Kayo Karunananda

Composer : Shri Mahipati dasaru

By Smt.Shubhalakshmi Rao

ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ
ಕಾಯೊ ಕರುಣಿಸಿ ಎನ್ನ ಪೂರ್ಣ ನೀ
ಕಾಯೊ ಪರಮ ದಯಾನಿಧೆ ||ಪ||

ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿ ವೈರಾಗ್ಯವ
ದೃಢಗೊಳಿಸುವ ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವ
ನಡೆಸಿ ನಿತ್ಯ ವಿವೇಕ ಪಥದಲಿ ಕೂಡಿಸೊ ನಿಜ ಸುಬೋಧವ
ಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧||

ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವ
ಗುಟ್ಟಿನೊಳು ನಿಜ ಘಟ್ಟಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವ
ನಿಟಿಲ ನಯನ ಭ್ರೂಮಧ್ಯವೆರೆಸಿ ನೀ ಸಟೆಯ ಮಾಡೊ ಅವಿದ್ಯವ
ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ ||೨||

ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ
ಕಣ್ದೆರೆಸಿ ಅಣುರೇಣುದಲಿ ಪೂರ್ಣಖೂನ ದೋರೋ ಸಾಕ್ಷಾತವ
ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ
ಚಿಣ್ಣ ಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ ||೩||


kAyo karuNAnaMda SrIguru kAyo guru kRupAnidhe
kAyo karuNisi enna pUrNa nI
kAyo parama dayAnidhe ||pa||

toDisi karuNAnaMda kavacava iDiso Bakuti vairAgyava
dRuDhagoLisuva j~jAnapUrNa nI kaDiso kAmakrOdhava
naDesi nitya vivEka pathadali kUDiso nija subOdhava
biDiso BavaBaya mUladiMdali baDiso haruShAnaMdava ||1||

huTTu hoMduva baTTe murahisi koTTu kAyo satsaMgava
guTTinoLu nija GaTTagoLisi nI muTTi mudriso dRuShTAMtava
niTila nayana BrUmadhyaveresi nI saTeya mADo avidyava
niShThatana nelegoLisi kAyo nI iTTu Siradali aBayava ||2||

Binnavillade nODi ennanu dhanyagaiso nI prANava
kaNderesi aNurENudali pUrNaKUna dOrO sAkShAtava
ennoLage nijAnaMda suKadOri puNyagaiso nI jIvana
ciNNa kiMkara dAsa mahipati rakShiso saMtatava ||3||

Leave a Reply

Your email address will not be published. Required fields are marked *

You might also like

error: Content is protected !!