Composer : Shri Gurushreesha vittala
ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ
ಮತ್ತೆ ಮತ್ತೆ ಉನ್ಮತ್ತರ ಸಂಗದಿ
ಉತ್ತಮರಿಗೆ ಕರವೆತ್ತಿ ಮುಗಿಯದಲೆ ||ಪ||
ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿ
ಹತ್ತಿ ಹೊಂದಿದವರೆಂದು ಮೋಹಕೆ ಬಿದ್ದು
ಚಿತ್ತಜ ಪಿತನನೇಕ ಚಿತ್ತದಿ ನೆನೆಯದೆ ||೧||
ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದು
ಭುಜಗಶಯನ ನಿನ್ನ ಭಜನಿಯ ಮಾಡುವ
ಸುಜನರ ಚರಣಾಂಬುಜವನೆ ಪಿಡಿಯದೆ ||೨||
ಉದರಭರಣೆಗಾಗಿ ಸರ್ವದಾ ಅಧಮರ ಹಿಂದೆ ತಿರುಗಿ
ಬುಧರ ಸೇವೆಯ ಮಾಡಿ ಹೃದಯ ಕಮಲದಲ್ಲಿ
ಪದುಮನಾಭನ ಪಾದ ಮುದದಿ ಧೇನಿಸದೆ ||೩||
ಜ್ಞಾನವಂತರ ಸಂಗ ಮಂದ ಜ್ಞಾನಿಗೇನೋ ರಂಗ
ದೀನ ವಾತ್ಸಲ ನೀ ದೀನರಿಗಲ್ಲದಲೇ
ಹೀನಗುಣದವನಿಗೇನು ಗತಿಯೋ ಕೃಷ್ಣಾ ||೪||
ಪರಮಪುರುಷ ಹರಿಯೇ ಎನ್ನ ನೀ ಕರಪಿಡಿಯೋ ಧೊರಿಯೇ
ಅರಘಳಿಗ್ಯಾದರೂ ಗುರುಶ್ರೀಶವಿಠ್ಠಲ
ಪರಮ ಪಾವನ ನಿನ್ನ ಚರಣವ ಸ್ಮರಿಸದೆ ||೫||
hottu hOyitallA hari ninna BRutyanAgalilla
matte matte unmattara saMgadi
uttamarige karavetti mugiyadale ||pa||
nitya nityadalli parara vittava bayasutali
hatti hoMdidavareMdu mOhake biddu
cittaja pitananEka cittadi neneyade ||1||
kujanara baLiviDidu sukarmavu yajanAdigaLa jaridu
BujagaSayana ninna Bajaniya mADuva
sujanara caraNAMbujavane piDiyade ||2||
udaraBaraNegAgi sarvadA adhamara hiMde tirugi
budhara sEveya mADi hRudaya kamaladalli
padumanABana pAda mudadi dhEnisade ||3||
j~jAnavaMtara saMga maMda j~jAnigEnO raMga
dIna vAtsala nI dInarigalladalE
hInaguNadavanigEnu gatiyO kRuShNA ||4||
paramapuruSha hariyE enna nI karapiDiyO dhoriyE
araGaLigyAdarU guruSrISaviThThala
parama pAvana ninna caraNava smarisade ||5||
Leave a Reply