Composer : Shri Kanakadasaru

ತನು ನಿನ್ನದು ಜೀವನ ನಿನ್ನದು |
ಅನುದಿನದಲಿ ಬಾಹೊ ಸುಖ ದುಃಖ ನಿನ್ನದೈಯ್ಯ
ಸುಖ ದುಃಖ ನಿನ್ನದಯ್ಯ [ಅ.ಪ]

ಸವಿ ನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿ ಕೊಟ್ಟು ಕೇಳುವ ಕಥೆ ನಿನ್ನದೊ [೧]

ನವ ಯೌವ್ವನ ಮೊಹನಾಂಗೆಯರ ರೂಪವ
ಎವೆ ಇಕ್ಕದೆ ನೊಳ್ಪ ಆ ನೋಟ ನಿನ್ನದಯ್ಯ [೨]

ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ
ಬಿಡದೆ ಲೇಪಿಸಿ ಕೊಳ್ವ ಈ ದೇಹ ನಿನ್ನದೊ [೩]

ಷಡು ರಸದ್ದನ್ನಕ್ಕೆ ನಲಿದಾಡುವ ಜಿಹ್ವೆ
ಕಡು ರುಚಿಗೊಂಡರೆ ಆ ರುಚಿ ನಿನ್ನದಯ್ಯ [೪]

ಮಾಯ ಪಾಶದ ಬಲೆಯೊಳು ಸಿಕ್ಕಿ ತೊಳಲುವ
ಕಾಯ ಪಂಚೇಂದ್ರಿಯಂಗಳು ನಿನ್ನದು [೫]

ಕಾಯಜ ಪಿತ ಕಾಗಿನೆಲೆ ಆದಿಕೇಶವ ರಾಯ
ನೀನಲ್ಲದೆ ನರರು ಸ್ವತಂತ್ರರೇ [೬]


tanu ninnadu jIvana ninnadu |
anudinadali bAho suKa duHKa ninnadaiyya
suKa duHKa ninnadayya [a.pa]

savi nuDi vEda purANa SAstraMgaLa
kivi koTTu kELuva kathe ninnado [1]

nava yauvvana mohanAMgeyara rUpava
eve ikkade noLpa A nOTa ninnadayya [2]

oDagUDi gaMdha kastUri parimaLavella
biDade lEpisi koLva I dEha ninnado [3]

ShaDu rasaddannakke nalidADuva jihve
kaDu rucigoMDare A ruci ninnadayya [4]

mAya pASada baleyoLu sikki toLaluva
kAya paMcEMdriyaMgaLu ninnadu [5]

kAyaja pita kAginele AdikESava rAya
nInallade nararu svataMtrarE [6]

Leave a Reply

Your email address will not be published. Required fields are marked *

You might also like

error: Content is protected !!