Composer : Shri Kanakadasaru
ಎನೇ ಮನವಿತ್ತೆ ಲಲಿತಾಂಗಿ
ಅಸಮಾನ ಗೋವಳ ಕುಲವಿಲ್ಲದವನೊಳು [ಪ]
ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||೧||
ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯನು ಕೊಂದ ಕುಲಗೆಡಿ ಗೋವಳ ||೨||
ಅತ್ತೆಗೆ ವಲ್ಲಭನದ ಬೃತ್ಯರಿಗಾಳದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು ||೩||
enE manavitte lalitAMgi
asamaana gOvaLa kulavilladavanoLu [pa]
magage maidunanAda magaLige patiyAda
magaLigaLiyanAda aLiyagaLiyanAda ||1||
magaLa magage maidunanAgi mAvana
jagavariyanu koMda kulageDi gOvaLa ||2||
attege vallaBanada bRutyarigALada
chitta olidu chenna AdikEshavanoLu ||3||
Leave a Reply