Composer : Shri Kanakadasaru
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ || ಪ ||
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ || ಅ ಪ ||
ತಾಯಿ ತಂದೆಯ ಬಿಟ್ಟು ತಪವ ಮಾಡಲಿ ಬಹುದು |
ದಾಯಾದಿ ಬಂಧುಗಳ ಬಿಡಲು ಬಹುದು ||
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು |
ಕಾಯಜಪಿತ ನಿನ್ನ ಅಡಿಯ ಬಿಡಲಾಗದೊ || ೧ ||
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು |
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು ||
ಮಡದಿ ಮಕ್ಕಳ ಕಡೆಗೆ ತೊಲಗಿಸಿ ಬಿಡಬಹುದು |
ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದೊ || ೨ ||
ಪ್ರಾಣವನು ಪರರಿಗೆ ಬೇಡಿದರೆತ್ತಿ ಕೊಡಬಹುದು |
ಮಾನಾಭಿ ಮಾನವನು ತಗ್ಗಿಸ ಬಹುದು ||
ಪ್ರಾಣನಾಯಕನಾದ ಆದಿಕೇಶವರಾಯ |
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ || ೩ ||
toredu jIvisabahude hari ninna caraNagaLa || pa ||
baride mAtEkinnu aritu pELuvenayya || a pa ||
tAyi taMdeya biTTu tapava mADali bahudu |
dAyAdi baMdhugaLa biDalu bahudu ||
rAya tA munidare rAjyavane biDabahudu |
kAyajapita ninna aDiya biDalAgado || 1 ||
oDalu hasiyalu annavilladale irabahudu |
paDeda kShEtrava biTTu horaDabahudu ||
maDadi makkaLa kaDege tolagisi biDabahudu |
kaDaloDeya nimmaDiya ghaLige biDalAgado || 2 ||
prANavanu pararige bEDidaretti koDabahudu |
mAnAbhi mAnavanu taggisa bahudu ||
prANanAyakanAda AdikESavarAya |
jANa SrIkRuShNa ninnaDiya biDalAgado || 3 ||
Leave a Reply