Bhakutiya beduve

Composer : Shri Uragadri vittala [before Ankita pradana]

By Smt.Shubhalakshmi Rao

ಭಕುತಿಯಾ ಬೇಡುವೇ
ಮುಕುತರೊಡೆಯ ನಿನ್ನ ಪದಪಂಕಜದೊಳು ||ಪ||

ಬಾರಿಬಾರಿಗೆ ನಿನ್ನ ನಾಮವ ನಾ
ಸಾರಿಸ್ಮರಿಸಲು ದಾರಿಯ ಕಾಣೆನೋ
ಮಾರಮಣನೆ ದಯ ತೋರದಿರಲು
ಇನ್ಯಾರಿಗೆ ಮೊರೆಯಿಡಲಯ್ಯಾ ಶ್ರೀ ಹರೇ ||೧||

ಘನ್ನದುರಿತಗಳಿಂದ ಹಿಂದೆ ನಾ
ಬನ್ನಪಟ್ಟು ಬಹು ಖಿನ್ನನಾಗಿಹೆ
ಸನ್ನುತಾಂಗ ಶ್ರೀನಲ್ಲನೆ ನೀ
ಇನ್ನು ಮನ್ನಿಸದಿರೆ ಇನ್ಯಾರಿಗೆ ಪೆಳಲೋ ||೨||

ಮಂಕುಮತಿಯಾಗಿದ್ದರೆನ್ನ ಹೃ
ತ್ಪಂಕಜದೊಲಗೆ ಅಕಳಂಕನಾಗಿಹೆ
ಶಂಕೆ ಏಕೋ ನಿನ್ನ ಕಿಂಕರನಲ್ಲವೇ
ಸಂಕಟ ಹರಿಸೋ ಶ್ರೀ ವೆಂಕಟೇಶನೆ ||೩||


BakutiyA bEDuvE
mukutaroDeya ninna padapaMkajadoLu ||pa||

bAribArige ninna nAmava nA
sArismarisalu dAriya kANenO
mAramaNane daya tOradiralu
inyArige moreyiDalayyA SrI harE ||1||

GannaduritagaLiMda hiMde nA
bannapaTTu bahu KinnanAgihe
sannutAMga SrInallane nI
innu mannisadire inyArige peLalO ||2||

maMkumatiyAgiddarenna hRu
tpaMkajadolage akaLaMkanAgihe
SaMke EkO ninna kiMkaranallavE
saMkaTa harisO SrI veMkaTESane ||3||

Leave a Reply

Your email address will not be published. Required fields are marked *

You might also like

error: Content is protected !!