Lali Pavana Charana

Composer : Shri Kanakadasaru

By Smt.Shubhalakshmi Rao

ಲಾಲಿ ಪಾವನ ಚರಣ ಲಾಲಿ ಅಘಹರಣ
ಲಾಲಿ ವೆಂಕಟರಮಣ ಲಲಿತ ಕಲ್ಯಾಣ ||ಪ||

ವನಜಾಕ್ಷ ಮಾಧವ ವಸುದೇವ ತನಯ
ಸನಕಾದಿ ಮುನಿವಂದ್ಯ ಸಾಧುಜನಪ್ರಿಯ
ಇನಕೋಟಿಶತತೇಜ ಮುನಿಕಲ್ಪ ಭೂಜ
ಕನಕಾದ್ರಿ ನಿಲಯ ವೆಂಕಟರಾಯ ಜೀಯ ||೧||

ಜಗದೇಕನಾಯಕ ಜಲಜದಳನೇತ್ರ
ಖಗರಾಜ ವಾಹನ ಕಲ್ಯಾಣ ಚರಿತ
ಸಗರತನಯಾರ್ಚಿತ ಸನಕಾದಿ ವಿನುತ
ರಘುವಂಶಕುಲತಿಲಕ ರಮಣೀಯಗಾತ್ರ ||೨||

ನಂದಗೋಪ ಕುಮಾರ ನವನೀತ ಚೋರ
ಮಂದಾಕಿನೀ ಜನಕ ಮೋಹನಾಕಾರ
ಇಂದುಧರಸತಿ ವಿನುತ ವಿಶ್ವಸಂಚಾರ
ನಂದಗೋವಿಂದ ಮುಚುಕುಂದ ನುತಸಾರ ||೩||

ಪಕ್ಷಿವಾಹನ ವಿಷ್ಣುಪಾಹಿ ಪರಮೇಶ
ರಕ್ಷ ಕೌಸ್ತುಭಭೂಷ ವೈಕುಂಠವಾಸ
ಅಕ್ಷಯ ಫಲದಾತ ಅಖಿಳ ಲೋಕೇಶ
ಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ ||೪||

ನರಮೃಗಾಕಾರಿ ಹಿರಣ್ಯಕನ ವೈರಿ
ಕರಿರಾಜ ರಕ್ಷಕ ಕಾರುಣ್ಯಮೂರ್ತಿ
ಹರಿ ಆದಿಕೇಶವ ಗುರು ಅಪ್ರಮೇಯ
ಶ್ರೀಧರ ಶೇಷಗಿರಿ ವರ ತಿಮ್ಮರಾಯ ||೫||


lAli pAvana caraNa lAli aGaharaNa
lAli veMkaTaramaNa lalita kalyANa ||pa||

vanajAkSha mAdhava vasudEva tanaya
sanakAdi munivaMdya sAdhujanapriya
inakOTiSatatEja munikalpa BUja
kanakAdri nilaya veMkaTarAya jIya ||1||

jagadEkanAyaka jalajadaLanEtra
KagarAja vAhana kalyANa carita
sagaratanayArcita sanakAdi vinuta
raGuvaMSakulatilaka ramaNIyagAtra ||2||

naMdagOpa kumAra navanIta cOra
maMdAkinI janaka mOhanAkAra
iMdudharasati vinuta viSvasaMcAra
naMdagOviMda mucukuMda nutasAra ||3||

pakShivAhana viShNupAhi paramESa
rakSha kaustuBaBUSha vaikuMThavAsa
akShaya PaladAta aKiLa lOkESa
lakShaNa paripUrNa lakShmiprANESa ||4||

naramRugAkAri hiraNyakana vairi
karirAja rakShaka kAruNyamUrti
hari AdikESava guru apramEya
SrIdhara SEShagiri vara timmarAya ||5||

Leave a Reply

Your email address will not be published. Required fields are marked *

You might also like

error: Content is protected !!