Composer : Shri Kanakadasaru
ನೀನುಪೇಕ್ಷೆಯ ಮಾಡೆ ಬೇರೆ ಗತಿ
ಯಾರೆನಗೆ, ನಿಗಮಗೋಚರ ಮುಕುಂದ |
ಗಾನರಸಲೋಲ ಆಗಮಶೀಲ
ಭಕ್ತ ಪರಿಪಾಲ ಸನ್ನುತ ಗೋಪಾಲ ಬಾಲ ||ಪ||
ಜಪತಪಾನುಷ್ಠಾನ ಜಪಿತನೆಂದೆನಿಸುವೆನೆ
ಜಾಣತನವೆನ್ನೊಳಿಲ್ಲ,
ಗುಪಿತದಿಂ ದಾನ ಧರ್ಮವನು ನಾ ಮಾಡುವೆನೆ
ಅಪರಿಮಿತ ಧನವು ಇಲ್ಲ , ಹರಿಯೇ ||೧||
ಆನೆನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲು
ಮೌನದಿಂ ಬಂದು ಕಾಯ್ದೆ,
ಹೇ ನಾರಗಾ ಎಂದ ಅಜಮಿಳಗೆ ಮುಕ್ತಿಯನು
ನೀನೊಲಿದು ಕೃಪೆ ಮಾಡಿದೆ, ಹರಿಯೇ ||೨||
ಹಾನಿಯಿಲ್ಲದ ಪದವಿ ನೀನಿತ್ತು ಧೃವಗೆ
ಕಡು ದೀನತ್ವವನು ಬಿಡಿಸಿದೆ,
ದಾನವಂತಕ ಸಕಲ ದಿವಿಜ ಮುನಿವಂದ್ಯ
ಅಭಿಮಾನಿ ಎನ್ನನು ಸಲಹದೆ , ಬರಿದೆ ||೩||
ಈಷಣತ್ರಯದ ಬಯಲಾಸೆಯಲಿ ಭ್ರಮೆಗೊಂಡು
ಬೇಸರದಿ ಮನದಿ ನೊಂದು,
ಹೇಸಿಕೆಯ ಸಂಸಾರ ಮಾಯಕ್ಕೆ ಸಿಲುಕಿ ನಾ
ಘಾಸಿ ಪಡಲಾರೆನಿಂದು, ಎಂದು ||೪||
ವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದು
ಆಸೆ ಪಡುತಿಹೆನು ಇಂದು
ದಾಸನೆಂದೆನಿಸಿ ಡಂಗುರ ಹೊಯ್ಸಿ
ಬಡದಾದಿಕೇಶವನೆ ಕರುಣಿಸಯ್ಯ , ಬಂದು ||೩||
nInupEkSheya mADe bEre gati
yArenage, nigamagOcara mukuMda |
gAnarasalOla AgamaSIla
Bakta paripAla sannuta gOpAla bAla ||pa||
japatapAnuShThAna japitaneMdenisuvene
jANatanavennoLilla,
gupitadiM dAna dharmavanu nA mADuvene
aparimita dhanavu illa , hariyE ||1||
AnenegaLige siluki arebAyi biDutiralu
maunadiM baMdu kAyde,
hE nAragA eMda ajamiLage muktiyanu
nInolidu kRupe mADide, hariyE ||2||
hAniyillada padavi neenittu dhRuvage
kaDu dInatvavanu biDiside,
dAnavaMtaka sakala divija munivaMdya
abhimAni ennanu salahade , baride ||3||
IShaNatrayada bayalAseyali bhramegoMDu
bEsaradi manadi noMdu,
hEsikeya saMsAra mAyakke siluki nA
GAsi paDalAreniMdu, eMdu ||4||
vAsudEvane ninna poMdi badukuveneMdu
Ase paDutihenu iMdu
dAsaneMdenisi DaMgura hoysi
baDadAdikESavane karuNisayya , baMdu ||3||
Leave a Reply