Composer : Shri Vishwendra Tirtharu

By Smt.Shubhalakshmi Rao

ಹರಿ ಬಂದ ನರಹರಿ ಬಂದ
ಕರಿಯ ಮೋಚಿಸಿದ ಸಿರಿವರ ಬಂದ [ಪ]

ದೇವ ಬಂದ ಪಾಂಡವರ ಭಾವ ಬಂದ
ಗೋವುಗಳ ಕಾವ ಕೃಪಾ ಸಿಂಧು ಬಂದ (೧)

ಖ್ಯಾತ ಬಂದ ಪಾರ್ಥಸೂತ ಬಂದ
ವಾತಸುತ ಭೀಮಸೇನ ಪ್ರಿಯ ಬಂದ (೨)

ಮುನಿ ಬಂದ ಜಾಮದಗ್ನ್ಯ ಬಂದ
ಭಾನುಕೋಟಿ ಸುಪ್ರಕಾಶ ವ್ಯಾಸ ಬಂದ (೩)

ರಾಜ ಬಂದ ದಶರಥಸುತ ಬಂದ |
ತೇಜಿಯೇರಿ ಮೆರೆದ ಕಲ್ಕಿ ದೇವ ಬಂದ (೪)

ಶ್ರೀಶ ಬಂದ ಮಹಿದಾಸ ಬಂದ
ಭಾಸುರಾಂಗ ದೇವ ಶ್ರೀನಿವಾಸ ಬಂದ (೫)

ನೀಲ ಬಂದ ಬಾಲಕೃಷ್ಣ ಬಂದ
ಬಾಲ ಧ್ರುವ ರಾಯಗೊಲಿದ ರಂಗ ಬಂದ (೬)

ಕೋಲ ಬಂದ ಬಲಭದ್ರನ ತಮ್ಮ ಬಂದ
ರಾಜೇಶ ಶ್ರೀಹಯಮುಖ ದೇವ ಬಂದ (೭)


hari baMda narahari baMda
kariya mOcisida sirivara baMda [pa]

dEva baMda pAMDavara BAva baMda
gOvugaLa kAva kRupA siMdhu baMda (1)

KyAta baMda pArthasUta baMda
vAtasuta BImasEna priya baMda (2)

muni baMda jAmadagnya baMda
BAnukOTi suprakASa vyAsa baMda (3)

rAja baMda daSarathasuta baMda |
tEjiyEri mereda kalki dEva baMda (4)

SrISa baMda mahidAsa baMda
BAsurAMga dEva SrInivAsa baMda (5)

nIla baMda bAlakRuShNa baMda
bAla dhruva rAyagolida raMga baMda (6)

kOla baMda balaBadrana tamma baMda
rAjESa SrIhayamuKa dEva baMda (7)

Leave a Reply

Your email address will not be published. Required fields are marked *

You might also like

error: Content is protected !!