Composer : Shri Shripadarajaru
ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣು ||ಪ||
ಶಿರದಲೊಪ್ಪುವ ನೀಲ ಕುಂತಳಕೆ ಶರಣು
ಸಿರಿ ಸಹೋದರನರ್ಧ ಲಲಾಟಕೆ ಶರಣು ||ಅ.ಪ||
ಸೊಂಪು ನೋಟದ ಚೆಲುವ ಸೋಗೆ ಗಣ್ಣಿಗೆ ಶರಣು
ಸಂಪಿಗೆಯ ಕುಸುಮ ಸಮ ನಾಸಿಕಕೆ ಶರಣು
ಗುಂಪು ರತ್ನದ ಕರ್ಣ ಕುಂಡಲಗಳಿಗೆ ಶರಣು
ಇಂಪು ದರ್ವಣನಿಭ ಕಪೋಲಗಳಿಗೆ ಶರಣು ||೧||
ಕುಂದ ಕುಟ್ಮಲ ಪೋಲ್ವ ದಂತ ಪಂಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕ್ಕೆ ಶರಣು
ಚಂದ್ರಿಕಾ ನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷ ಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||
ರನ್ನ ಗಂಟೆಗಳಿರುವ ನಿನ್ನ ಕಟಿಗೆ ಶರಣು
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು
ಪುನ್ನಾಗ ಕರಗೆತ್ತಿ ದ್ವಯ ನಿತಂಬಕೆ ಶರಣು
ಚೆನ್ನಾಗಿ ಕುಣಿವ ಸಮ ಜಾನುವಿಗೆ ಶರಣು ||೪||
ಮಂಗಳ ವೈಭೋಗಂಗಳ ಅಂಘ್ರಿ ದ್ವಯಕೆ ಶರಣು
ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು
ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು
ರಂಗವಿಠ್ಠಲನ ಸರ್ವಾಂಗಕ್ಕೆ ಶರಣು ||೫||
SrIraMgaviThalana SrI mukuTake SaraNu ||pa||
Siradaloppuva nIla kuMtaLake SaraNu
siri sahOdaranardha lalATake SaraNu ||a.pa||
soMpu nOTada celuva sOge gaNNige SaraNu
saMpigeya kusuma sama nAsikake SaraNu
guMpu ratnada karNa kuMDalagaLige SaraNu
iMpu darvaNaniBa kapOlagaLige SaraNu ||1||
kuMda kuTmala pOlva daMta paMktige SaraNu
aMdavAgiruva biMbOShThakke SaraNu
caMdrikA niBa muddu maMdahAsake SaraNu
naMdagOpana muddu kaMdanige SaraNu ||2||
abjanABana divya kaMbu kaMThake SaraNu
abjamuKiyiruva vakSha sthaLake SaraNu
kubjeya DoMka tiddida BujagaLige SaraNu
abjajAsanana petta nABige SaraNu ||3||
ranna gaMTegaLiruva ninna kaTige SaraNu
ponna kadaLI pOlva toDegaLige SaraNu
punnAga karagetti dvaya nitaMbake SaraNu
cennAgi kuNiva sama jAnuvige SaraNu ||4||
maMgaLa vaiBOgaMgaLa aMGri dvayake SaraNu
tuMga kucagaLa piDida karagaLige SaraNu
poMgoLalanUduvA aMguligaLige SaraNu
raMgaviThThalana sarvAMgakke SaraNu ||5||
Leave a Reply