Teertha yatre embudu

Composer : Shri Mahipati dasaru

By Smt.Shubhalakshmi Rao

ತೀರ್ಥಯಾತ್ರೆ ಎಂಬುದು ಇದೆ ನೋಡಿ
ಅರ್ತು ಸ್ವಾಮಿ ಸದ್ಗುರು ಪಾದ ಕೂಡಿ [ಪ]

ಭ್ರೂಮಧ್ಯವೆಂಬುದಿದೆ ಕಾಶಿ
ಬ್ರಹ್ಮಸುಖ ತುಳುಕುತಿದೆ ಸೂಸಿ
ನೇಮದಿಂದಲಿ ನೋಡಲು ಧ್ಯಾನಿಸಿ
ಕರ್ಮಪಾಶ ಹೋಯಿತು ಛೇದಿಸಿ [೧]

ತ್ರೀವೇಣಿ ಸಂಗಮ ಸುಕ್ಷೇತ್ರ
ಜೀವ ಪ್ರಾಣ ಮಾಡಿತು ಪವಿತ್ರ
ದಿವ್ಯ ದೇಹವಾಯಿತು ಸರ್ವಗಾತ್ರ
ಭವಹಿಂಗಿ ಹೋಯಿತು ವಿಚಿತ್ರ [೨]

ಭ್ರಮರ ಗುಂಫ ಎಂಬುದು ಗಯಾ
ನೇಮದಿಂದ ಕಂಡವಗ ವಿಜಯ
ಪ್ರೇಮಭಾವೆಂಬುದು ಸರ್ವಕ್ರಿಯ
ವರ್ಮದೋರಿತು ಗುರು ಪುಣ್ಯೋದಯ [೩]

ಪೃಥ್ವಿ ಪರ್ಯವಣಿದೆವೆ ನೋಡಿ
ತತ್ವದೊಳೇಕತ್ವ ಸಮಗೂಡಿ
ಹಿತತ್ವವೆಂಬ ದಯ ಮಾಡಿ
ಕಥತ್ವವೆಂಬು ದೀಡಾಡಿ [೪]

ಕಣ್ಣ ದೋರಿ ಬಂತೆನಗ ತಾರ್ಕಣ್ಯ
ಕಣ್ಣು ಕಂಡುಗೆಯಿತು ಧನ್ಯಧನ್ಯ
ಚಿಣ್ಣ ಮಹಿಪತಿಗಿದೆ ಸರ್ವಪುಣ್ಯ
ಇನ್ನೊಂದು ಪಥವ್ಯಾಕೆ ಅನ್ಯ [೫]


tIrthayAtre eMbudu ide nODi
artu svAmi sadguru pAda kUDi [pa]

BrUmadhyaveMbudide kASi
brahmasuKa tuLukutide sUsi
nEmadiMdali nODalu dhyAnisi
karmapASa hOyitu CEdisi [1]

trIvENi saMgama sukShEtra
jIva prANa mADitu pavitra
divya dEhavAyitu sarvagAtra
BavahiMgi hOyitu vicitra [2]

Bramara guMPa eMbudu gayA
nEmadiMda kaMDavaga vijaya
prEmaBAveMbudu sarvakriya
varmadOritu guru puNyOdaya [3]

pRuthvi paryavaNideve nODi
tatvadoLEkatva samagUDi
hitatvaveMba daya mADi
kathatvaveMbu dIDADi [4]

kaNNa dOri baMtenaga tArkaNya
kaNNu kaMDugeyitu dhanyadhanya
ciNNa mahipatigide sarvapuNya
innoMdu pathavyAke anya [5]

Leave a Reply

Your email address will not be published. Required fields are marked *

You might also like

error: Content is protected !!