Composer : Shri Purandara dasaru
ಶ್ರವಣದಿಂ ಹೋಯಿತು ಬ್ರಹ್ಮಹತ್ಯಾ ಪಾಪವು
ಸ್ಮರಣೆಯಿಂ ಹೋಯಿತು ಸೇರಿದ್ದ ಪಾಪವು
ಎಲ್ಲಿದ್ದ ಅಜಾಮಿಳ ಎಲ್ಲಿತ್ತು ವೈಕುಂಠ
ಕೊಟ್ಟಾತನೆ ಬಲ್ಲ ಪುರಂದರ ವಿಠಲ ||
ಏನ್ ಸವಿ ಏನ್ ಸವಿ ಹರಿನಾಮ
ಮನಸ್ಸು ತೃಪ್ತಿಯಾಗ್ವದು ಪ್ರೇಮ ||ಪ||
ಜನರಿಗೆ ತಿಳಿಯದು ಇದರ್ ಮಹಿಮ
ಘನ್ನ ಮಹಿಮ ವಿಷ್ಣು ಸಾಸಿರ್ ನಾಮ [ಅ.ಪ]
ಅಮೃತದ ರುಚಿಯುಂಡ ವಾಲ್ಮೀಕಿ |
ಸ್ಮರಿಸುವ ನರಹರಿ ನಮ್ಮ ತನಕ
ಪ್ರೇಮದಿಂದ ಹರಿಭಕ್ತ ಪುಂಡಲೀಕ
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ ||೧||
ಪ್ರಹ್ಲಾದಗೊಲಿದ ಹರಿನಾಮದಿಂದ |
ಅಲಲಲಲಲ ಧ್ರುವ ರಾಜೇಂದ್ರ
ಫಲ್ಗುಣಗೆ ಫಲಿಸಿತು ಹೆಚ್ಚೆಂದು
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ… ||೨||
ಹರಿ ಹರಿ ಹರಿಸ್ಮರಣೆ ಮಾಡಬೇಕು |
ಹರ ಹರ ಹರ ಎಂದು ಅನ್ನಬೇಕು
ವೇದಗಳು ಸಾರುತಿವೆ ಇವು ನಾಲ್ಕು
ಪುರಂದರವಿಠಲನೆ ಸರ್ವ ಜಗಕೂ ||೩||
SravaNadiM hOyitu brahmahatyA pApavu
smaraNeyiM hOyitu sEridda pApavu
ellidda ajAmiLa ellittu vaikuMTha
koTTAtane balla puraMdara viThala ||
En savi En savi harinAma
manassu tRuptiyAgvadu prEma ||pa||
janarige tiLiyadu idar mahima
Ganna mahima viShNu sAsir nAma [a.pa]
amRutada ruchiyuMDa vAlmIki |
smarisuva narahari namma tanaka
prEmadiMda haribhakta puMDalIka
rAm rAm rAm rAm sarva jagakU ||1||
prahlAdagolida harinAmadiMda |
alalalalala dhruva rAjEMdra
PalguNage Palisitu hecceMdu
rAm rAm rAm rAm sarva jagakU… ||2||
hari hari harismaraNe mADabEku |
hara hara hara eMdu annabEku
vEdagaLu sArutive ivu nAlku
puraMdaraviThalane sarva jagakU ||3||
Leave a Reply