪ್ಯ ವ್ಯಾಪಕ
ಹರಿ ನೀನೆ ಕಾರ್ಯ ಕಾರಣ
ಹರಿ ನೀನೆ ಕರ್ತೃಕರ್ಮಕ್ರಿಯಾ ಶಕ್ತಿ
ಹರಿ ನೀನೆ ಧಾತೃ ದೇಯ ದಾನಪಾತ್ರನೊ [೨]
ಹರಿ ನೀನೆ ಸಹಕಾರಿ ಸಹಿತ ಪೋಗುವೀ
ಹರಿ ನೀನೆ ಮುಂಪೋಗಿ ಪರರೀಗೀಪರಿ
ಹರಿ ನೀನೆ ಪ್ರೇರಿಸಿ ಕಾರ್ಯಮಾಳ್ಪಿ
ಹರಿ ನೀನೆ ಸರ್ವದ ಸರ್ವತ್ರದಲಿ ನಿಂತೂ [೩]
ಹರಿ ನೀನೆ ಜೀವರ ಪರಿಪಾಲಿಸುವಿ
ಹರಿ ನೀನೆ ಸರ್ವರ ಬಿಂಬಮೂರುತಿ ಎಂದೂ
ಸರ್ವಙ್ಞ ರಾಯರು ಗೀತಾತಾತ್ಪರ್ಯದಿ
ವರದು ಈ ಪರಿಯಿಂದ ಜಗಕೆ ಪೇಳಿಹರೋ [೪]
ಹರಿ ನಿನ್ನ ಮಹಿಮೆಯನರಿಯಾದ ಮನುಜರು
ಧರೆಯೊಳು ಸರ್ವಕ್ಕು ನಾವೇ ಕರ್ತೃ
ಮರೆಯಾದೆ ಪೇಳುತ ಭವಸಿಂಧು ಮಧ್ಯದಿ
ಪರಿಪರಿ ದುಃಖವನುಣುತಿಹರೋ [೫]
ಹರಿ ನಿನ್ನ ಮರೆಯಾದ ಪರಮಜ್ಞಾನವನಿತ್ತು
ಪೊರೆಯ ಶ್ರೀಗುರು ಜಗನ್ನಾಥ ವಿಠಲರೇಯಾ
ಹರಿ ನಿನ್ನಯ ನಾಮವ ಮರೆಯದೆ ಪೇಳಿಸೋ
ಹರಿ ನಿನ್ನ ಸ್ಮರಣೆಯ ಕರುಣಿಸೋ ಕರುಣಿಸೋ [೬]
ಹರಿ ನಿನ್ನ ಧ್ಯಾನ ಮನದಲ್ಲಿ ಮಾಡಿಸೋ
ಹರಿ ನಿನ್ನ ಮೂರುತಿ ತೋರಿಸೊ ತೋರಿಸೋ
ಹರಿ ನಿನ್ನ ಕಾಣುವ ಜ್ಞಾನವನಿತ್ತು
ಪರಿಹರ ಮಾಡೆಲೊ ದುರಿತಗಳಾ [೭]
ಹರಿ ನಿನ್ನ ಭಕ್ತರ ಸೇವಕನೋ
ಹರಿ ಎನ್ನನು ಭಾದಿಪ ದಿತಿಜರ
ತ್ವರಿತದಿ ತರಿದೂ ಸ್ಥಿರ ಸುಖವಿತ್ತೂ
ಪರಮ ದಯಾನಿಧೇ ಗುರುಗಳದ್ವಾರಾ
ಹರಿ ನಿನ್ನ ಗುಣಗಳ ಕೀರ್ತನೆ ಮಾಡಿಸೋ [೮]
ಗುರುಗಳ ಕರುಣಾಕವಚವ ತೊಡಿಸೋ
ಗುರುವಂತರ್ಗತನಾಗಿಹ ನಮ್ಮ
ಗುರುಜಗನ್ನಾಥವಿಠಲ ನೀನೇ
ಪರಿಪರಿವಿಧದಲಿ ಪೊರೆಯುವ ಕರುಣೀ [೯]
hari nIne sarvOttama sarvaj~ja sarvAdhAra
hari nIne sarvOtpAdaka sarvapAlaka
hari nIne sarvanASaka sarvaprEraka
hari nIne niyAmaka niyamyanO [1]
hari nIne bAdhya BAdhaka vyApya vyApaka
hari nIne kArya kAraNa
hari nIne kartRukarmakriyA Sakti
hari nIne dhAtRu dEya dAnapAtrano [2]
hari nIne sahakAri sahita pOguvI
hari nIne muMpOgi pararIgIpari
hari nIne prErisi kAryamALpi
hari nIne sarvada sarvatradali niMtU [3]
hari nIne jIvara paripAlisuvi
hari nIne sarvara biMbamUruti eMdU
sarva~g~ja rAyaru gItAtAtparyadi
varadu I pariyiMda jagake pELiharO [4]
hari ninna mahimeyanariyAda manujaru
dhareyoLu sarvakku nAvE kartRu
mareyAde pELuta BavasiMdhu madhyadi
paripari duHKavanuNutiharO [5]
hari ninna mareyAda paramaj~jAnavanittu
poreya SrIguru jagannAtha viThalarEyA
hari ninnaya nAmava mareyade pELisO
hari ninna smaraNeya karuNisO karuNisO [6]
hari ninna dhyAna manadalli mADisO
hari ninna mUruti tOriso tOrisO
hari ninna kANuva j~jAnavanittu
parihara mADelo duritagaLA [7]
hari ninna Baktara sEvakanO
hari ennanu BAdipa ditijara
tvaritadi taridU sthira suKavittU
parama dayAnidhE gurugaLadvArA
hari ninna guNagaLa kIrtane mADisO [8]
gurugaLa karuNA kavacava toDisO
guruvaMtargatanAgiha namma
gurujagannAthaviThala nInE
pariparividhadali poreyuva karuNI [9]
Leave a Reply