Moola ramana moorti

Composer : Shri Ananda dasaru

By Smt.Shubhalakshmi Rao

ಮೂಲ ರಾಮನ ಮೂರ್ತಿ ತಂದವ್ರೆ
ಬನ್ನಿರೆ ನೋಡ ಬನ್ನಿರೆ [ಪ]

ಭುಜಗ ಶಯನನು ಬಂದಾನೆ ಇಲ್ಲಿಗೆ
ಗಜಪತಿ ಭಂಢಾರದೊಳಗಿಂದ
ಗಜಪತಿ ಭಂಢಾರದೊಳಗಿಂದ ಬಂದಿಲ್ಲಿ
ಸುಜನರ ತತಿಯ ಪೊರೆದಾನ್ಯಾ [೧]

ಪಂಚ ರೂಪನ ವಿರಿನ್ಚಿ ಪಿತನ
ಅಂಜನ ಸುತ ಸುತ ತಂದಾನ್ಯಾ
ಅಂಜನ ಸುತ ಸುತ ತಂದು ಮೂರ್ತಿಯ
ಪಂಚ ಪ್ರಾಣಗೆ ಕೊಟ್ಟನ್ಯಾ [೨]

ತ್ರಿಜಗವಂದ್ಯನು ಪ್ರಥಮ ಪೂಜೆಯ
ಅಜಕರದಿಂದಿಲ್ಲಿ ಕೊಣ್ಡಾನ್ಯಾ
ಅಜಕರದಿಂದಿಲ್ಲಿ ಕೊಣ್ಡು ಇಂದಿಗೆ
ಸುಜಯೀಂದ್ರ ಸುತಗೆ ಒಲಿದಾನ್ಯಾ [೩]

ಎಡಬಲದಿ ಜಯ ರಾಮ ದಿಗ್ವಿಜಯ ರಾಮರು
ಸಡಗರದಿಂದಲಿ ನಿಂತಾರ್ಯ
ಸಡಗರದಿಂದಿಲ್ಲಿ ನಿಂತಾರೆ ಬದಿಯಲ್ಲಿ
ಉಡುಪಿಯ ಕೃಷ್ಣನು ನಿಂತಾನ್ಯಾ [೪]

ವೈಕುಂಠ ಇದು ಎಂದು ತೋರಲು ಸುಂದರ
ವೈಕುಂಠ ವಾಸನು ಕುಂತಾನ್ಯಾ
ವೈಕುಂಠ ವಾಸನು ಕುಂತಾ ಮೃಡ ಸಖ
ಆನಂದ ವಿಠ್ಠಲನೆ ನೋಡೇನ್ಯಾ [೫]


moola rAmana moorti taMdavre
bannire nODa bannire [pa]

bhujaga shayananu baMdAne illige
gajapati bhaMDhAradoLagiMda
gajapati bhaMDhAradoLagiMda baMdilli
sujanara tatiya poredAnyA [1]

paMcha rUpana virinchi pitana
aMjana suta suta taMdAnyA
aMjana suta suta taMdu moortiya
paMcha prANage koTTanyA [2]

trijagavaMdyanu prathama pUjeya
ajakaradiMdilli koNDAnyA
ajakaradiMdilli koNDu iMdige
sujayeeMdra sutage olidAnyA [3]

eDabaladi jaya rAma digvijaya rAmaru
saDagaradiMdali niMtArya
saDagaradiMdilli niMtAre badiyalli
uDupiya kRuShNanu niMtAnyA [4]

vaikuMTha idu eMdu tOralu suMdara
vaikuMTha vAsanu kuMtAnyA
vaikuMTha vAsanu kuMtA mRuDa sakha
AnaMda viThThalane nODEnyA [5]

Leave a Reply

Your email address will not be published. Required fields are marked *

You might also like

error: Content is protected !!