Composer : Shri Kanakadasaru
ಪುಟ್ಟ ದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |
ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |೧|
ಸುಡಗಾಡು ದಾಸ ನಾನಲ್ಲ | ಕಷ್ಟದಾಸ ನಾನಲ್ಲ |
ಕೊಟ್ಟ ದಾಸ ನಾನಲ್ಲ | ಹೊಟ್ಟೆ ದಾಸ ನಾನಲ್ಲ |೨|
ಇಟ್ಟಿಗೆ ದಾಸ ನಾನಲ್ಲ | ಶಿಷ್ಟ ದಾಸ ನಾನಲ್ಲ |
ನಿಷ್ಟ ದಾಸ ನಾನಲ್ಲ | ಭ್ರಷ್ಟ ದಾಸ ನಾನಲ್ಲ |೩|
ಶ್ರೇಷ್ಟ ದಾಸ ನಾನಲ್ಲ | ವಿತ್ತ ದಾಸ ನಾನಲ್ಲ |
ಹುತ್ತ ದಾಸ ನಾನಲ್ಲ |೪|
ನಾನು ಈ ಷೊಡಶ ದಾಸರುಗಳ
ದಾಸನು ದಾಸರ ದಾಸಿಯರ
ಮನೆಯ ಮಂಕು ದಾಸರ ಮನೆಯ
ಶಂಕು ದಾಸ ಬಾಡದಾದಿ ಕೇಶವ |೫|
puTTa dAsanu nAnalla | diTTa dAsanu nAnalla |
siTTu dAsanu nAnalla | suTTa dAsanu nAnalla |1|
suDagADu dAsa nAnalla | kaShTadAsa nAnalla |
koTTa dAsa nAnalla | hoTTe dAsa nAnalla |2|
iTTige dAsa nAnalla | SiShTa dAsa nAnalla |
niShTa dAsa nAnalla | BraShTa dAsa nAnalla |3|
SrEShTa dAsa nAnalla | vitta dAsa nAnalla |
hutta dAsa nAnalla |4|
nAnu I ShoDaSa dAsarugaLa
dAsanu dAsara dAsiyara
maneya maMku dAsara maneya
SaMku dAsa bADadAdi kESava |5|
Leave a Reply