Composer : Shri Indiresha ankita
ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ||ಪ||
ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರ
ಪಾರ್ಥಸಾರಥಿ ಹರಿಗೆ ||ಅ.ಪ.||
ನೀರೊಳು ಪೊಕ್ಕವಗೆ ಕಡಲೊಳು
ಭಾರವ ಪೊತ್ತವಗೆ
ಮೂರು ಪಾದದಿ ಸರ್ವ ಧಾರುಣಿ ಅಳೆಯುತ ಧೀರ
ಬಲಿಯ ಮನೆ ದ್ವಾರ ಕಾಯ್ದವಗೆ [೧]
ಕ್ಷತ್ರಿಯರ ಗೆಲಿದವಗೆ ಗಾರ್ಜಿತ
ಸತ್ರವ ಕಾಯ್ದವಗೆ
ಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದ
ಬತ್ತಲೆ ಕುದುರಿಯ ಹತ್ತಿ ಮೆರೆದವಗೆ [೨]
ಸೃಷ್ಟಿಯು ಇಲ್ಲದವಗೆ ಜಗವನು
ಸೃಷ್ಟಿ ಪಾಲಿಪಗೆ
ಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-
ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ [೩]
ನಂದ ಗೋಕುಲದಲ್ಲೆ ಬೆಳೆಯುವ
ಮಂದಜಾಕ್ಷಿಯರಲ್ಲೆ
ಒಂದೊಂದು ಆಟಗಳಾಡಿ ಸುಖವನಿತ್ತ
ನಂದ ಬಾಲಕನಾದ ಇಂದಿರೇಶನಿಗೆ [೪]
Aruti beLaguvenu mAdhavagAruti beLaguvenu ||pa||
Aruti beLaguve mAruti priya yadu-kIrutikara
pArthasArathi harige ||a.pa.||
nIroLu pokkavage kaDaloLu
BArava pottavage
mUru pAdadi sarva dhAruNi aLeyuta dhIra
baliya mane dvAra kAydavage [1]
kShatriyara gelidavage gArjita
satrava kAydavage
satya rukmiNi muKya patniyarALida
battale kuduriya hatti meredavage [2]
sRuShTiyu illadavage jagavanu
sRuShTi pAlipage
baTTiliMdalE giri beTTanettida-
BIShTa nIDalu suKa puShpavaMditage [3]
naMda gOkuladalle beLeyuva
maMdajAkShiyaralle
oMdoMdu ATagaLADi suKavanitta
naMda bAlakanAda iMdirESanige [4]
Leave a Reply