Composer : Shri Kanakadasaru
ನಾನು ನೀನು ಎನ್ನದಿರೊ ಹೀನ ಮಾನವ || ಪ ||
ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ || ಅ ಪ ||
ಹೆಣ್ಣು ಹೊನ್ನು ಮಣ್ಣು ಮೂರು ನಿನ್ನವೇನೆಲೊ |
ಅನ್ನದಿಂದ ಬಂದ ಕಾಯ ನಿನ್ನದೇನೆಲೊ ||
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ |
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ || ೧ ||
ಹಲವು ಜನ್ಮದಿಂದ ಬಂದಿರುವನು ನೀನೆಲೊ |
ಮಲದ ಗರ್ಭದಲಿ ನಿಂದಿರುವನು ನೀನೆಲೊ ||
ಜಲದ ದಾರಿಯಲಿ ಬಂದಿರುವನು ನೀನೆಲೊ |
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೊ || ೨ ||
ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ |
ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ ||
ಕೀಲುಜಡಿದ ಮರದ ಬೊಂಬೆ ನಿನ್ನದೇನೆಲೊ |
ಲೋಲ ಆದಿಕೇಶವನ ಭಕ್ತನಾಗೆಲೊ || ೩ ||
nAnu nInu ennadiro hIna mAnava || pa ||
j~jAnadiMda ninna nIne tiLidu nODelo prANi || a pa ||
heNNu honnu maNNu mUru ninnavEnelo |
annadiMda baMda kAya ninnadEnelo ||
karNadiMda baruva GOSha ninnadEnelo |
ninna biTTu hOha jIva ninnadEnelo || 1 ||
halavu janmadiMda baMdiruvanu nInelo |
malada garBadali niMdiruvanu nInelo ||
jalada dAriyali baMdiruvanu nInelo |
kulavu jAti gOtragaLuLLavanu nInelo || 2 ||
kAla karma SIla nEma ninnadEnelo |
jAlavidye bayalamAye ninnadEnelo ||
kIlujaDida marada boMbe ninnadEnelo |
lOla AdikESavana BaktanAgelo || 3 ||
Leave a Reply