Composer : Shri Rama dasaru [Bade Saheb]
ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ
ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ [ಪ]
ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ
ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು
ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ
ಕುಂಭಿನಿಯೊಳ್ ಹನುಮನಂಥ ಮತಿ ನೀಡಿ ಸಲಹು (೧)
ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು
ಪಾಲಿಸು ಜಟಾಯುನಂಥ ಶೀಲ ಮತಿಯೆನಗೆ
ವಾಲಿಗೆ ನೀನಿತ್ತ ಜಾಳುಮತಿ ನೀಡದೆ
ಸುಗ್ರೀವಗಿತ್ತ ಮೇಲುಮತಿ ನೀಡು (೨)
ಮೂಡಣಾಧಿಪನಂತೆ ಕೇಡುಮತಿ ನೀಡದೆ
ರೂಢಿಯೊಳ್ ಕರಿಯಂಥ ಗಾಢಮತಿ ನೀಡು
ನೀಡದಿರು ಶಶಿಯಂಥ ಖೋಡಿ ದುರ್ಮತಿಯನು
ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ (೩)
ದುರುಳ ಕೌರವನಂತೆ ಕಿರಿ ಮತಿಯ ಕೊಡಬೇಡ
ಪರಮ ಪಾಂಡವರಂಥ ಖರೆ ಮತಿಯ ನೀಡು
ಧರೆಯೊಳ್ ಜಯದ್ರಥನಂತೆ ನರಿಮತಿಯ ಕೊಡದಿರು
ವರ ವಿದುರನಂತೆ ಬಲು ನಿರುತಮತಿ ನೀಡು (೪)
ಮರುಳ ಮಾನವರಂತೆ ಮರವೆ ಮತಿ ಒಲ್ಲೆನೌ
ಹರಿಯ ನಿಜ ದಾಸರಂಥ ಸ್ಥಿರ ಮತಿಯ ನೀಡು
ಹರಣ ಪೋದರು ಬಿಡದೆ ವರದ ಶ್ರೀರಾಮನಡಿ
ಅರಿವಿಟ್ಟು ಭಜಿಸುವ ಅಪಾರಮತಿ ನೀಡು (೫)
viparIta mativaMte sarasvatiye ninna
kRupe bayasi Bajisuvenu saPalanenisenna [pa]
SuMBArAvaNagitta matiyenage bEDamma
guMBadiM viBIShaNage koTTa mati nIDu
kuMBakarNanigitta mati kanasinali bEDa
kuMBiniyoL hanumanaMtha mati nIDi salahu (1)
kIla mArIcagitta kILamati nIDadiru
pAlisu jaTAyunaMtha SIla matiyenage
vAlige nInitta jALumati nIDade
sugrIvagitta mElumati nIDu (2)
mUDaNAdhipanaMte kEDumati nIDade
rUDhiyoL kariyaMtha gADhamati nIDu
nIDadiru SaSiyaMtha KODi durmatiyanu
nADinali dhruvanaMte mADudaya sumati (3)
duruLa kauravanaMte kiri matiya koDabEDa
parama pAMDavaraMtha Kare matiya nIDu
dhareyoL jayadrathanaMte narimatiya koDadiru
vara viduranaMte balu nirutamati nIDu (4)
maruLa mAnavaraMte marave mati ollenau
hariya nija dAsaraMtha sthira matiya nIDu
haraNa pOdaru biDade varada SrIrAmanaDi
ariviTTu Bajisuva apAramati nIDu (5)
Leave a Reply